ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಚಾಲನೆ ಸಿಗಲಿ


Team Udayavani, Mar 19, 2017, 12:16 PM IST

mys2.jpg

ನಂಜನಗೂಡು: ಇಲ್ಲಿನ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ವಿ ಶ್ರೀನಿವಾಸ್‌ ಪ್ರಸಾದ್‌ ಅವರ ಸ್ವಾಭಿಮಾನ ಹಾಗೂ ಕಾಂಗ್ರೆಸ್‌ನ ಸಿದ್ದು ಸರ್ಕಾರದ ದುರಹಾಂಕರದ ನಡುವಿನ ಹೋರಾಟದ ಚುನಾವಣೆ ಎಂದು ಮಾಜಿ ಸಚಿವ ಸುರೇಶಕುಮಾರ್‌ ಹೇಳಿದರು.

ಪಟ್ಟಣದಲ್ಲಿ ಕಾರ್ಯಕರ್ತರೊಂದಿಗೆ ಅನೇಕ ಬಡಾವಣೆಗಳಲ್ಲಿ ಮತ ಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚುನಾವಣೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಮಧ್ಯೆ ಹೋರಾಟದೊಂದಿಗೆ ಬಿಜೆಪಿ ಅಭ್ಯರ್ಥಿ ಪ್ರಸಾರ್‌ ಸಾಭಿಮಾನ ಹಾಗೂ ಕಾಂಗ್ರೆಸ್‌ ಪಕ್ಷದ ದುರಹಂಕಾರದ ನಡುವಿನ ಹೋರಾಟ ಎಂದರು. 

ಉತ್ತರ ಕಾಶಿಯ ಜನ ಬಿಜೆಪಿಗೆ ಜಯ ತಂದಿದ್ದಾರೆ. ದಕ್ಷಿಣ ಕಾಶಿಯ ಜನ ತಾವೇನು ಕಡಿಮೆ ಎಂಬತೆ ಬಿಜೆಪಿಗೆ ಹುರಿಯಾಳನ್ನು ಭಾರಿ ಅಂತರದಿಂದ ಗೆಲ್ಲಿಸಿ ಮೋದಿ ಹಾಗೂ ಯಡಿಯೂರಪ್ಪನವರ ಕೈ ಬಲ ಪಡಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮಾಡಬಾರದ ಅವಮಾನ: ಯಾವ ಆಡಳಿತವೂ  ತನ್ನ ಸಹೋದ್ಯೋಗಿಗೆ ಮಾಡಬಾರದ ಅವಮಾನ ವನ್ನು ಸಿದ್ದರಾಮಯ್ಯ ಶ್ರೀನಿವಾಸ್‌ ಪ್ರಸಾದರಿಗೆ ಮಾಡಿದ್ದಾರೆ. ರಾಜಕಾರಣದ ಚುನಾವಣೆ ಸಾಕು ಎಂದಿದ್ದ ಅವರನ್ನು ಕತ್ತು ಹಿಡಿದು ಹೊರತಳ್ಳುವಂತೆ ಕಳಿಸಿದ್ದು, ಪ್ರಸಾದ್‌ರೊಂದಿಗೆ ಅವರನ್ನು ಆಯ್ಕೆ ಮಾಡಿ ಕಳಿಸಿದ ನಂಜನಗೂಡಿನ ಜನತೆಗೆ ಮುಖ್ಯಮಂತ್ರಿಗಳು ಮಾಡಿದ ಅವಮಾನವಲ್ಲದೆ ಇನ್ನೇನು ಎಂದು ಪ್ರಶ್ನಿಸಿದರು.

ಜನರ ರೋಗದ ವಾಸಿಗೆ ಈ ಸ್ಥಳದಲ್ಲಿ ಓಷಧ ತಯಾರಿಸಲಾಗುತ್ತದೆ, ಕಾಂಗ್ರೆಸ್‌ನ ಆಡಳಿತದಿಂದ ಗರ ಬಡಿದ ರಾಜ್ಯದ ಕಾಯಿಲೆಗೂ ನಂಜನಗೂಡಿ ನಿಂದಲೇ ಓಷಧಿ ಸಿಗಬೇಕೆಂಬುದು ತಮ್ಮ ಬಯಕೆ ಎಂದ ಅವರು ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ  ನಂಜನಗೂಡಿಂದಲೆ ಚಾಲನೆ ಸಿಗಬೇಕಾಗಿದೆ ಎಂದರು. ನಗರಸಭಾ ಉಪಾಧ್ಯಕ್ಷ ಪ್ರದೀಪ್‌ ಸದಸ್ಯರುಗಳಾದ ಗೀರಿಶ, ಆನಂದ್‌, ಮಂಗಳಾ, ಜಿಪಂ ಸದಸ್ಯೆ ಮಂಗಳಾಸೋಮಶೇಖರ, ಎನ್‌ಆರ್‌ ಕೃಷ್ಣಪ್ಪಗೌಡ್‌ ಬಸವರಾಜು, ಕಪೀಲೇಶ ಇದ್ದರು.

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Republic Day: ಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ

Republic Day Parade: ಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ

5-hunsur

Hunsur:1463 ಪೈಕಿ 1055 ಮಂದಿ ಮತದಾರರ ಕೈ ಬಿಟ್ಟಿರುವ ಬಗ್ಗೆ ಷೇರುದಾರರ ಆಕ್ಷೇಪ; ಪ್ರತಿಭಟನೆ

Ramalalla-Stone

Mysuru: ರಾಮಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆ ದೊರೆತ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ

Nanjanagudu

Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!

money-Currency

Micro Finance: ಮೀಟರ್‌ ಬಡ್ಡಿ ಕಿರುಕುಳ: ಊರೇ ತೊರೆದ 100ಕ್ಕೂ ಹೆಚ್ಚು ಕುಟುಂಬ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.