ಪ್ಲಾಸ್ಮಾ ಬೇರ್ಪಡಿಕೆ ಯಂತ್ರಕ್ಕೆ ಚಾಲನೆ
Team Udayavani, Sep 26, 2020, 2:28 PM IST
ಮೈಸೂರು ನಗರದ ಸಯ್ನಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಶುಕ್ರವಾರ ಮೈಸೂರಿನ ಮೊದಲ ಪ್ಲಾಸ್ಮಾ ಬೇರ್ಪಡಿಕೆಯಂತ್ರಕ್ಕೆ ಚಾಲನೆ ನೀಡಲಾಯಿತು. ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಇತರರಿದ್ದರು.
ಮೈಸೂರು: ಕೋವಿಡ್ ಸೋಂಕಿನಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾವನ್ನು ಬೇರೆಯವರಿಗೆ ದಾನ ಮಾಡಿದರೆ ಜೀವದಾನ ಮಾಡಿದಂತಾಗುತ್ತದೆ ಎಂದು ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಹೇಳಿದರು.
ನಗರದ ಸಯ್ನಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಶುಕ್ರವಾರ ಮೈಸೂರಿನ ಮೊದಲ ಪ್ಲಾಸ್ಮಾ ಬೇರ್ಪಡಿಕೆ ಯಂತ್ರವನ್ನು (ಸಿಂಗಲ್ ಡೋನರ್ ಪ್ಲಾಸ್ಮಾ ಯಂತ್ರ) ಲೋಕಾರ್ಪಣೆ ಮಾಡಿ ಮಾತನಾಡಿದರು.
ಪ್ಲಾಸ್ಮಾದಾನ ಜಾಗೃತಿ: ದೇಶದಲ್ಲಿ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈಗ ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳಿವೆ. ರಾಜ್ಯದಲ್ಲಿ ಪ್ರತಿದಿನ ಸುಮಾರು 10 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಔಷಧ ಕಂಡುಹಿಡಿಯುವವರೆಗೂ ಪ್ಲಾಸ್ಮಾ ಚಿಕಿತ್ಸೆ ನೀಡಿ ಸೋಂಕಿತರನ್ನು ಗುಣಮುಖರನ್ನಾಗಿ ಮಾಡಬಹುದು ಎಂಬ ಕಾರಣಕ್ಕೆ ಎಲ್ಲೆಡೆ ಪ್ಲಾಸ್ಮಾ ದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮೈಸೂರಿನಲ್ಲಿ ಕೋವಿಡ್ ದಿಂದ ಗುಣಮುಖರಾಗಿರುವವರು ಪ್ಲಾಸ್ಮಾ ದಾನ ಮಾಡಲು ಅನುಕೂಲವಾಗುವಂತೆ ಈ ಯಂತ್ರ ಲೋಕಾರ್ಪಣೆ ಮಾಡಿರುವುದು ಒಳ್ಳೆಯ ವಿಚಾರ ಎಂದರು.
ಪರವಾನಗಿ: ದೊಡ್ಡ ದೊಡ್ಡ ಆಸ್ಪತ್ರೆಗಳಿಗೇ ಇನ್ನೂ ಈ ಯಂತ್ರ ಬಳಸಲು ಪರವಾನಗಿ ಸಿಕ್ಕಿಲ್ಲ. ಆದರೆ, ಇವರು ಎಷ್ಟೋ ವರ್ಷಗಳ ಹಿಂದೆಯೇ ಮುಂದಾಲೋಚನೆಯಿಂದ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಇದನ್ನು ಜನರು ಬಳಸಿಕೊಳ್ಳಬೇಕು. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಸೋಂಕನ್ನು ಹಿಮ್ಮೆಟ್ಟಿಸಲು ಸರ್ಕಾರ ತಿಳಿಸಿರುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಎಷ್ಟೋ ಕಡೆ ರಕ್ತವನ್ನು ತೆಗೆದು ಅದರಿಂದ ಪ್ಲಾಸ್ಮಾ ಬೇರ್ಪಡಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಹಾಗೆ ಮಾಡಿದರೆ ಮತ್ತೆ ಮೂರು ತಿಂಗಳೂ ರಕ್ತದಾನ ಮಾಡುವಂತಿಲ್ಲ. ಆದರೆ, 17 ಲಕ್ಷ ರೂ. ಮೊತ್ತದ ಈ ಯಂತ್ರದಲ್ಲಿ ನೇರವಾಗಿ ಪ್ಲಾಸ್ಮಾ ಪಡೆಯಬಹುದು. ರಕ್ತ ಮತ್ತೆ ದೇಹಕ್ಕೆ ಸೇರುತ್ತದೆ. 15 ದಿನಗಳ ನಂತರಮತ್ತೆದಾನಮಾಡಬಹುದು. ಪ್ಲಾಸ್ಮಾ ಪಡೆಯುವ ಮುನ್ನ ಅವರನ್ನು ಸಂಪೂರ್ಣವಾಗಿ ಪರೀಕ್ಷೆಗೊಳಪಡಿಸಿ ನಂತರ ಪ್ಲಾಸ್ಮಾ ಪಡೆಯುತ್ತೇವೆ. ಇದರಿಂದ ಅವರಿಗೂ ಸಮಸ್ಯೆಯಿಲ್ಲ ಎಂದು ಮಾಹಿತಿ ನೀಡಿದರು.
ಜೀವ ಉಳಿಸಿ: ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಮಾತನಾಡಿ, ಕೋವಿಡ್ ದಿಂದ ಗುಣಮುಖ ರಾದ ಪೊಲೀಸರು ಸೇರಿದಂತೆ ಇನ್ನೂ ಸಾಕಷ್ಟು ಜನ ಪ್ಲಾಸ್ಮಾ ದಾನ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾಮಾನ್ಯ ಜನರು ಹೆದರದೆ ಪ್ಲಾಸ್ಮಾ ದಾನ ಮಾಡಿ, ಇನ್ನೊಬ್ಬರ ಜೀವ ಉಳಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ರಕ್ತನಿಧಿ ಕೇಂದ್ರದ ನಿರ್ದೇಶಕ ಮುತ್ತಣ್ಣ, ಡಾ.ಸುದೀರ್, ಡಾ.ಮಂಜುನಾಥ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.