ತಂಬಾಕು ದುಶ್ಚಟ ಕೈಬಿಡಲು ಜಾಥಾ
Team Udayavani, Oct 9, 2021, 1:10 PM IST
ಎಚ್.ಡಿ.ಕೋಟೆ: ಪಟ್ಟಣದಲ್ಲಿ ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಜಾಥಾ ನಡೆಸಿದ ವಿದ್ಯಾರ್ಥಿಗಳು, ಎಚ್.ಡಿ. ರಸ್ತೆ ಮೂಲಕ ಮೆರವಣಿಗೆ ನಡೆಸಿದರು.
ಈ ವೇಳೆ ರಸ್ತೆ ಬದಿಯಲ್ಲಿರುವ ಪೆಟ್ಟಿಗೆ ಅಂಗಡಿಗಳು, ರಸ್ತೆ ವ್ಯಾಪಾರಿಗಳು ಹಾಗೂ ತಂಬಾಕು ಸೇವನೆ ರೂಢಿಸಿ ಕೊಂಡಿರುವ ಹಲವರನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು ತಂಬಾಕಿನಿಂದ ಶ್ವಾಸಕೋಶ, ಗಂಟಲು, ವಸಡು ಕ್ಯಾನ್ಸರ್ ಮತ್ತಿತರ ಮಾರಕ ಕಾಯಿಲೆಗಳು ಬರುತ್ತವೆ.
ಇದನ್ನೂ ಓದಿ;- ತಂಬಾಕು ದುಶ್ಚಟ ಕೈಬಿಡಲು ಜಾಥಾ
ಹೀಗಾಗಿ ತಂಬಾಕು ಸೇವನೆ ಕೈಬಿಡಬೇಕು ಎಂದು ಮನವಿ ಮಾಡಿದರು. ಬೀಡಿ, ಸಿಗರೆಟು, ಗುಟ್ಕಾ, ಪಾನ್ ಪರಾಗ್ ಮತ್ತಿತರ ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಗುಲಾಬಿ ನೀಡಿ ಜಾಗೃತಿ ಮೂಡಿಸಿ ದರು.
ಈ ವೇಳೆ ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿ ರೇವಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ರಾಮ್ ಪ್ರಸಾದ್, ಕೆ. ಎಂ.ರಾಜ, ರವಿ, ಶಂಕರ್, ರತ್ನಯ್ಯ, ಆನಂದ್, ದೇವರಾಜು, ವಿಶ್ವನಾಥ್, ಲತಾ, ವಿನಾಯಕ ಶ್ರೇಯಸ್, ನಾಗೇಂದ್ರ, ರವಿರಾಜು, ಪ್ರತಾಪ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಕಾರು, ಬೈಕ್, ಸೈಕಲ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರ ಬಂಧನ
Hunsur: ಕಾರುಗಳ ಮುಖಾಮುಖಿ ಡಿಕ್ಕಿ; ಒರ್ವ ಸಾವು, ಐವರಿಗೆ ಗಾಯ
Mysuru:’ಕರ್ನಾಟಕದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.