ನಗರದಲ್ಲಿ ನೀರು ಸೋರಿಕೆ ತಡೆಗೆ ಶೀಘ್ರವೇ ಸ್ಕಾಡಾ
Team Udayavani, Sep 11, 2020, 1:08 PM IST
ಮೈಸೂರು: ನಗರಕ್ಕೆ ಪೂರೈಕೆಯಾಗುವ ಕುಡಿಯುವನೀರು ಎಲ್ಲಿ ಪೋಲಾಗುತ್ತಿದೆ, ಏನೇನು ಅವ್ಯವಹಾರ ನಡೆಯುತ್ತಿದೆ, ಲ್ಲಿ ಏನೇನು ಸಮಸ್ಯೆಗಳಿವೆ ಎಂಬು ದರ ಬಗ್ಗೆ ನಿಗಾ ಇಡಲು ಸ್ಕಾಡಾ(ಸೂಪವೈಸರಿ ಕಂಟ್ರೋಲ್ ಎಂಡ್ ಡೇಟಾ ಅನಾಲಿಟಿಕ್ಸ್ ಆಕ್ವಿಸಿಷನ್) ಎಂಬ ಹೊಸ ತಂತ್ರ ಜ್ಞಾನವೊಂದನ್ನು ಅಭಿವೃದ್ಧಿ ಪಡಿಸಲು ವಾಣಿ ವಿಲಾಸ ನೀರು ಸರಬರಾಜು ಮಂಡಳಿಯು ಮುಂದಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೈಸೂರಿಗೆ ಅವಶ್ಯ ಕತೆ ಇರುವುದು 170 ಎಂಎಲ್‌ಡಿ ನೀರು. ಇಲ್ಲಿಗೆ 260ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಆದರೆ ನಗರದ ಎಷ್ಟೋ ಬಡಾವಣೆಗಳಲ್ಲಿ ನೀರಿನ ಜ್ವಲಂತ ಸಮಸ್ಯೆಇದೆ. ಇದನ್ನು ಬಗೆಹರಿಸಲು ಸ್ಕಾಡಾ ಎಂಬ ಈ ಹೊಸ ತಂತ್ರಜ್ಞಾನ ರೂಪಿಸಲಾಗುತ್ತದೆ ಎಂದರು. ವರ್ಷದೊಳಗೆ ಪೂರ್ಣ: ಐಎಲ್ ಎಂಡ್ ಎಫ್ಎಸ್ ಕಂಪನಿಗೆ ನೀಡಿರುವ ಗುತ್ತಿಗೆಯಲ್ಲಿ ಸ್ಕಾಡಾ ತಂತ್ರಜ್ಞಾನ ಅಳವಡಿಕೆ ಕೂಡ ಸೇರಿದೆ. ಇನ್ನು 24 ತಿಂಗಳೊಳಗೆಎಲ್ಲವೂ ಸಿದ್ಧವಾಗಲಿದೆ. ಈ ಮೂಲಕ ನೀರು ಸರಬ ರಾಜಿನಲ್ಲಿ ಆಗುತ್ತಿರುವ ಅವ್ಯವಹಾರಗಳು ನಿಯಂತ್ರಣಕ್ಕೆ ಬರಲಿವೆ. ಇಂತಹ ಯೋಜನೆಗಳು ಬೃಹತ್ ಮೈಸೂರು ಮಹಾನಗರಪಾಲಿಕೆ ರಚನೆಗೆ ಪೂರಕವಾಗಿರಲಿದೆ. ನಗರದ ಅಂಚಿನಲ್ಲಿರುವ ಗ್ರಾಮಗಳನ್ನು ಪಾಲಿಕೆವ್ಯಾಪ್ತಿಗೆ ಸೇರಿಸಿಕೊಂಡರೆ ನೀರು ಸರಬರಾಜು ಹೆಚ್ಚು ಬೇಕಾಗುತ್ತದೆ. ಈ ಪ್ರಕ್ರಿಯೆ ಸ್ಕಾಡಾ ಪೂರಕವಾಗಲಿದೆ ಎಂದು ಮಾಹಿತಿ ನೀಡಿದರು.
9 ಗ್ರಾಪಂ ಸೇರ್ಪಡೆ: ಬೃಹತ್ ಮೈಸೂರು ಮಹಾ ನಗರ ಪಾಲಿಕೆ ಮಾಡಲು ನಗರದ ಸುತ್ತಲಿನ 9 ಗ್ರಾಪಂಗಳನ್ನು ಸೇರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಬಾರಿಯ ಗ್ರಾಪಂ ಚುನಾವಣೆ ನಡೆಯುವ ಮುನ್ನವೇ ಗ್ರಾಮಗಳನ್ನು ನಗರಪಾಲಿಕೆಗೆ ಸೇರಿಸುವ ಪ್ರಕ್ರಿಯೆ ಚುರುಕಾಗಬೇಕು. ಒಮ್ಮೆ ಚುನಾವಣೆ ಸುತ್ತೋಲೆ ಹೊರಡಿಸಿದರೆ ಮತ್ತೆ ಪ್ರಕ್ರಿಯೆ ಮುಂದೂಡಲ್ಪಡು ತ್ತದೆ.ಗ್ರಾಮಗಳನ್ನು ನಗರ ವ್ಯಾಪ್ತಿಗೆ ಸೇರಿಸಿ 15 ಲಕ್ಷಕ್ಕೂ ಹೆಚ್ಚುಜನಸಂಖ್ಯೆ ಆದರೆ ಮೊನೊ ರೈಲು, ಮೆಟ್ರೋ ರೈಲುಸೇರಿದಂತೆ ಸಾಕಷ್ಟು ಯೋಜನೆಗಳನ್ನು ತರಬಹುದು.ಆದ್ದರಿಂದ ಬೃಹತ್ ಮೈಸೂರು ಮಹಾನಗರಪಾಲಿಕೆರಚನೆ ಬಗ್ಗೆ ಸಾಕಷ್ಟು ಗಮನ ಹರಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಸ್ಕಾಡಾ ತಂತ್ರಜ್ಞಾನ ಕಾರ್ಯವೈಖರಿ ಹೇಗೆ? : ಸ್ಕಾಡಾ ಕುರಿತು ಮಾಹಿತಿ ನೀಡಿದ ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಎಇಇ ಆಸಿಫ್ “ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿನಿಯಂತ್ರಣ ಕೊಠಡಿ ಸ್ಥಾಪಿಸಿ ಇಡೀ ನಗರದ ನೀರು ಸರಬರಾಜು ವ್ಯವಸ್ಥೆಯ ಮೇಲೆ ನಿಗಾ ಇಡಲಾಗು ತ್ತದೆ. ಸೋಲಾರ್ ಮತ್ತು ಎಲೆಕ್ಟ್ರಿಕಲ್ ಆ್ಯಕುcಯೇಟರ್ ಗಳು, ಪ್ರೋ ಮೀಟರ್, ಕ್ಯಾಮರಾ ಗಳು, ಸೆನ್ಸಾರ್ ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವ ಹಿಸುತ್ತವೆ. ಎಲ್ಲಿಗೆ ಎಷ್ಟು ನೀರು ಸರಬರಾಜಾಗು ತ್ತಿದೆ, ಎಲ್ಲಿ ನೀರುಸೋರಿಕೆಯಾಗುತ್ತಿದೆ, ಎಲ್ಲಿ ಕಳ್ಳತನ ಆಗುತ್ತಿದೆ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಈ ತಂತ್ರಜ್ಞಾನ ಬಳಸಿ ನೀರಿನಲ್ಲಿರುವ ಪಿಎಚ್, ಕ್ಲೋರಿನ್ ಮತ್ತಿತರ ಅಂಶಗಳ ಪ್ರಮಾಣವನ್ನು ತಿಳಿಯಬಹುದು. ಎಲ್ಲವೂ ಆನ್‌ಲೈನ್ ಮೂಲಕ ಆಗಲಿದೆ. ನೀರು ಸರಬರಾಜಿನ ಮೇಲ್ವಿಚರಾಣೆ, ನಿಯಂತ್ರಣ ಎರಡನ್ನೂ ಇದರಿಂದ ಮಾಡಬಹುದು. ಇಂತಹ ವ್ಯವಸ್ಥೆ ಬೆಂಗಳೂರಿನಲ್ಲಿದೆ. ಕೆಲವು ಸಣ್ಣ ಸಣ್ಣ ಊರುಗಳಲ್ಲಿ ನೀರು ಸರಬರಾಜಿನ ಮೇಲ್ವಿಚಾರಣೆ ಇದ್ದರೂ ನಿಯಂತ್ರಣ ವ್ಯವಸ್ಥೆ ಇಲ್ಲ. ಇದು ಸುಮಾರು 50 ಕೋಟಿ ರೂ. ವೆಚ್ಚದ ಯೋಜನೆ’ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.