ಕೌಶಲ್ಯ ಕರ್ನಾಟಕ ಸಿದ್ದರಾಮಯ್ಯರ ಕನಸು
Team Udayavani, May 17, 2017, 12:28 PM IST
ನಂಜನಗೂಡು: ಕೌಶಲ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸು ಎಂದು ಶಾಸಕ ಕಳಲೆ ಕೇಶವ ಮೂರ್ತಿ ಹೇಳಿದರು. ಪಟ್ಟಣದ ತಾಪಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿರುದ್ಯೋಗಿ ಯುವಕ/ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದ 18 ರಿಂದ 35 ವರ್ಷದ ಎಲ್ಲರನ್ನೂ ಸ್ವಾವಲಂಬಿಗಳಾಗಿಸಬೇಕು ಎಂಬ ಮಹತ್ತರವಾದ ಸದುದ್ದೇಶದೊಂದಿಗೆ ಆರಂಭಗೊಂಡ ಈ ಯೋಜನೆಯಲ್ಲಿ ನಿರುದ್ಯೋಗಿಗಳೆಲ್ಲ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರ ರಾಜ್ಯದ ವಿವಿಧೆಡೆಯಲ್ಲಿ ನೂತನ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು ನಿಮ್ಮ ಅನುಭವದ ಆಧಾರದ ಮೇಲೆ ನಿಮಗೆ ಎಲ್ಲೇ ಉದ್ಯೋಗಕ್ಕೆ ಕರೆ ಬಂದರೂ ನೀವು ಅಲ್ಲಿ ಹೋಗಿ ಕರ್ತವ್ಯ ನಿರ್ವಹಿಸಲು ಸಿದ್ಧರಾಗಬೇಕು ಎಂದು ಯುವಜನತೆಯಲ್ಲಿ ಮನವಿ ಮಾಡಿದರು. ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್ ಮಾತನಾಡಿ, ಮಹಿಳೆಯರು ಇಂದು ಪುರುಷರಿಗೆ ಸರಿಸಮಾನವಾಗಿ ಸ್ವಾವಲಂಬಿಗಳಾಗಲು ವಿವಿಧ ಕೌಶಲ್ಯಅರಿವು ಬೇಕಾಗಿದೆ ಎಂದು ತಿಳಿಸಿದರು.
ಸಾವಿರ ರೂ ಬೆಲೆಯ ಸೀರೆಗೆ ಬೇಕು 500 ರೂ ಕೂಲಿ ನಿಗದಿಯಾಗಿರುವ ಕುಪ್ಪಸ ಎಂದ ಅವರು ಕೌಶಲ್ಯಭರಿತವಾದ ರವಿಕೆ ಹೊಲಿಯಲು ಇಂದು 500 ನೀಡಬೇಕಾಗುತ್ತದೆ. ಇಂತಹ ಕಲಾತ್ಮಕ ಕಲೆಯನ್ನು ಮಹಿಳೆಯರೇ ಹಿಚ್ಚಿರುವ ನೀವೆಲ್ಲ ಈ ಮುಖಾಂತರವಾದರೂ ಕಲಿತುಕೊಳ್ಳಿ, ಮನೆಯಲ್ಲೇ ಕುಳಿತು ಕಸೂತಿ ಮಾಡಿದ ವಸ್ತ್ರಗಳನ್ನು ಸಿದ್ಧಪಡಿಸಿ ಆರ್ಥಿಕವಾಗಿ ಬಲಾಡ್ಯಾರಾಗಬೇಕು. ಕೌಶಲ್ಯ ಭಾರತ ಪ್ರಧಾನಿ ಮೋದಿಯವರ ಕನಸು ರಾಜ್ಯ ಸರ್ಕಾರ ಕೇಂದ್ರದ ಉದ್ದೇಶದ ಪ್ರಕಾರ ಜಾರಿಗೆ ತರುತ್ತಿದೆ ಎಂದರು.
ತಾ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ಶಿವಣ್ಣರಾಷದ ಮಾನವ ಸಂಪನ್ಮೂಲಗಳಣ್ನು ಹೆಚ್ಚೇಚ್ಚು ಬಳಸಿಕೋಳ್ಳುವ ಮಹತ್ತರವಾದ ಉದ್ದೇಶದೋಮದಿಗೆ ಈ ಯೋಜನೆ ಆರಂಭಗೊಂಡಿದೆ ಎಂದರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರೇವಣ್ಣ , ನಿರುದ್ಯೋಗಿಗಳಾದ ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಳ್ಳಲು ತಾಪಂ ಕಚೇರಿಯಲ್ಲಿ 10 ವಿಭಾಗ ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ನೀವೆಲ್ಲ ಅರ್ಜಿಗಳನ್ನು ಪಡೆದು ಅಥವಾ ಆನ್‌ಲೈನ್ ಮೂಲಕ ನಿಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ ನಿಮಗೆ ಇಲ್ಲಿ 42 ರೀತಿಯ ತರಬೇತಿ ನೀಡಲಾಗುವುದು ಸರ್ಕಾರದಿಂದ ಬರುವ ಕರೆಯನ್ನು ನಿರೀಕ್ಷಿಸಿ ಎಂದರು.
ತಾಪಂ ಸದಸ್ಯ ರಾಮು, ಜಿಪಂ ಸದಸ್ಯೆ ಲತಾಸಿದ್ದಶೆಟ್ಟಿ, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ತಾಪಂ ಸದಸ್ಯರಾದ ಬಿ.ಎಸ್ ರಾಮು, ಮೂಗಶೆಟ್ಟಿ ಶಿವಪ್ಪ, ದೊಡ್ಡಿರಮ್ಮ, ವೆಂಕಟೇಶ, ಮಹೇಂದ್ರ ನಗರಸಭಾ ಅಧ್ಯಕ್ಷೆ ಪುಷ್ಪಲತಾ ಕಮಲೇಶ, ಆಯುಕ್ತ ವಿಜಯ ಮುಂತಾದವರು ಉಪಸ್ಥಿತಿರಿದ್ದರು. ತಹಶೀಲ್ದಾರ್ ದಯಾನಂದ್ ಸ್ವಾಗತಿಸಿ, ಪರಮೇಶಪ್ಪ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.