ನಾಳೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ಹಲವುಕಾರ್ಯಕ್ರಮ: ಶಾಸಕ ರಾಮದಾಸ್
"ನಮೋ ದಿವಸ್' ನಮಸ್ಕಾರ್ ಶೀರ್ಷಿಕೆಯಡಿ ವಿವಿಧ ಚಟುವಟಿಕೆ
Team Udayavani, Sep 16, 2020, 4:25 PM IST
ಮೈಸೂರು: ಪ್ರಧಾನಿ ನರೇಂದ್ರ ಮೋದಿಜನ್ಮದಿನದ ಪ್ರಯುಕ್ತ ನಮೋ ದಿವಸ್ ನಮಸ್ಕಾರ್ ಶೀರ್ಷಿಕೆಯಡಿ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.17 ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ಉದ್ಯಾನದಲ್ಲಿ ಕೋವಿಡ್ ನಿಯಮಾಧಾರಿತವಾಗಿ ಕಾರ್ಯ ಕ್ರಮಗಳು ನಡೆಯಲಿವೆ. ಸಾಹಿತಿ, ಸರಸ್ವತಿಸಮ್ಮಾನ್ ಪುರಸ್ಕೃತರಾದ ಎಸ್.ಎಲ್.ಭೈರಪ್ಪನಮೋ ದಿವಸ್ ನಮಸ್ಕಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಿಜೆಪಿ ಕಾರ್ಯಕರ್ತಅಭಿಷೇಕ್ ಮೋರೆ ಅವರು ಮೋದಿ ಜನಿಸಿದ ವೇಳೆಯಾದ ಬೆಳಗ್ಗೆ 10.15ಕ್ಕೆ ಅವರ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅಂದು ವೃತ್ತಿಪರರನಾಗಿ ಕೆಲಸ ಮಾಡುತ್ತಿರುವ ಆಟೋ ಚಾಲಕ, ಲಾರಿ, ಚಾಲಕ, ಪೌರಕಾರ್ಮಿಕ,ಪತ್ರಿಕಾವಿತರಕಮತ್ತುಪತ್ರಕರ್ತ ಸೇರಿದಂತೆ ಹಲವು ವೃತ್ತಿಯಲ್ಲಿರುವ 70 ಮಂದಿಯನ್ನು ಆತ್ಮ ನಿರ್ಭರ್ ಭಾರತೀಯರೆಂದು ಸನ್ಮಾನಿಸಿ ಸಮಾಜದ ಗಣ್ಯರೆಂದು ಗೌರವಿಸಲಾಗುವುದು ಎಂದು ತಿಳಿಸಿದರು.
ನಮೋ ಸಂಗೀತಾ: ಬಿಜೆಪಿ ಕಾರ್ಯಕರ್ತರ ಕುಟುಂಬದಲ್ಲಿರುವ ಕಲಾವಿದರು ಅಂದು ಬೆಳಗ್ಗೆ 9 ರಿಂದ ಸಂಜೆ5 ವರೆಗೆ ನಿರಂತರ ಹಾಡುಗಾರಿಕೆ, ಶಾಸ್ತ್ರೀಯ ಸಂಗೀತಾ, ವಾದ್ಯಗೋಷ್ಠಿ, ದೇಶಭಕ್ತಿ ಗೀತೆ ಹಾಗೂ ಹಳೆ ಚಲನಚಿತ್ರ ಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ.
ಆನ್‌ಲೈನ್ ಕ್ವಿಜ್: ಬೆಳಗ್ಗೆ 10.15ಕ್ಕೆ ಮೋದಿಅವರ ಆರು ವರ್ಷದ ಆಡಳಿತದ ಬಗ್ಗೆ ಆನ್ ಲೈನ್ ರಸ ಪ್ರಶ್ನೆ ಕಾರ್ಯಕ್ರಮಗಳನ್ನು ಕನ್ನಡ,ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮೂಲಕ ಆಯೋಜಿಸಲಾಗಿದೆ. ಕೇಂದ ಸರಕಾರದ ಯೋಜನೆಗಳನ್ನು ಪಡೆಯ ಬಯಸುವವರಿಗೆ ಸ್ಥಳದಲ್ಲೇ ನೋಂದಾಯಿಸಿ, ಯೋಜನೆಗಳ ವಿವರ ನೀಡಲಾಗುವುದು ಎಂದರು. ಬೆಳಗ್ಗೆಯಿಂದ ಸಂಜೆ ವರೆಗೆ ಕಾರ್ಯಕ್ರಮನಡೆಯುವ ಸ್ಥಳದಲ್ಲೇ ಸ್ವತಃ ನಾನೇ ನಿಂತು ಕಡಿಮೆ ಜನರು ಬಂದು ಹೋಗುವ ರೀತಿಯಲ್ಲಿ ವ್ಯವಸ್ಥೆ ಮಾಡುತ್ತೇನೆ. ಎಲ್ಲರ ಕುಶೋಲಪರಿವಿಚಾರಿಸಿ ಎಲ್ಲರಿಗೂ ಸಿಹಿ ಹಂಚಲಾಗುವುದು ಎಂದು ತಿಳಿಸಿದರು.
ಯೋಜನೆಗಳ ಬಗ್ಗೆ ಅರಿಯಲು ವೆಬ್‌ಸೈಟ್: ನರೇಂದ್ರ ಮೋದಿ ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದಿರುವ 200 ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಶೀಘ್ರವೇ ವೆಬ್‌ಸೈಟ್ ಆರಂಭಿಸಲಾಗುವುದು. ಅದರಲ್ಲಿ ಯೋಜನೆಗೆ ಅರ್ಜಿ ಹಾಕುವುದು ಸೇರಿದಂತೆ ಮತ್ತಿತರ ಮಾಹಿತಿ ನೀಡಲಾಗುವುದು. ಈ ವೆಬ್‌ಸೈಟ್ ಅನ್ನು ಎಲ್ಲರೂ ಉಪಯೋಗಿಸಬಹುದು ಎಂದರು.
ಮೋದಿಯೋಜನೆಗಳ ಅರಿವು : ಪ್ರಧಾನಿಯಾಗಿ ನರೇಂದ್ರ ಮೋದಿ ಇದುವರೆಗೆ 200 ಯೋಜನೆಗಳನ್ನು ಜಾರಿಗೆ ತಂದಿದ್ದು,ಅದರಲ್ಲಿಆಯ್ದ70ಯೋಜನೆಗಳ ಫ್ಲೆಕ್ಸ್ ಪ್ರದರ್ಶಿಸಲಾಗುವುದು.ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರದರ್ಶನ ವೀಕ್ಷಿಸಿ ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಅನುಷ್ಠಾನಕ್ಕೆ ಸಲಹೆಗಳನ್ನು 2 ಪುಟದಲ್ಲಿ ಬರೆಯುವವ್ಯವಸ್ಥೆ ಮಾಡಲಾಗಿದೆ. ಉತ್ತಮ ಸಲಹೆ ಸೂಚನೆಗಳನ್ನು ನೀಡುವವರಿಗೆ ಸನ್ಮಾನಿಸಿನಮೋಪ್ರಶಸ್ತಿಹಾಗೂನಗದುಬಹುಮಾನ ನೀಡಲಾಗುತ್ತದೆ. ಉತ್ತಮ ಸಲಹೆ ಸೂಚನೆಗಳು ಬಂದರೆ ಅವುಗಳಲ್ಲಿ ಆಯ್ದ ಸಲಹೆಯನ್ನು ಪ್ರಧಾನಿಗೆ ತಲುಪಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು.
ಮೋದಿ ಫೋಟೋಆಲ್ಬಮ್ : ಮೋದಿ ಅವರ ಬಾಲ್ಯದಿಂದ ಇಲ್ಲಿಯವರಗಿನ 70 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. 18 ವರ್ಷದೊಳಗಿನ ಮಕ್ಕಳಿಗೆ ಪ್ರದರ್ಶನ ವೀಕ್ಷಿಸಿ ಛಾಯಾಚಿತ್ರಗಳ ಬಗ್ಗೆ ಅಭಿಪ್ರಾಯ ಮತ್ತು ಐದು ರಸ ಪ್ರಶ್ನೆಗಳಿಗೆ ಉತ್ತರಿಸಿದರೆ ಸನ್ಮಾನಿಸಿ ನಮೋ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಇವೆರಡುವಿಭಾಗದಲ್ಲಿವಿಜೇತರಾಗುವವರಿಗೆ 5 ಸಾವಿರ ರೂ.(ಪ್ರ), 4 ಸಾವಿರ ರೂ. (ದ್ವಿ), 3 ಸಾವಿರ ರೂ. (ತೃ), 2 ಸಾವಿರ ರೂ. (4ನೇ), 5ನೇ ಸ್ಥಾನಕ್ಕೆ ಒಂದು ಸಾವಿರ ರೂ.ಮತ್ತು ಐದು ಸಮಾಧಾನಕರ ಬಹುಮಾನ ನೀಡಲಾಗುತ್ತದೆಎಂದುಶಾಸಕರಾಮದಾಸ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.