ವಿವಿಧ ಬೇಡಿಕೆ ಈಡೇರಿಕೆಗೆ ಪ್ರತ್ಯೇಕ ಪ್ರತಿಭಟನೆ
Team Udayavani, Oct 17, 2017, 12:57 PM IST
ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಹಾಗೂ ವೀರ ಮಡಿವಾಳ ಮಹಾಜನ ಸೇವಾ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ಶೀಘ್ರವೇ ರಾಜೀನಾಮೆ ನೀಡಿ: ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡಿರುವ ವಿಷಯ ಅಸಲಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜಾÂಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ನಗರದ ನ್ಯಾಯಾಲಯದ ಎದುರಿನ ಗಾಂಧಿಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಹೈಕಮಾಂಡ್‌ಗೆ ಕಪ್ಪಕಾಣಿಕೆ ನೀಡಿರುವ ಕುರಿತ ಯಡಿಯೂರಪ್ಪ ಅವರು ಅನಂತಕುಮಾರ್, ನಡೆಸಿರುವ ಸಂಭಾಷಣೆ ಅಸಲಿ ಎಂದು ವಿಧಿವಿಜಾnನ ಪ್ರಯೋಗಾಲಯ ದೃಢಪಡಿಸಿದೆ. ಹೀಗಾಗಿ ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮೊದಲು ತಮ್ಮ ಪಕ್ಷದಲ್ಲಿರುವ ಭ್ರಷ್ಟಾಚಾರವನ್ನು ಹೋಗಲಾಡಿಸಬೇಕಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಹಾಗೂ ಅನಂತ್‌ಕುಮಾರ್‌ರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.
ಅಲ್ಲದೆ ಕಪ್ಪ ಕಾಣಿಕೆ ನೀಡಿದ ಆರೋಪ ಹೊತ್ತಿರುವ ಈ ಇಬ್ಬರು ನಾಯಕರನ್ನು ಪಕ್ಷದಿಂದ ಉಚ್ಛಾಟಿಸಬೇಕಿದ್ದು, ಈ ಬಗ್ಗೆ ಮುಂದೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಮೋಸಿನ್‌ಖಾನ್, ತಿ.ನರಸೀಪುರ ಕ್ಷೇತ್ರದ ಅಧ್ಯಕ್ಷ ಟಿ.ಎಸ್.ಲೋಕೇಶ್, ಸಿದ್ಧರಾಮೇಗೌಡ, ಕೃಷ್ಣೇಗೌಡ, ಮಹದೇವು, ಹಿನಕಲ್ ಮಂಜು ಮತ್ತಿತರರಿದ್ದರು.
ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಿ: ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬುದು ಸೇರಿದಂತೆ ಸಮುದಾಯ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶ್ರೀವೀರ ಮಡಿವಾಳ ಮಹಾಜನ ಸೇವಾ ಸಂಘದ ಪದಾಧಿಕಾರಿಗಳು ನಗರದ ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸಿದರು. ಸಮುದಾಯದ ಜಿಲ್ಲಾ ಸಂಘದ ಸಮುದಾಯ ಭವನಕ್ಕೆ ಹಣ ನೀಡಬೇಕು, ನರ್ಮ್ ಯೋಜನೆಯಡಿ ದೋಬಿಘಾಟ್ ಸದಸ್ಯರಿಗೆ ವಸತಿ ಕಲ್ಪಿಸಬೇಕು,
ಸರ್ಕಾರಿ ನೌಕರಿಯಲ್ಲಿರುವ ಸಮುದಾಯದವರಿಗೆ ಸೇವೆಗೆ ಅನುಗುಣವಾಗಿ ಬಡ್ತಿ ನೀಡಬೇಕು, ಯಾದವಗಿರಿ, ಗೊಬ್ಬಳಿಕಟ್ಟೆ, ಕುಕ್ಕರಹಳ್ಳಿಕೆರೆ ಮೊದಲಾದ ದೋಬಿಘಾಟ್‌ಗಳಿಗೆ ಕಾಂಪೌಂಡ್ ನಿರ್ಮಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಡಿವಾಳ ಹೋರಾಟ ಸಮಿತಿ ರಾಜಾಧ್ಯಕ್ಷ ಬಸವರಾಜ, ಇಟ್ಟಿಗೂಡಿನ ಅಧ್ಯಕ್ಷ ಬೈರಪ್ಪ, ಕೆಸರೆ ದೋಭಿಘಾಟ್ ಗೌರವಾಧ್ಯಕ್ಷ ಎನ್.ಜಗದೀಶ್ ಕುಮಾರ್, ಮಡಿವಾಳ ಮಹಿಳಾ ಸಂಘದ ಅಧ್ಯಕ್ಷೆ ಭುವನೇಶ್ವರಿ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
New Policy: ಜಾನಪದ ಕ್ರೀಡೆ ಕಂಬಳಕ್ಕೆ ಅಂತಿಮ ನಿಯಮಾವಳಿ ಸಿದ್ಧ
Horosocpe: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಲಾಭ
Statue Of Unity: ದೇಶ ವಿಭಜಿಸಲು ಕೆಲವು ಶಕ್ತಿಗಳ ಯತ್ನ: ಪ್ರಧಾನಿ ನರೇಂದ್ರ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.