ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ಸಮಾಜ ಕಲ್ಯಾಣ ಇಲಾಖೆ ಗುಮಾಸ್ತ
Team Udayavani, Jun 2, 2020, 10:44 AM IST
ಮೈಸೂರು: ಸಮಾಜ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಗುಮಾಸ್ತ (ಎಸ್ಡಿಎ) ಶಿವಣ್ಣ ಅವರು ಒಂದು ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ರಾವಂದೂರಿನ ಹಾಸ್ಟೆಲ್ ವಾರ್ಡ್ನ್ ಎಚ್.ರಾಜಯ್ಯ ಎಂಬುವವರಿಗೆ ನೀಡಲಾಗಿದ್ದ ಕಾರಣ ಕೇಳಿ ನೋಟಿಸು ವಾಪಸ್ ಪಡೆಯಲು ಹಾಗೂ ಹಾಸ್ಟೆಲ್ ಅನ್ನು ತಪಾಸಣೆ ನಡೆಸದಿರಲು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು ಅವರನ್ನು ಒಪ್ಪಿಸುವುದಾಗಿ ಹೇಳಿದ ಶಿವಣ್ಣ ಒಟ್ಟು 1.5 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಮೊದಲೇ 50 ಸಾವಿರ ರೂ ಹಣವನ್ನು ರಾಜಯ್ಯ ನೀಡಿದ್ದರು. ಮತ್ತೆ ಒಂದು ಒಂದು ಲಕ್ಷ ಹಣ ನೀಡಲೇ ಬೇಕು ಎಂದು ಶಿವಣ್ಣ ಹಠ ಹಿಡಿದಾಗಿ ರಾಜಯ್ಯ ಎಸಿಬಿಗೆ ದೂರು ನೀಡಿದರು.,
ಉಳಿದ ಒಂದು ಲಕ್ಷ ರೂ. ಹಣವನ್ನು ಪಡುವಾರಹಳ್ಳಿ ವೃತ್ತದಲ್ಲಿ ತೆಗೆದುಕೊಳ್ಳುವಾಗ ಶಿವಣ್ಣ ಅವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.