ಜಿಲ್ಲೆಯಲ್ಲಿ ಏಳು ಸೋಂಕಿತರು ಗುಣಮುಖ
ಜನತೆಯಲ್ಲಿ ತಗ್ಗಿದ ಕೋವಿಡ್-19 ಆತಂಕ
Team Udayavani, Apr 13, 2020, 5:21 PM IST
ಮೈಸೂರು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚು ಆತಂಕ ತಂದೊಡ್ಡಿರುವ ನಡುವೆ ಭಾನುವಾರ ಒಂದೇ ದಿನ ಏಳು ಮಂದಿ ಸೋಂಕಿತರು ಗುಣಮುಖವಾಗಿ
ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ. ಘಿಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಮೈಸೂರಿನ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 7 ಮಂದಿ ರೋಗಿಗಗಳು ಗುಣಮುಖರಾಗಿಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಭಾನುವಾರ ಆಸ್ಪತ್ರೆಯಿಂದ ಬಿಡು ಗಡೆಯಾದವರಲ್ಲಿ ನಂಜನ ಗೂಡಿನ ಜ್ಯುಬಿಲಿ ಯಂಟ್ ಕಾರ್ಖಾನೆಗೆ ಸಂಬಂಧಿತ 6 ರೋಗಿಗಳು ಮತ್ತು ವಿದೇಶ ದಿಂದ ಮರಳಿದ್ದ ಒಬ್ಬ ರೋಗಿಯಾಗಿ ದ್ದಾರೆ. ಈ ಹಿಂದೆ ಇಬ್ಬರು ಗುಣಮುಖ ರಾಗಿದ್ದು, ಸದ್ಯಕ್ಕೆ ಒಟ್ಟು 9 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 48 ಮಂದಿ ಸೋಂಕಿತರಲ್ಲಿ ಒಟ್ಟು 9 ಮಂದಿ ಗುಣ ಮುಖರಾಗಿದ್ದು, 39 ಮಂದಿ ಸೋಂಕಿ ತರು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ ಎಂದು ಮಾಹಿತಿ ನೀಡಿದರು.
ಇಡೀ ಕಾರ್ಯಾಚರಣೆಯಲ್ಲಿ ಅವರ ಬೆಂಬಲ ಮತ್ತು ಸಹಕಾರಕ್ಕಾಗಿ ಇಡೀ ಆಸ್ಪತ್ರೆ ತಂಡ, ಎಲ್ಲಾ ಕ್ಷೇತ್ರ ತಂಡಗಳು (ಪೊಲೀಸ್, ಆರೋಗ್ಯ ಮತ್ತು ಸ್ಥಳೀಯ ಸಂಸ್ಥೆಯ ಕಾರ್ಯಕರ್ತರು), ಸಂಪರ್ಕ ತಡೆಯನ್ನು ಮೇಲ್ವಿಚಾರಣೆ ಮಾಡುವ ತಂಡ ಮತ್ತು ಕಣ್ಗಾವಲು ತಂಡಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಆಸ್ಪತ್ರೆಯಿಂದ ಗುಣಮುಖ ರಾಗಿ ಬಿಡುಗಡೆಯಾದವರ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗಿದೆ ಮತ್ತು ಅವರ ಕೆಲವು ವಿನಂತಿಗಳ ಮೇರೆಗೆ ಆಸ್ಪತ್ರೆಯಲ್ಲಿ ಬಿಸಿ ನೀರಿನ ಗೀಸರ್ ಸೌಲಭ್ಯವನ್ನು ವಿನಂತಿಯ ಆಧಾರದ ಮೇಲೆ ಮಾಡಲಾಗಿದೆ ಎಂದು ತಿಳಿಸಿದರು.
ಮತ್ತೂಂದು ಪ್ರಕರಣ: ಜಿಲ್ಲೆಯಲ್ಲಿ ಒಟ್ಟು 47 ಮಂದಿ ಸೋಂಕಿತರಲ್ಲಿ ಈವರೆಗೆ ಒಂಭತ್ತು ಮಂದಿ ಗುಣಮುಖರಾಗಿದ್ದರು. ಇದರಿಂದ 38ಕ್ಕೆ ಇಳಿಕೆಯಾಗಿದ್ದ ಸೋಂಕಿತರ ಸಂಖ್ಯೆ ಭಾನುವಾರ ಮತ್ತೂಬ್ಬ ವ್ಯಕ್ತಿಯಲ್ಲಿ ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯಲ್ಲಿ ಪ್ರಸ್ತುತ 39 ಮಂದಿ ಸೋಂಕಿತರಿದ್ದಾರೆ.
3555 ಮಂದಿ ಮೇಲೆ ನಿಗಾ
ಈವರೆಗೆ 3555 ಮಂದಿ ಮೇಲೆ ನಿಗಾ ವಸಿದ್ದು, 1978 ಮಂದಿ 14 ದಿನದ ಕ್ವಾರಂಟೈನ್ ಮುಗಿಸಿದ್ದಾರೆ. 1531 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 39 ಮಂದಿ ಆಸ್ಪತ್ರೆಯ ಐಸೋಲೇಷನ್‌ನಲ್ಲಿದ್ದಾರೆ. ಇದು ವರೆಗೆ 896 ಮಾದರಿ ಗಳನ್ನು ಪರೀಕ್ಷೆ ಮಾಡ ಲಾಗಿದ್ದು, ಅದರಲ್ಲಿ 848 ನೆಗೆಟಿವ್ ಬಂದಿದೆ.
ಜ್ಯುಬಿಲಿಯಂಟ್‌ನ ಮತ್ತೂಬ್ಬನಿಗೆ ಸೋಂಕು
ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ಒಬ್ಬ ನೌಕರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, 32 ವರ್ಷದ ನೌಕರನಿಗೆ ರೋಗಿ ಸಂಖ್ಯೆ 88ರ ಸಂಪರ್ಕದಿಂದ ಸೋಂಕು ತಗಲಿರುವುದು ಖಚಿತವಾಗಿದೆ. ಈ ಕಾರ್ಖಾನೆಗೆ ಸಂಬಂಧಪಟ್ಟ 37 ಜನರು ಈ ರೋಗಕ್ಕೆ ತುತ್ತಾಗಿದ್ದಾರೆ.
ಮುಂದುವರಿದ ಆತಂಕ: ಪ್ರತಿ ದಿನ ಜ್ಯುಬಿಲಿಯಂಟ್ ಕಾರ್ಖಾನೆಯ ನೌಕರರಲ್ಲಿ ಸೋಂಕು ದೃಢಪಡುತ್ತಿರುವುದು ಅವರ ಕುಟುಂಬದ ಸದಸ್ಯರು, ಸಂಬಂಧಿಕರಲ್ಲಿ ಮತ್ತು ಸ್ಥಳೀಯ ಸಾರ್ವಜನಿಕರಲ್ಲೂ ಗಾಬರಿ ಹುಟ್ಟಿಸಿದೆ. ಈ ಔಷಧ ಕಾರ್ಖಾನೆಯ ಹೆಚ್ಚಿನ ನೌಕರರು (1,112) ನಂಜನಗೂಡು ನಗರ ಹಾಗೂ
ತಾಲೂಕಿನಲ್ಲಿ ವಾಸವಿದ್ದಾರೆ. ಇವರನ್ನು ಹೋಮ್ ಕ್ವಾರಂಟೈನ್‌ನಲ್ಲಿಡಲಾಗಿದೆ. ಸೋಂಕಿತರ ನೇರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.