ದಸರಾ ಪ್ರಾಧಿಕಾರಕ್ಕಾಗಿ ಏಕಾಂಗಿ ಪ್ರತಿಭಟನೆ
Team Udayavani, Sep 7, 2018, 11:24 AM IST
ಮೈಸೂರು: ಮೈಸೂರು ದಸರಾ ಪ್ರಾಧಿಕಾರ ರಚಿಸಿ, ದಸರೆಯನ್ನು ನಾಡಹಬ್ಬ ಎಂದು ಅಧಿಕೃತವಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಕೆ.ಎಂ.ನಿಶಾಂತ್, ಅರಮನೆ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದರು.
ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ನಿಧನರಾದ ಬಳಿಕ ದಸರೆಯನ್ನು ನಾಡಹಬ್ಬ ಎಂದು ಸರ್ಕಾರವೇ ಆಚರಿಸುತ್ತಾ ಬಂದಿದ್ದರೂ ಈವರೆಗೂ ನಾಡಹಬ್ಬ ಎಂದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಹೀಗಾಗಿ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ತರಾತುರಿಯ ಸಿದ್ಧತೆಗಳನ್ನು ಮಾಡಲಾಗುತ್ತದೆ.
ದಸರಾ ಮಹೋತ್ಸವಕ್ಕೆ ಕೇವಲ ಒಂದು ತಿಂಗಳು ಕಾಲಾವಕಾಶ ಇರುವಾಗ ಉಪ ಸಮಿತಿಗಳನ್ನು ರಚಿಸಿ, ಟೆಂಡರ್ ಕರೆಯಲಾಗುತ್ತದೆ. ದಸರಾ ಮಹೋತ್ಸವದಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರಿಗೆ ವರ್ಷ ಕಳೆದರೂ ಸಂಭಾವನೆ ಪಾವತಿಯಾಗುವುದಿಲ್ಲ. ಅದರ ಬದಲಿಗೆ ದಸರಾ ಪ್ರಾಧಿಕಾರ ರಚಿಸಿ, ವರ್ಷವಿಡೀ ದಸರಾ ನಡೆಯುವಂತೆ ಕಾರ್ಯಕ್ರಮ ರೂಪಿಸಬೇಕು.
ವಿಂಬಲ್ಡನ್ ಕ್ರೀಡಾ ಸಿದ್ಧತೆಯ ಮಾದರಿಯಲ್ಲೇ ದಸರೆ ಮುಗಿದ ಕೂಡಲೇ ಮುಂದಿನ ವರ್ಷದ ವರ್ಷದ ದಸರೆಯ ರೂಪುರೇಷೆಗಳು ಸಿದ್ಧಗೊಳ್ಳಬೇಕು. ಆ ರೀತಿ ವರ್ಷಪೂರ್ತಿ ದಸರಾ ಚಟುವಟಿಕೆಯಿಂದ ಕೂಡಿರುವ ದಸರಾ ಪ್ರಾಧಿಕಾರ ರಚನೆಯಾಗಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.