ಎನ್‌ಎಸ್‌ಎಸ್‌ನಿಂದ ಸಮಾಜಮುಖೀ ಕಾರ್ಯ


Team Udayavani, Oct 11, 2017, 12:11 PM IST

6my.jpg

ಹುಣಸೂರು: ಎನ್‌ಎಸ್‌ಎಸ್‌ ಎಂದರೆ ಒಂದು ರಾಷ್ಟ್ರೀಯ ಚಳುವಳಿ, ಇಲ್ಲಿ ಭಾವೈಕ್ಯತೆ, ಜಾತ್ಯತೀತತೆ, ಸಮಾನತೆ, ಸಾಮಾಜಿಕ ನ್ಯಾಯ, ಗ್ರಾಮೀಣ ಬದುಕಿನ ಪರಿಚಯ ಸೇರಿದಂತೆ ಹಲವು ಮಜಲುಗಳನ್ನು ಪ್ರಸ್ತುತ ಪಡಿಸುವುದೇ ಆಗಿದೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಎನ್‌.ಪೂಜಾರ್‌ ಅಭಿಪ್ರಾಯಪಟ್ಟರು.

ಹುಣಸೂರು ತಾಲೂಕಿನ ಹನಗೋಡಿನಲ್ಲಿ ಹುಣಸೂರು ಸರಕಾರಿ ಮಹಿಳಾ ಕಾಲೇಜು ವತಿಯಿಂದ ಆಯೋಜಿಸಿದ್ದ ಮೈಸೂರು ವಿವಿಯ ಜಿಲ್ಲಾ ಮಟ್ಟದ ಅಂತರ ಕಾಲೇಜುಗಳ ಎನ್‌ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.

ಶಿಕ್ಷಣಕ್ಕೆಷ್ಟು ಶಕ್ತಿ ಇದೆಯೋ., ಅದಕ್ಕೆ ಪೂರಕವಾಗಿ ದೇಶಕಟ್ಟುವ, ರಾಷ್ಟ್ರಭಕ್ತಿ ಮೆರೆವ ರಾಷ್ಟ್ರೀಯ ಸೇವಾ ಯೋಜನೆಗೂ ಅಷ್ಟೇ ಪರಿಪೂರ್ಣ ವಿದ್ಯಾರ್ಥಿಗಳನ್ನು ಸಷ್ಟಿಸುವ ಶಕ್ತಿಯಿದೆ ಎಂಬುದು ಸಾಬೀತಾಗಿದೆ. 1969ರಲ್ಲಿ ಗಾಂಧೀಜಿ ಹುಟ್ಟು ಹಾಕಿದ ಎನ್‌ಎಸ್‌ಎಸ್‌ ಘಟಕವು ಕೇವಲ 37 ವಿವಿಗಳಲ್ಲಿ ಮಾತ್ರ ಆರಂಭಗೊಂಡಿತು, ಇಂದು ದೇಶದ 750 ವಿವಿಗಳಲ್ಲಿ 50ಲಕ್ಷ, ಕರ್ನಾಟಕದಲ್ಲಿ 5 ಲಕ್ಷ ಸ್ವಯಂ ಸೇವಕರಿದ್ದಾರೆ. ಈ ಯೋಜನೆಯು ಶಿಕ್ಷಣಕ್ಕೆ ತಳಪಾಯವಾಗಿದ್ದು ಎಲ್ಲರೂ ಇದರಲ್ಲಿ ತೊಡಗಿಕೊಳ್ಳಬೇಕು ಎಂದರು.

ಮೆಸೂರು ವಿವಿಯ ಉಪಕುಲಪತಿ ಪ್ರೋ ದಯಾನಂದ್‌ ಮಾನೆ ಮಾತನಾಡಿ ಗುಣಾತ್ಮಕ ಮತ್ತು ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ನೀಡುವ ಪರಿಸರ ಕಾಳಜಿ, ವ್ಯಕ್ತಿತ್ವ ವಿಕಸನಕ್ಕೆ ಮೆಟ್ಟಿಲಾಗಿರುವ ಎನ್‌ಎಸ್‌ಎಸ್‌, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸಮಾಜಮುಖೀ ಕಾರ್ಯಕ್ರಮ ಸೇರಿದಂತೆ ಎಲ್ಲವನ್ನು ಕಲ್ಪಿಸಿಕೊಡಲಿದೆ. ಇಂತಹ ಜಿಲ್ಲಾ ಮಟ್ಟದ ಶಿಬಿರವನ್ನು ಕಾಡಂಚಿನ ಪ್ರದೇಶದಲ್ಲಿ ಆಯೋಜಿಸುವ ಮೂಲಕ ಸ್ತುತ್ಯರ್ಹ ಕಾರ್ಯ ಮಾಡಲಾಗಿದೆ ಎಂದು ಪ್ರಶಂಸಿಸಿದರು.

ರಾಜ್ಯ ಮಟ್ಟದ ಶಿಬಿರ ಆಯೋಜಿಸಿ: ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಎಚ್‌.ಪಿ.ಮಂಜುನಾಥ್‌ ವಿದ್ಯಾರ್ಥಿಗಳಲ್ಲಿ ಎಲ್ಲ ರಂಗವನ್ನು ಗೆಲ್ಲಿಸುವ ರಾಷ್ಟ್ರೀಯ ಸೇವಾ ಯೋಜನೆಯು ಮಾನವೀಯ ಮೌಲ್ಯಗಳನ್ನು ಬೆಳೆಸಲಿದೆ, ತಾವು ಕೂಡ ಎನ್‌ಎಸ್‌ಎಸ್‌ ವಿದ್ಯಾರ್ಥಿಯಾಗಿದ್ದೆ, ಆ ಮೂಲಕವೇ ನಾಯಕತ್ವ, ಸಮುದಾಯ ಸೇವಾ ಪರಿಕಲ್ಪನೆ ಅಳವಡಿಸಿಕೊಂಡಿದ್ದೇನೆ. ತಾಲೂಕಿನಲ್ಲಿ ರಾಜ್ಯ ಮಟ್ಟದ ಎನ್‌ಎಸ್‌ಎಸ್‌ ಶಿಬಿರ ನಡೆಸಲು ಅವಕಾಶ ಕಲ್ಪಿಸಿದ್ದೆ ಆದಲ್ಲಿ ನಡೆಸಲು ಉತ್ಸುಕರಾಗಿದ್ದೇವೆಂದರು.

ಸಂಶೋಧನೆಗೆ ಹೊಸ ಆಯಾಮ: ವಿವಿಯ ಎನ್‌ಎಸ್‌ಎಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್‌ ಶಿಬಿರಾರ್ಥಿಗಳಲ್ಲಿ ಎನ್‌ಎಸ್‌ಎಸ್‌ ಒಳ್ಳೆ ವಿಚಾರಗಳನ್ನು ನಿಮ್ಮ ತಲೆಗೆ ತುಂಬಲಿದೆ, ಮನಪರಿವರ್ತನೆ ಮಾಡಲಿದೆ, ನಡವಳಿಕೆಯಲ್ಲಿ ಬದಲಾವಣೆಯನ್ನು ಕಾಣಿಸಲಿದೆ, ದುವರ್ತನೆಗಳು ದೂರವಾಗಲಿದೆ, ನೈತಿಕ ಶಕ್ತಿ ತುಂಬಲಿದೆ, ಮೌಲ್ಯವನ್ನು ಬಿತ್ತಲಿದೆ ಹೊಸ ಆಯಾಮ ಸಷ್ಠಿಸಲಿದೆ ಎಂದರು.

ಗ್ರಾಪಂ ಅಧ್ಯಕ್ಷ ಎಚ್‌.ಬಿ.ಮಧು, ತಾಪಂ ಸದಸ್ಯೆ ರೂಪಾ, ಜಿಪಂ ಮಾಜಿ ಸದಸ್ಯ ಸಿ.ಟಿ.ರಾಜಣ್ಣ, ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಜ್ಞಾನಪ್ರಕಾಶ್‌, ಸಲಹಾ ಸಮಿತಿ ಸದಸ್ಯ ಹನಗೋಡು ನಟರಾಜ್‌  ಮಾತನಾಡಿದರು. ಶಿಬಿರದ ಸಂಯೋಜಕ ಕೆ.ಎಸ್‌.ಬಾಸ್ಕರ್‌, ಸಹ ಶಿಬಿರಾಧಿಕಾರಿ ನಂಜುಂಡಸ್ವಾಮಿ ವಾರಕಾಲ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ತಾಪಂ ಸದಸ್ಯೆ ಮಂಜುಳಾ, ಗ್ರಾಪಂ ಸದಸ್ಯರಾದ ಇಮಿ¤ಯಾಜ್‌ಪಾಷ, ಪೂಜಾ, ಮಂಗಳ, ಕಾಲೇಜು ಸಿಡಿಸಿ ಸದಸ್ಯರಾದ ಗೋವಿಂದರಾಜಗುಪ್ತ, ಡಾ.ವೃಷಬೇಂದ್ರಪ್ಪ, ಪ್ರಾಂಶುಪಾಲ ವೆಂಕಟೇಶಯ್ಯ, ದಾ.ರಾ.ಮಹೇಶ್‌ ಇತರರಿದ್ದರು. ಉದ್ಘಾಟನಾ ಸಮಾರಂಭದ ಅಂಗವಾಗಿ ಇಡೀ ಗ್ರಾಮದಲ್ಲಿ ಜಾಥಾ ನಡೆಸಿದ ಸ್ವಯಂಸೇವಕರು, ಕಾರ್ಯಕ್ರಮಕ್ಕಾಗಮಿಸಿದ ಅತಿಥಿಗಳನ್ನು  ಗ್ರಾಪಂ ಕಚೇರಿ ಬಳಿಯಿಂದ ವೀರಗಾಸೆ, ಡೊಳ್ಳುಕುಣಿತದೊಂದಿಗೆ ಮೆರವಣಿಗೆ ಮೂಲಕ ಗ್ರಾಮಸ್ಥರು ವೇದಿಕೆಗೆ ಕರೆತಂದರು.

ಟಾಪ್ ನ್ಯೂಸ್

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

Jammu: Union Minister Jitendra Singh’s brother, BJP MLA Devendra Singh Rana passed away

Jammu: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋದರ, ಬಿಜೆಪಿ ಶಾಸಕ ದೇವೇಂದ್ರ ಸಿಂಗ್‌ ರಾಣಾ ನಿಧನ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

6-shivaraja

Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Prathap-Simha

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

16

TTD ಹೊಸ ಮಂಡಳಿ: ಕರ್ನಾಟಕ ಮೂಲದ ನಿವೃತ್ತ ಸಿಜೆಐ ದತ್ತುಗೆ ಸ್ಥಾನ

15

New Delhi: ರಷ್ಯಾಗೆ ನೆರವು ಆರೋಪ; 19 ಭಾರತೀಯ ಸಂಸ್ಥೆಗಳಿಗೆ ಅಮೆರಿಕದಿಂದ ನಿರ್ಬಂಧ

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

14

Fadnavis: ಶೀಘ್ರವೇ ಮತ್ತಷ್ಟು ಕಾಂಗ್ರೆಸಿಗರು ಬಿಜೆಪಿ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.