ನಿದ್ದೆಗೆಡಿಸಿದ ಬಂಡಾಯ ಸ್ಪರ್ಧಿಗಳು
ನಗರಸಭೆ ಚುನಾವಣೆಗೆ ಟಿಕೆಟ್ ಸಿಗದೆ ಬಂಡಾಯ • ಎಲ್ಲಾ ಪಕ್ಷಗಳಲ್ಲೂ ಇದೇ ಪರಿಸ್ಥಿತಿ
Team Udayavani, May 29, 2019, 1:25 PM IST
ನಂಜನಗೂಡು ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಂಸದ ಆರ್. ಧ್ರುವನಾರಾಯಣ ಪ್ರಚಾರ ನಡೆಸಿದರು.
ನಂಜನಗೂಡು: ಇಲ್ಲಿನ ನಗರಸಭೆ 31 ವಾರ್ಡುಗಳಿಗೆ 134 ಮಂದಿ ಸ್ಪರ್ಧಿಸಿದ್ದಾರೆ. ಬಹುತೇಕ ಕಡೆಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದರೆ ಹಲವಡೆ ಬಿಜೆಪಿ – ಕಾಂಗ್ರೆಸ್ ಬಂಡಾಯ ಗಾರರು ಅಧಿಕೃತ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದಾರೆ.
ಶಾಸಕರು ಸಂಸದರ ಬೆಂಬಲದೊಂದಿಗೆ ನಗರಸಭೆಯ 2 ದಶಕಗಳ ಅತಂತ್ರ ಹೋಗಲಾಡಿಸಿ ಅಧಿಕಾರ ಕಬಳಿಸಲು ಬಿಜೆಪಿ ಹಾತೊರೆಯುತ್ತಿದ್ದರೆ ಶಾಸಕರು ಹಾಗೂ ಪಕ್ಷದ ಸ್ಥಳಿಯ ಮುಖಂಡರ ನಡುನ ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರದ ವರೆಗಿನ ಗೊಂದಲವನ್ನೇ ಅಧಿಕಾರ ಹಿಡಿಯುವ ಏಣಿಯಾಗಿಸಿಕೊಳ್ಳಲು ಮಾಜಿ ಸಂಸದ ಆರ್.ಧ್ರುವನಾರಾಯಣ ಹಾಗೂ ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ಅವರ ನೇತೃತ್ವದ ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಕಾಂಗ್ರೆಸ್ -ಬಿಜೆಪಿಯ ಅಧಿಕಾರದ ಹಣಾಹಣಿಯಲ್ಲಿ ಅತಂತ್ರ ಸೃಷ್ಟಿಯಾಗಿ ತಮಗೊಂದಿಷ್ಟು ಪಾಲು ಯಾರಿಂದ ಸಿಕ್ಕೀತು ಎನ್ನುವ ಆಸೆ ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್. ಮಹದೇವಸ್ವಾ ಅವರದ್ದಾಗಿದೆ.
ಕಾಂಗ್ರೆಸ್ – ಬಿಜೆಪಿ ಟಿಕೆಟ್ ವಂಚಿತರು ಹಲವಡೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲನ್ನೇ ಗುರಿಯಾಗಿಸಿಕೊಂಡು ಗುಪ್ತ ಹೋರಾಟ ಕೈ ಹಾಕಿದ್ದಾರೆ. ಆದರೆ, ಗೆಲವು ಯಾರಿಗೆ ಎಂಬುದನ್ನು ನಂಜನಗೂಡಿನ 42 ಸಾವಿರಕ್ಕೂ ಹೆಚ್ಚು ಮತದಾರರು ಬುಧವಾರ ತೀರ್ಮಾನಿಸಲಿದ್ದಾರೆ.
ಗುಂಪುಗಾರಿಕೆ ಕಾಂಗ್ರೆಸ್: ಕೈ ಪಕ್ಷದಲ್ಲೂ ಗುಂಪುಗಾರಿಕೆ ಇದ್ದು ಸ್ಥಳೀಯರಿಗಿಂತ ರಾಜ್ಯ ಮಟ್ಟದ ನಾಯಕರಲ್ಲಿನ ಅಸಮಾ ಧಾನದ ಬಿಸಿ ತಾಗುತ್ತಿದೆ. 27 ವಾರ್ಡುಗಳಿಗೂ ಅಭ್ಯರ್ಥಿ ಇಲ್ಲದ ಜನತಾ ದಳದಿಂದಲೂ ಅಲ್ಲಲ್ಲಿ ಬಂಡಾಯ ರಾಜಕಾರಣವಿದ್ದು ಅಷ್ಟೇನು ಪ್ರಭಾವ ಬೀರಲಾರದು ಎಂದು ತಿಳಿದು ಬಂದಿದೆ
ಎಚ್ಸಿಎಂ ರಂಗ ಪ್ರವೇಶ: ಮಾಜಿ ಸಂಸದ ಆರ್.ಧ್ರುವನಾರಾಯಣ ಹಾಗೂ ಕೇಶವ ಮೂರ್ತಿ ಅವರ ವಿರುದ್ಧ ಅಸಮಾ ಧಾನದಿಂದ ಕುದಿಯುತ್ತಿರುವ ಲೋಕೋಪ ಯೋಗಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಈಗ ನಂಜನಗೂಡಿನ ನಗರಸಭಾ ಚುನಾವಣೆಗೆ ರಂಗ ಪ್ರವೇಶ ಮಾಡಿದ್ದಾರೆ.
ಭಾನುವಾರ ನಂಜನಗೂಡಿಗೆ ಆಗಮಿಸಿ ಎಲ್ಲಾ 31 ಅಭ್ಯರ್ಥಿಗಳ ಸಭೆ ನಡೆಸಿದ್ದೂ ಅಲ್ಲದೆ ಅವರನ್ನೆಲ್ಲಾ ಆರ್ಥಿಕವಾಗಿ ಹುರಿ ದುಂಬಿಸಿ ವಾಪಸಾಗಿರುವುದು ತಾಲೂಕು ಕಾಂಗ್ರೆಸ್ ಅನ್ನು ಮುಂದಿನ ರಾಜಕಾರಣದ ದಿಕ್ಸೂಚಿಯಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.