ಕೆಲವರು ದೇಶಭಕ್ತರ ಮುಖವಾಡ ಧರಿಸಿದ್ದಾರೆ
Team Udayavani, Dec 18, 2017, 1:35 PM IST
ಮೈಸೂರು: ಇತ್ತೀಚಿನ ದಿನಗಳಲ್ಲಿ ಅನೇಕರು ದೇಶಭಕ್ತರ ಮುಖವಾಡ ಧರಿಸಿ, ದೇಶ ಮತ್ತು ಸಮಾಜದ ಸ್ವಾಸ್ತ್ಯ ಹದಗೆಡಸುತ್ತಿರುವವರೇ ದೇಶಭಕ್ತರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರನಟ ಚೇತನ್ ವಿಷಾದಿಸಿದರು.
ಗಂಗೋತ್ರಿ ಚಿಂತಕರ ಚಾವಡಿ, ಮುಳ್ಳೂರು ವಿನಾಯಕ ಜಾnನ ವಿದ್ಯಾಶಾಲೆ ಸಹಯೋಗದಲ್ಲಿ ಮೈಸೂರು ವಿವಿ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಸಂವೇದನೆ ಅಗ್ಗಳಿಕೆ-ಸಾಂಸ್ಕೃತಿಕ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಆಧುನಿಕ ಯುಗದಿಂದ ಗ್ರಾಮೀಣ ಪ್ರದೇಶದ ಸಂಸ್ಕೃತಿ-ಕಲೆ ಅವನತಿ ಹಾದಿ ಹಿಡಿದಿದೆ. ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅಗತ್ಯವಿದ್ದು, ಕಲೆ ಮೂಲಕ ಸಮಾಜಿಕ ಪಿಡಗು ಹಾಗೂ ಸಮಸ್ಯೆಗೆ ಪರಿಹಾರ ನೀಡಬೇಕಿದೆ ಎಂದು ಹೇಳಿದರು.
ಇನ್ನೂ ದೇಶ¸ಕ್ತರ ಮುಖವಾಡ ಧರಿಸಿ, ದೇಶ ಮತ್ತು ಸಮಾಜದ ಸ್ವಾಸ್ತ್ಯ ಹದಗೆಡಿಸುತ್ತಿರುವವರೇ ದೇಶಭಕ್ತರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ದೇಶದ ಸಮಗ್ರತೆ ಸಾರುವ ಸಂವಿಧಾನ ಗೌರವಿಸುವವರು ನಿಜವಾದ ದೇಶ ಭಕ್ತರು ಎಂದು ಹೇಳಿದರು.
ಈ ಮುನ್ನ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ಉದ್ಘಾಟಿಸಿದರು. ಮುಳ್ಳೂರು ವಿನಾಯಕ ಜಾnನ ವಿದ್ಯಾಶಾಲೆ ಮಕ್ಕಳು ಪೂಜಾ ಕುಣಿತ ಮತ್ತು ವೀರಗಾಸೆ, ನಗರದ ಸುಂಬುದ್ದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಮಕ್ಕಳ ಡೊಳ್ಳು ಕುಣಿತ, ಬೆಂಗಳೂರಿನ ಬಾಲು ಮತ್ತು ತಂಡ ಜಂಡೆ ಝಲಕ್ ಪ್ರದರ್ಶನ ನೀಡಿತು.
ಇನ್ನು ಮಹಿಳಾಪರ, ಭಾವಗೀತೆ, ಜನಪದ ಗೀತೆ ಹಾಡುವ ಮೂಲಕ ಗಮನ ಸಳೆದರು. ಯುಎಸ್‌ಎ ಜನಪರ ವೈದ್ಯ ಡಾ.ಅಮರ್‌ಕುಮಾರ್, ಚಿಂತಕ ಪ್ರೊ.ಕಾಳೇಗೌಡ ನಾಗಾವಾರ, ಲೇಖಕ ನಾ.ದಿವಾಕರ, ಪತ್ರಕರ್ತ ಬಿ.ಆರ್.ರಂಗಸ್ವಾಮಿ, ಚಿಂತಕರ ಚಾವಡಿ ಅಧ್ಯಕ್ಷೆ ಪದ್ಮಶ್ರೀ ಇದ್ದರು.
ಕಲೆಯಲ್ಲಿ ತೊಡಗಿಸಿಕೊಂಡು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ತಮ್ಮ ನಂಬಿಕೆಯಾಗಿತ್ತು. ಇದಕ್ಕೆ ಸಿನಿಮಾ ವೇದಿಕೆ ಎಂದು ಭಾವಿಸಿ, ಸಿನಿಮಾದಲ್ಲಿ ತೊಡಗಿಸಿಕೊಂಡೆ. ಬೆಳ್ಳಿ ತೆರೆ ಪ್ರವೇಶಕ್ಕೂ ಮುನ್ನ ಬೀದಿ ನಾಟಕ, ರಂಗಭೂಮಿಯಲ್ಲಿ ತೊಡಗಿದ್ದೆ. ಆಗಲೇ ನಮ್ಮ ಗ್ರಾಮೀಣ ಸೊಗಡಿನ ಮಹತ್ವ, ಸೊಬಗು ಅರಿವಾಯಿತು.
-ಚೇತನ್, ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.