15 ವಾರ್ಡ್‌ಗಳಲ್ಲಿ ಬಿಗಡಾಯಿಸಿದ ಕುಡಿಯುವ ನೀರಿನ ಅಭಾವ
Team Udayavani, Apr 19, 2021, 4:16 PM IST
ಗುಂಡ್ಲುಪೇಟೆ: ಪಟ್ಟಣದ ಹಲವು ವಾರ್ಡ್‌ಗಳಿಗೆ15 ದಿನಗಳಿಂದಲೂ ಕುಡಿಯುವ ನೀರು ಪೂರೈಕೆಯಾಗದ ಕಾರಣ ಜನರು ಕಂಗೆಟ್ಟಿದ್ದಾರೆ. ಸಮಸ್ಯೆಅರಿವಿದ್ದರೂ ಪುರಸಭೆ ಮುಖ್ಯಾಧಿಕಾರಿ ಹಾಗೂಅಧ್ಯಕ್ಷರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದುಸಾರ್ವಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ 1, 2, 3, 4, 6, 7, 9, 10, 11, 15,16, 17, 21 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಬಿಗಡಾಯಿಸಿದ್ದು, ಯುಗಾದಿ ಆಚರಣೆಗೂನೀರಿಲ್ಲದೆ ಜನರ ಪರದಾಡುವಂತಾಗಿತ್ತು. ಪಟ್ಟಣಕ್ಕೆನೀರು ಪೂರೈಸಲು ಕಬಿನಿ ಪ್ರಮುಖ ಜಲಮೂಲವಾಗಿದ್ದರೂ ಸಮಸ್ಯೆ ತಪ್ಪಿಲ್ಲ.ಪುರಸಭೆಯಿಂದ ಹೊಸದಾಗಿ 9 ಬೋರ್‌ವೆಲ್‌ಕೊರೆಸಲಾಗಿದೆ.
ಈ ಪೈಕಿ 6ರಲ್ಲಿ ಮಾತ್ರ ನೀರುಸಿಕ್ಕಿದೆ. ಕಳೆದ 15 ದಿನಗಳಿಂದಲೂ ನಲ್ಲಿಗಳಲ್ಲಿ ನೀರುಬಿಡದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಹೆಚ್ಚಾಗಿದೆ. ಬೇಸಿಗೆಯ ಅರಿವಿದ್ದರೂ ಪುರಸಭೆನಿರ್ಲಕ್ಷ್ಯದಿಂದ ನೀರಿಗಾಗಿ ಪರದಾಡು ವಂತಾಗಿದೆಎಂದು ಸ್ಥಳೀಯರಾದ ಜಿ.ಎಸ್.ಸಂದೀಪ್ ಕುಮಾರ್‌ಅಳಲು ತೋಡಿಕೊಂಡಿದ್ದಾರೆ.
ವಾಟರ್‌ಮ್ಯಾನ್‌ಗಳ ಮೊಬೈಲ್ ಸ್ವಿಚ್‌ಆಫ್:ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ನೀರಿನಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಸ್ಥಳೀಯರುವಾಟರ್‌ಮ್ಯಾನ್‌ಗಳನ್ನು ತರಾಟೆಗೆ ತೆಗೆದುಕೊಂಡಕಾರಣ ಅವರು ತಮ್ಮ ಮೊಬೈಲ್ ಸ್ವಿಚ್‌ಆಫ್ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ವಾಡ್ìಗಳಲ್ಲಿ ನೀರಿನ ಮೋಟರ್ ಸುಟ್ಟು ಹೋಗಿದೆ,ಬೋರ್ ರಿಪೇರಿ ಇದೆ ಎಂದು ಸಬೂಬುಹೇಳುತ್ತಿದ್ದಾರೆ ಎಂದು 16ನೇ ವಾರ್ಡ್ ನಿವಾಸಿಗಳುಅಸಹಾಯಕತೆ ವ್ಯಕ್ತಪಡಿಸಿದ್ದಾರೆ.ಓವರ್ ಹೆಡ್ ಟ್ಯಾಂಕ್‌ಗಳು ನಿರುಪಯುಕ್ತ:ಪಟ್ಟಣ ವ್ಯಾಪ್ತಿಯಲ್ಲಿ 5ರಿಂದ 6 ಓವರ್ ಹೆಡ್‌ನೀರಿನ ಟ್ಯಾಂಕ್‌ಗಳಿದ್ದು, ಯಾವೊಂದು ಟ್ಯಾಂಕ್‌ಗೂ ನೀರು ಪೂರೈಕೆಯಾಗದೆ ನಿರುಪಯುಕ್ತವಾಗಿವೆ.
ಕಳೆದ 12 ವರ್ಷದ ಹಿಂದೆ ವೆಂಕಟಾಚಾಲಪುರಸಭಾ ಅಧ್ಯಕ್ಷರಾಗಿದ್ದ ವೇಳೆ ಟ್ಯಾಂಕ್‌ಗಳಿಗೆನೀರು ತುಂಬಿಸಿದ್ದು ಬಿಟ್ಟರೆ ಇಲ್ಲಿಯವರೆಗೆ ಟ್ಯಾಂಕ್‌ಗಳು ನೀರನ್ನೇ ಕಂಡಿಲ್ಲ. ಹಲವು ವರ್ಷಗಳ ಹಿಂದೆಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಿದ್ದ ಟ್ಯಾಂಕ್‌ಗಳು ಶಿಥಿಲಾವಸ್ಥೆ ತಲುಪಿವೆ.
ನೀರು ಪೂರೈಕೆಗೆ ಒಂದೇ ಟ್ಯಾಂಕರ್: ಗುಂಡ್ಲುಪೇಟೆ ಪಟ್ಟಣ ಬಹಳ ದೊಡ್ಡದಾಗಿದ್ದು, 30 ಸಾವಿರಜನಸಂಖ್ಯೆ ಹೊಂದಿದೆ. ಒಟ್ಟು 23 ವಾರ್ಡ್‌ಗಳಿದ್ದು, ಇಲ್ಲಿಗೆ ನೀರು ಪೂರೈಕೆ ಮಾಡಲು ಕೇವಲಒಂದೇ ಒಂದು ಟ್ಯಾಂಕರ್ ಇರುವುದುವಿಪರ್ಯಾಸವಾಗಿದೆ.
ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.