ನುಡಿದಂತೆ 4 ವರ್ಷ ನಡೆದ ಸಿದ್ದು ಸರ್ಕಾರ
Team Udayavani, May 23, 2017, 12:57 PM IST
ಎಚ್.ಡಿ.ಕೋಟೆ: ಕಳೆದ ಮೂರು ವರ್ಷದಿಂದ ಆವರಿಸಿದ್ದ ತೀವ್ರ ಬರಗಾಲದಿಂದ ರಾಜ್ಯ ಸಂಕಷ್ಟದಲ್ಲಿದ್ದರೂ ಅನ್ನ ಇಲ್ಲದೆ ಹಸಿವಿನಿಂದ ಯಾರೊಬ್ಬರು ಬಳಲು ಸರ್ಕಾರ ಬಿಟ್ಟಿಲ್ಲ, ಅನ್ನಭಾಗ್ಯದಿಂದ ಉದ್ಯೋಗ ಭರವಸೆಯಿಂದ ನೆರವಿಗೆ ಬಂದಿದೆ. ಇದು ಸರ್ಕಾರದ ಬಹು ದೊಡ್ಡ ಸಾಧನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣ ಸಮೀಪದ ಯರಹಳ್ಳಿ ಹ್ಯಾಂಡ್‌ಪೋಸ್ಟ್ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಗೋದಾಮುಗಳ, ಹರಾಜು ಮಾರುಕಟ್ಟೆ ಹಾಗೂ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಹಗರಣವಿಲ್ಲದೆ ಒಳ ಮತ್ತು ಹೊರ ಜಗಳವಿಲ್ಲದೆ 4 ವರ್ಷ ಪೂರೈಸಿದ್ದು ಸ್ಥಿರ ಹಾಗೂ ಅಭಿವೃದ್ಧಿ ಪೂರಕ ಆಡಳಿತ ಕೊಟ್ಟಿದೆ, ಅಷ್ಟೇ ಅಲ್ಲದೆ ಸರ್ಕಾರ ಚುನಾವಣಾ ಪೂರ್ವ ನೀಡಿದ್ದ 160 ಭರವಸೆಗಳಲ್ಲಿ ಈಗಾಗಲೇ 155 ಭರವಸೆ ಈಡೇರಿಸಿ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎನಿಸಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ರೈತರು ತಾವು ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಆ ನಿಟ್ಟಿನಲ್ಲಿ ಇಲ್ಲಿನ ಎಪಿಎಂಸಿ ವರದಾನವಾಗಿದ್ದು, ರೈತರ ಬೆಳೆದ ಪದಾರ್ಥಗಳಿಗೆ ಉತ್ತಮ ಬೆಲೆ ಸಿಗುವ ಜೊತೆಗೆ ಮಧ್ಯವರ್ತಿ ಹಾವಳಿ ತಪ್ಪಸಲಿದೆ ಎಂದು ಹೇಳಿದರು.
ಸರ್ಕಾರ ಕಳೆದ ಲೋಕಸಭೆ ಚುನಾವಣೆ ಸಂದರ್ಭ ಹೇಳಿದಂತೆ ಹಲವು ವರ್ಷಗಳ ಬೇಡಿಕೆಯಾಗಿದ್ದ ಸರಗೂರನ್ನು ತಾಲೂಕು ಕೇಂದ್ರವಾಗಿ ಘೋಷಣೆ, ತಾಲೂಕು ಕೇಂದ್ರವಾದ ಎಚ್.ಡಿ.ಕೋಟೆ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆರಿಸಿ ಪುರಸಭೆಯಾಗಿಸಿದ್ದು, ರೈತರಿಗೆ ನೀರಾವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ತಾರಕ ನಾಲಾ ಅಭಿವೃದ್ಧಿ ಸೇರಿದಂತೆ ತಾಲೂಕಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಸಿದ್ದರಾಮಯ್ಯರು ಮುಖ್ಯಮಂತ್ರಿಯಾದ ನಂತರ ಸಾಕಷ್ಟು ಅನುದಾನ ತಾಲೂಕಿಗೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರದ ಶಾಸಕ ಎಸ್.ಚಿಕ್ಕಮಾದು ಮಾತನಾಡಿ, ಯರಹಳ್ಳಿ ಹ್ಯಾಂಡ್‌ಪೋಸ್ಟ್‌ನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಗೋದಾಮು ಸೇರಿದಂತೆ ಹರಾಜು ಮಾರುಕಟ್ಟೆ ಆಡಳಿತ ಕಚೇರಿ ಉದ್ಘಾಟನೆಯಾಗಿರುವುದು ಇಲ್ಲಿನ ರೈತರಿಗೆ ಬಹಳ ಉಪಯುಕ್ತವಾಗಿದ್ದು ರೈತರು ಸದುಪಯೋಗಪಡಿಸಿಕೊಳ್ಳಿ ಎಂದರು.
ಚಾಮರಾಜನಗರ ಜಿಪಂ ಸದಸ್ಯ ಎಂ.ರಾಮಚಂದ್ರ, ಸಂತೆ ಸರಗೂರು ಎಪಿಎಂಸಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಉಪಾಧ್ಯಕ್ಷ ಮಹೇಶ್, ನಿರ್ದೇಶಕರಾದ ಜವರನಾಯಕ, ಹೂ.ಕೆ.ಮಹೇಂದ್ರ, ಭಾಸ್ಕರ್, ರತ್ನಮ್ಮ, ಮೀನಾಕ್ಷಿ, ಸುಜಾತ, ಜಗದೀಶ್(ಅಯ್ಯು) ಮಂಜುನಾಥ್, ಕಾಟನ್ ಮಹದೇವು, ರಾಮಣ್ಣ ಕಾ¿ìದರ್ಶಿ ಸೌಜನ್ಯ ತಾಪಂ ಸದಸ್ಯರಾದ ಶಂಬೇಗೌಡ, ಅಂಕಪ್ಪ, ರವಿಕುಮಾರ್, ಜನಪದ ಕಲಾವಿದ ಅಮ್ಮ ರಾಮಚಂದ್ರು, ಮುಖಂಡರಾದ ಚಾಮಲಾಪುರ ಗಿರೀಶ್, ಮಳಲಿ ಶಾಂತಕುಮಾರ್, ಹೆಚ್.ಎಲ್.ನಾಗೇಂದ್ರ ಅಧಿಕಾರಿಗಳಾದ ಬಿಇಒ ಉದಯಕುಮಾರ್, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಎಇಇ ನಾಗರಾಜು ಸೇರಿದಂತೆ ಇನ್ನಿತರರು ಇದ್ದರು.
ಎಚ್.ಡಿ.ಕೋಟೆ ತಾಲೂಕು ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ಜಿಲ್ಲೆಯಲ್ಲೇ ಅತಿ ದೊಡ್ಡ ತಾಲೂಕಾಗಿದ್ದು, ರಾಷ್ಟ್ರದ ಪ್ರಮುಖ ಸಂಪತ್ತುಗಳಾದ ಜಲ, ಅರಣ್ಯ, ವನ್ಯಜೀವಿಗಳ ಜೊತೆಗೆ ಫಲವತ್ತಾದ ಭೂ ಪ್ರದೇಶ ಹೊಂದಿದ್ದರೂ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕಾಗಿದ್ದು, ಇಡೀ ಕ್ಷೇತ್ರದ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡಿದೆ.
-ಡಾ.ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ
ಕುತೂಹಲ… ನಡೆ..!
ಚಾಮರಾಜನಗರ ಜಿಪಂ ಅಧ್ಯಕ್ಷ ಎಂ.ರಾಮಚಂದ್ರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತಾಲೂಕಿನ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಪಕ್ಷದ ವರಿಷ್ಠರಿಂದ ಸೂಚನೆ ಸಿಕ್ಕಿರುವುದರಿಂದಲೇ ತಾಲೂಕಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಂದಾಗುತ್ತಿದ್ದರೇ ಎಂದು ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.