ಪಡಿತರದಾರರಿಗೆ ಸರ್ವರ್ ಗುಮ್ಮ
Team Udayavani, Feb 18, 2018, 1:14 PM IST
ಹುಣಸೂರು: ತಾಲೂಕಿನಲ್ಲಿರುವ 108 ನ್ಯಾಯಾಬೆಲೆ ಅಂಗಡಿಗಳಲ್ಲೂ ಸರಿಯಾದ ಇಂಟರ್ ನೆಟ್ ಸಂಪರ್ಕ ಸಿಗದೆ ಪಡಿತರ ಪಡೆಯಲು ಫಲಾನುಭವಿಗಳು ಪರದಾಡುತ್ತಿದ್ದಾರೆ. ಆದರೆ, ಸಂಬಂಧಪಟ್ಟವರು ಮಾತ್ರ ಇದು ಸರ್ವರ್ ಪ್ರಾಬ್ಲಿಮ್ ಎಂದು ಕೈಚೆಲ್ಲುತ್ತಿದ್ದಾರೆ. ಹುಣಸೂರು ತಾಲೂಕಿನಲ್ಲಿ ಈ ಹಿಂದೆ 63 ಸಾವಿರ ಕಾರ್ಡ್ ದಾರರಿದ್ದರು.
ಇದರೊಟ್ಟಿಗೆ ವರ್ಷದಿಂದೀಚೆಗೆ 10 ಸಾವಿರದಷ್ಟು ಹೊಸ ಕಾರ್ಡ್ ವಿತರಿಸಲಾಗಿದೆ. ಎಲ್ಲ ನ್ಯಾಯಾಬೆಲೆ ಅಂಗಡಿಗಳ ಮುಂದೆ ದಿನವಿಡೀ ಕೈನಿಂತರೂ ಪಡಿತರ ಪಡೆಯಲಾರದೆ ಹಿಡಿ ಶಾಪಹಾಕಿ ವಾಪಾಸ್ ಮರಳುವಂತಾಗಿದೆ. ತಾಲೂಕಿನ 108 ನ್ಯಾಯಬೆಲೆ ಅಂಗಡಿಗಳಲ್ಲೂ ಇದೇ ಸ್ಥಿತಿ ಎದುರಾಗಿದ್ದು, ಪಡಿತರಕ್ಕಾಗಿಯೇ ದಿನವಿಡೀ ಕಾಯಬೇಕಾದ ಹೀನಾಯ ಸ್ಥಿತಿಗೆ ತಲುಪಿದೆ.
ಕಾಡುವ ಸರ್ವರ್: ಈ ಹಿಂದೆ ಬುಕ್‌ಲೆಟ್‌ನಲ್ಲಿ ಸಹಿ ಮಾಡಿ ಪಡಿತರ ಪಡೆಯುತ್ತಿದ್ದರಾದರು. ಆಹಾರ ಸಚಿವ ಯು.ಟಿ.ಖಾದರ್ ಅಕ್ರಮ ತಡೆಯಲು ಕಳೆದೆರಡು ವರ್ಷಗಳಿಂದ ಪ್ರತಿ ನ್ಯಾಯಾಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಸಿಸ್ಟಮ್ ಅಳವಡಿಸಿ ಆನ್‌ಲೈನ್‌ನಲ್ಲಿ ಕುಟುಂಬದವರ ವಿವರ ಬಂದ ನಂತರವೇ ಪಡಿತರ ನೀಡುವ ವ್ಯವಸ್ಥೆ ಜಾರಿ ಮಾಗೊಳಿಸಿದ್ದಾರೆ. ಆದರೆ ಸರ್ವರ್ ಪ್ರಾಬ್ಲಿಮ್‌ನಿಂದಾಗಿ ಫಲಾನುಭವಿಗಳು ಪಡಿತರ ಪಡೆಯಲು ಕೆಲವೊಮ್ಮೆ ಇಡೀ ದಿನ ಕಾಯಬೇಕಾಗಿದೆ.
ಪಡಿತರಕ್ಕಾಗಿ ಕೂಲಿಗೂ ಪೆಟ್ಟು: ಸರಕಾರವೇನೋ ಅತೀ ಕಡಿಮೆ ದರದಲ್ಲಿ ಪಡಿತರ ನೀಡುತ್ತಿದ್ದರೂ ಅದನ್ನು ಪಡೆಯಲು ದಿನವಿಡೀ ಹರಸಾಹಸಪಟ್ಟು ಪಡೆಯುವಂತಾಗಿದೆ. ಶೇ.90ಕ್ಕೂ ಹೆಚ್ಚು ಮಂದಿ ಕೃಷಿ-ಕೂಲಿ ಕಾರ್ಮಿಕರೇ ಇದ್ದು, ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಹೋಗಬೇಕಿದೆ. ತಿಂಗಳಲ್ಲಿ ಮೂರ್‍ನಾಲ್ಕು ದಿನ ಅಕ್ಕಿ-ಬೇಳೆ ಪಡೆಯಲು ಕಾಯಬೇಕಿದೆ. ಇದರಿಂದಾಗಿ ಕಡಿಮೆ ಬೆಲೆಯಲ್ಲಿ ಅಕ್ಕಿ ನೀಡಿದರೂ ಪಡೆಯುವುದೇ ದೊಡ್ಡ ಹರ ಸಾಹಸವಾಗಿದೆ ಎನ್ನುತ್ತಾರೆ ಪಡಿತರದಾರರು.
73 ಸಾವಿರ ಕಾರ್ಡ್: ತಾಲೂಕಿನಲ್ಲಿ ಹಿಂದೆ 63 ಸಾವಿರ ಕಾರ್ಡ್ ಇತ್ತು. ಇದೀಗ ಹತ್ತು ಸಾವಿರ ಹೊಸ ಕಾರ್ಡ್‌ವಿತರಣೆಯಾಗಿದೆ. ಒಟ್ಟು 73 ಸಾವಿರ ಕುಟುಂಬ ಬಿಪಿಎಲ್ ಕಾರ್ಡ್ ಹೊಂದಿದೆ. ಬಹುತೇಕ ಕುಟುಂಬಗಳು ಅಕ್ಕಪಕ್ಕದ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಪಡೆಯಬೇಕಿದೆ. ಪಡಿತರ ಪಡೆಯಲು ದಿನಗಟ್ಟಲೇ ಕೂಲಿ ಬಿಟ್ಟು ಅಲೆಯಬೇಕಿದೆ.
ಹಾಡಿಲಿ ಸರ್ವರ್ ಸಮಸ್ಯೆಯೇ ಇಲ್ಲ?: ಗಿರಿಜನ ಹಾಡಿಗಳಲ್ಲಿ ಸರ್ವರ್ ಸಂಪರ್ಕ ಸಿಗುವುದಿಲ್ಲವೆಂಬ ಮುನ್ಸೂಚನೆಯಿಂದ ತಾಲೂಕಿನ 8 ಹಾಡಿಗಳಲ್ಲಿ ಹಿಂದಿನ ವ್ಯವಸ್ಥೆಯಂತೆ ಸಹಿ ಪಡೆದು ಕಾರ್ಡಿಗೆ ಪಡಿತರ ನೀಡಲಾಗುತ್ತಿದೆ. ಇಲ್ಯಾವ ಸರ್ವರ್ ಸಮಸ್ಯೆ ಕಾಡದಿದ್ದರೂ ನಿಗದಿತ ದಿನಗಳಂದು ಮಾತ್ರ ವಿತರಿಸುತ್ತಿರುವುದರಿಂದ ಕೂಲಿಗೆ ಕೊಡಗು ಮತ್ತಿತರೆಡೆ ತೆರಳುವ ಬಹಳಷ್ಟು ಮಂದಿ ಪಡಿತರದಿಂದ ವಂಚಿತರಾಗುತ್ತಿದ್ದಾರೆ.
ತಾಂತ್ರಿಕತೆ ಅತಂತ್ರ: ಅಕ್ರಮ ತಡೆಗಟ್ಟಲು ತಾಂತ್ರಿಕತೆ ಬಳಸಿರುವ ಸರ್ಕಾರ ಅನಗತ್ಯ ಸರ್ವರ್ ತೊಂದರೆಯನ್ನು ಸರಿಪಡಿಸುವಲ್ಲಿ ವಿಫಲವಾಗಿದೆ. ಇಂಟರ್‌ನೆಟ್‌ನ ಸಾಮರ್ಥ್ಯ ಹೆಚ್ಚಿಸಿ ಸರ್ವರ್ ಎಲ್ಲಕಾಲದಲ್ಲೂ ಸಿಗುವಂತೆ ವ್ಯವಸ್ಥೆ ಕಲ್ಪಿಸುವ ಅತ್ಯಗತ್ಯವಾಗಿದೆಯಾದರೂ ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಚಕಾರವೆತ್ತದಿರುವುದು ಯಾತಕ್ಕೆಂಬುದು ನಿಗೂಢವಾಗಿದೆ.
ಅಕ್ಕಿ ಓಕೆ-ಉಳಿದಕ್ಕೆ ತಡೆಯಾಕೆ: ಹಿಂದಿನಿಂದಲೂ ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರ ಅಕ್ಕಿಯೊಂದಿಗೆ ಸೀಮೆಎಣ್ಣೆ. ಸಕ್ಕರೆ, ಎಣ್ಣೆ, ಉಪ್ಪು ನೀಡುತ್ತಿತ್ತು. ಕಳೆದೆರಡು ವರ್ಷದ ಹಿಂದೆ ಗ್ಯಾಸ್ ಸಂಪರ್ಕ ಕಲ್ಪಿಸಿದಾಗಿನಿಂದ ಗ್ಯಾಸ್ ಇಲ್ಲದವರಿಗೂ ಸೀಮೆ ಎಣ್ಣೆ ಸಿಗದಂತಾಗಿದೆ. ಇನ್ನೂ ಕಳೆದ ಕೆಲ ತಿಂಗಳಿನಿಂದ ಸಕ್ಕರೆ, ಉಪ್ಪು, ಎಣ್ಣೆಗೂ ಸಂಚಕಾರ ಒಡ್ಡಿದ್ದು, ಬಡವರ ಹೊಟ್ಟೆಮೇಲೆ ಹೊಡೆದಂತಾಗಿದೆ. ಈಗ ಕುಟುಂಬದ ಒಬ್ಬ ಸದಸ್ಯನಿಗೆ 7 ಕೆಜಿ ಅಕ್ಕಿ ನೀಡಿದರೆ ಕುಟುಂಬಕ್ಕೆ ಒಂದು ಕೆಜಿ ತೊಗರಿ ಬೇಳೆ ನೀಡುತ್ತಿದ್ದಾರೆ. ಸರ್ವರ್ ಪ್ರಾಬ್ಲಿಮ್ ನಿಂದಾಗಿ ಅದಲ್ಲೂ ಸಂಚಕಾರ ಬಂದೊದಗಿದೆ.
ನಮ್ಮೂರಿನಿಂದ ಪಕ್ಕದ ಮೂರು ಕಿ.ಮೀ ದೂರದ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ಪಡೆಯಬೇಕಿದೆ. ತಿಂಗಳಲ್ಲಿ ಕನಿಷ್ಠ ಮೂರುದಿನ ಪಡಿತರಕ್ಕಾಗಿ ಕಾಯಬೇಕು. ಸರ್ಕಾರ ಸರ್ವರ್ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ರೈತರು, ಕೃಷಿ ಕಾರ್ಮಿಕರು ನೆಮ್ಮದಿಯಿಂದ ಪಡಿತರ ಪಡೆದುಕೊಳ್ಳಲು ಕ್ರಮ ವಹಿಸಬೇಕೆಕು.
-ದಾಸನಪುರದ ಮಹದೇವಪ್ಪ, ಪಡಿತರ ಫನಾನುಭವಿ
ಕಾಂಗ್ರೆಸ್ ಸರ್ಕಾರವೇನೋ ಅತೀ ಕಡಿಮೆ ದರದಲ್ಲಿ ಪಡಿತರ ನೀಡಿ ಬಡವರಿಗೆ ನೆರವಾಗಿದೆ. ಆದರೆ ಇದನ್ನು ಪಡೆಯಲು ದುಸ್ಸಾಹಸ ಪಡಬೇಕಿದೆ. ಮಹಿಳೆಯರು ಊಟ-ತಿಂಡಿ, ಕೂಲಿ ಬಿಟ್ಟು ಪಡಿತರ ತರಲು ಪಕ್ಕದೂರಿಗೆ ತೆರಳಬೇಕಿದೆ. ಆಗುತ್ತಿರುವ ತೊಂದರೆಯನ್ನು ತಪ್ಪಿಸಿ.
-ದೊಡ್ಡಹೆಜೂರು ಸುನಿಲ್, ಪಡಿತರ ಫಲಾನುಭವಿ
ಆನ್ ಲೈನ್ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಕೆಲವೊಮ್ಮೆ ಸರ್ವರ್ ಪ್ರಾಬ್ಲಿಮ್ ಆಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಆದರೆ ಹಳ್ಳಿಗಳಲ್ಲಿ ನೆಟ್ ವರ್ಕ್ ಸಿಗದಿರುವ ಬಗ್ಗೆಯೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಪ್ರಭುಸ್ವಾಮಿ, ಹುಣಸೂರು ಆಹಾರ ಶಿರಸ್ತೆದಾರ್
* ಸಂಪತ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.