ಶ್ರದ್ಧೆ, ಭಕ್ತಿಯ ಶ್ರೀ ಕೃಷ್ಣ ಜನ್ಮಾಷ್ಟಮಿ
Team Udayavani, Aug 25, 2019, 3:00 AM IST
ಹುಣಸೂರು: ನಗರ ಹಾಗೂ ತಾಲೂಕಿನ ವಿವಿಧ ಶಾಲೆ, ದೇವಸ್ಥಾನಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಶ್ರೀ ಸಾಯಿಬಾಬಾ ದೇವಸ್ಥಾನ: ಮೈಸೂರು ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸುತ್ತಮುತ್ತಲಿನ ಬಡಾವಣೆಯ ನೂರಕ್ಕೂ ಹೆಚ್ಚು ಪುಟಾಣಿಗಳು ಕೃಷ್ಣ-ರಾಧೆಯರ ವೇಷದಲ್ಲಿ ಕಂಗೊಳಿಸಿದರು. ದೇವಸ್ಥಾನ ಸಮಿತಿಯ ಸದಸ್ಯೆ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಪುಷ್ಪಅಮರ್‌ನಾಥ್, ವ್ಯವಸ್ಥಾಪಕ ಸುಧನ್ವ ಸೇರಿದಂತೆ ಪೋಷಕರು ಹಾಜರಿದ್ದರು. ಮಕ್ಕಳಿಗೆ ಸಿಹಿ ವಿತರಿಸಿದರು.
ಮಾಧವ ಶಾಲೆ: ನಗರದ ರತ್ನಪುರಿ ರಸ್ತೆಯ ಸೇವಾ ಭಾರತಿ ಟ್ರಸ್ಟ್‌ನ ಮಾಧವ ಶಾಲೆಯಲ್ಲಿ ಮಕ್ಕಳು ಕೃಷ್ಣ-ರಾಧೆಯ ವೇಷ ಧರಿಸಿ ಕೃಷ್ಣನ ವಿವಿಧ ಹಾಡುಗಳಿಗೆ ನೃತ್ಯ ಮಾಡಿದರೆ, ಹಲವು ಮಕ್ಕಳು ಕೃಷ್ಣನ ವಿವಿಧ ಭಂಗಿಯ ಚಿತ್ರಗಳನ್ನು ರಚಿಸಿದರು. ಕೃಷ್ಣನ ನೂರಾರು ನಾಮಗಳನ್ನು ಬರೆದು ಬಹುಮಾನಗಳನ್ನು ಗಿಟ್ಟಿಸಿಕೊಂಡರು. ಈ ವೇಳೆ ಟ್ರಸ್ಟ್‌ನ ಕಾರ್ಯದರ್ಶಿ ಮಹದೇವ್‌ರಾವ್ ಬಾಗಲ್, ವ್ಯವಸ್ಥಾಪಕ ರಘುವೀರ್, ನಿರ್ದೇಶಕ ಗೋಪಾಲ್‌ಜೀ, ಮುಖ್ಯ ಶಿಕ್ಷಕರಾದ ರಂಗಸ್ವಾಮಿ ಹಾಗೂ ಮನೋಹರ್, ಸಹ ಶಿಕ್ಷಕರಾದ ವಿಮಲಾಕ್ಷಿ, ಪಲ್ಲವಿ, ವೆಂಕಟೇಶ್, ಮಂಜುಳಾ, ಹೇಮಾ ಹಾಗೂ ಪೋಷಕರು ಉಪಸ್ಥಿತರಿದರು.
ಎಂ.ಆರ್.ಎನ್.ವಿ.ಶಾಲೆ: ಸೇತುವೆಯ ಎಂ.ಆರ್.ಎನ್.ವಿ.ಶಾಲೆಯಲ್ಲಿ ಕೃಷ್ಣ-ರಾಧೆಯರ ವೇಷ ಭೂಷಣದಲ್ಲಿ ಪುಟಾಣಿಗಳು ಕಂಗೊಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಹರೀಶ್ ಬಾಬು, ಉಪಾಧ್ಯಕ್ಷ ನಾಗರಾಜ್, ಮುಖ್ಯ ಶಿಕ್ಷಕಿ ಶ್ಯಾಮಲಾ ಭಟ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಸ್ತ್ರೀ ವಿದ್ಯಾ ಸಂಸ್ಥೆ: ನಗರದ ಬೈ ಪಾಸ್ ರಸ್ತೆಯ ಶಾಸ್ತ್ರೀ ವಿದ್ಯಾ ಸಂಸ್ಥೆಯ ಪುಟಾಣಿಗಳು ಕೃಷ್ಣಜನ್ಮಾಷ್ಟಮಿ ಅಂಗವಾಗಿ ಕೃಷ್ಣ-ರಾಧೆಯರ ವೇಷಭೂಷಣ ತೊಟ್ಟು ಬಂದಿದ್ದಲ್ಲದೆ, ಮಕ್ಕಳಿಗೆ ಮಡಿಕೆ ಒಡೆಯುವ, ಕೊಳಲು ನುಡಿಸುವ ಸ್ಪರ್ಧೆ ಆಯೋಜಿಸಿ, ಬಹುಮಾನ ವಿತರಿಸಲಾಯಿತು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ, ಪ್ರಾಚಾರ್ಯ ರವಿಶಂಕರ್, ಮುಖ್ಯಶಿಕ್ಷಕಿ ಸತ್ಯವತಿ, ತಂಗಮ್ಮ, ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.