ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!
Team Udayavani, Apr 21, 2024, 6:25 PM IST
ಮೈಸೂರು: ಬಿಸಿಲಿನ ಪ್ರಖರತೆ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಮೈಸೂರಿನ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳನ್ನು ಬಿಸಿಲಿನ ತಂಪಾಗಿರಿ ಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಾಣಿಗಳು ಬಿಸಿಲಿನ ಬೇಗೆ ತಾಳಲಾರದೆ ಸಮಸ್ಯೆ ಅನುಭವಿಸುತ್ತಿವೆ. ಅದರಲ್ಲೂ ಪ್ರಸ್ತುತ ಮೈಸೂರಿನಲ್ಲಿ ಉಷ್ಣಾಂಶವೂ 40 ಡಿಗ್ರಿ ಸೆ.ಗಿಂತ ಹೆಚ್ಚಾಗಿ ದಾಖಲೆ ಯನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಣಿಗಳನ್ನು ಬಿಸಿಲಿನ ಝಳದಿಂದ ರಕ್ಷಿಸಿ, ತಂಪಾಗಿಸುತ್ತಿದ್ದಾರೆ. ಮುಖ್ಯವಾಗಿ ಪ್ರಾಣಿಗಳಿಗೆ ನೀರು ಸಿಂಪಡಣೆ, ಕೊಳಗಳ ನಿರ್ಮಾಣ ಮಾಡಲಾಗಿದೆ. ತಾಜಾ ಹಣ್ಣು ಹಾಗೂ ತಂಪಾದ ಪಾನೀಯ ನೀಡಲಾಗುತ್ತಿದೆ. ಚಿಂಪಾಂಜಿಗಳಿಗೆ ಎಳನೀರು ನೀಡಲಾಗುತ್ತಿದ್ದು, ಕರಡಿಗಳಿಗೆ ಕಲ್ಲಂಗಡಿ, ಕಿತ್ತಳೆ ಇನ್ನಿತರ ತಾಜಾ ಹಣ್ಣುಗಳನ್ನು ಹಾಗೂ ಐಸ್‌ಕ್ಯೂಬ್‌ಗಳನ್ನು ಐಸ್ ಬಾಕ್ಸ್‌ನಲ್ಲಿ ಇಟ್ಟು ಪ್ರತಿನಿತ್ಯ ನೀಡಲಾಗುತ್ತಿದೆ. ಇನ್ನು ಹುಲಿ, ಸಿಂಹ, ಚಿರತೆಗಳಿಗೆ ಅವುಗಳ ಪ್ರಾಂಗಣದಲ್ಲಿ ಕೊಳಗಳನ್ನು ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಅಲ್ಲದೆ, ಪ್ರತಿದಿನ ಎರಡು ಬಾರಿ ಕೊಳದ ನೀರನ್ನು ಬದಲಾಯಿಸಲಾಗುತ್ತಿದ್ದು, ಪ್ರಾಣಿಗಳು ಕೊಳದಲ್ಲಿಯೇ ಸ್ನಾನ ಮಾಡುತ್ತಿವೆ.
ಕೆಸರು ಗುಂಡಿ ನಿರ್ಮಾಣ: ಆನೆ ಮತ್ತು ಜಿಂಕೆಗಳಿ ಗಾಗಿ ಕೆಸರು ಗುಂಡಿ ನಿರ್ಮಿಸಲಾಗಿದೆ. ಈ ಪ್ರಾಣಿ ಗಳು ಇರುವ ಸ್ಥಳದಲ್ಲಿ ಮಣ್ಣಿಗೆ ನೀರು ಮಿಶ್ರಣ ಮಾಡಿದ್ದು, ಆನೆಗಳು ಕೆಸರನ್ನು ಮೈಮೇಲೆ ಎರಚಿ ಕೊಂಡು ದೇಹವನ್ನು ತಂಪು ಮಾಡಿಕೊಳ್ಳುತ್ತಿವೆ. ಜಿಂಕೆಗಳು ಕೆಸರಿನಲ್ಲಿ ಕುಳಿತು ತಂಪಾಗುತ್ತಿವೆ. ಈ ಕ್ರಮಗಳಿಂದ ಮೃಗಾಲಯದ ಪ್ರಾಣಿಗಳು ತಂಪು ವಾತಾವರಣವನ್ನು ಅನುಭವಿಸುತ್ತಿವೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.
ಪಕ್ಷಿಗಳಿರುವ ಆವರಣದಲ್ಲೂ ಕೊಳಗಳನ್ನು ನಿರ್ಮಾಣ ಮಾಡಿ ನೀರು ತುಂಬಿಸಲಾಗಿದ್ದು, ಇದ ರಿಂದ ಪಕ್ಷಿಗಳು ತಂಪಾಗಿವೆ. ಪ್ರಾಣಿಗಳಿಗೆ ನೀಡಲಾಗು ತ್ತಿದ್ದ ಹಣ್ಣಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಪ್ರಾಣಿ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಪ್ರಿಂಕ್ಲರ್‌ನಲ್ಲಿ ನೀರು ಚಿಮ್ಮಿಸಲಾಗುತ್ತಿದೆ. ಸ್ಪ್ರಿಂಕ್ಲರ್ ಮೂಲಕ ನೀರು ಚಿಮ್ಮಿಸುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪರಿಸರದಲ್ಲಿ ಅಡ್ಡಾಡುವ ಪ್ರವಾಸಿಗರಿಗೂ ತಣ್ಣನೆಯ ಅನುಭವಾಗುತ್ತಿದೆ.
ಸಾಕಷ್ಟು ವನ್ಯಪ್ರಾಣಿಗಳು ಬೇಸಿಗೆಯ ಧಗೆ ಸಹಿಸಿಕೊಳ್ಳುವುದಿಲ್ಲ. ಅರಣ್ಯದಲ್ಲಾದರೆ ನದಿ, ತೊರೆಗಳಲ್ಲಿ ಪ್ರಾಣಿಗಳು ಮಿಂದೆದ್ದು ಬರುತ್ತವೆ. ಆದರೆ ಇಲ್ಲಿ ಅಂಥ ವ್ಯವಸ್ಥೆ ಇಲ್ಲ. ಮೃಗಾಲಯದಲ್ಲಿ ಪ್ರಾಣಿ ಗಳಿಗೋಸ್ಕರ ನಿರ್ಮಾಣ ಮಾಡಿರುವ ತೊಟ್ಟಿಗಳಲ್ಲಿ ತಣ್ಣೀರು ತುಂಬಿಸಿದರೂ ಮಧ್ಯಾಹ್ನದ ಹೊತ್ತಿಗೆ ಬಿಸಿ ಲಿನ ತಾಪಕ್ಕೆ ಅದು ಬಿಸಿಯಾಗಿಬಿಡುತ್ತದೆ. ಆದ್ದರಿಂದ ಪ್ರತಿ ಬೇಸಿಗೆಯ ಸಮಯದಲ್ಲಿ ಮೃಗಾಲಯ ಸಿಬ್ಬಂದಿ ಸ್ಪ್ರಿಂಕ್ಲರ್ ಮೂಲಕ ಪ್ರಾಣಿಗಳಿಗೆ ನೀರು ಹಾಯಿಸುತ್ತಾರೆ. ವನ್ಯಪ್ರಾಣಿಗಳು ಸಂತೃಪ್ತಿಯಿಂದ ತಣ್ಣೀರಿಗೆ ಮೈಯೊಡ್ಡಿ ಬಿಸಿಲಿನ ತಾಪದಿಂದ ಪಾರಾಗುತ್ತವೆ.ಈ ಮೂಲಕ ಪ್ರಾಣಿಗಳಿಗೆ ವರುಣನ ಸಿಂಚನದ ಅನುಭವ ನೀಡುತ್ತಿದ್ದಾರೆ.ಆನೆ, ಚಿಂಪಾಂಜಿ, ಗೊರಿಲ್ಲ, ಘೇಂಡಾಮೃಗಗಳು ಚಿಮ್ಮುವ ನೀರಿಗೆ ಮೈಯೊಡ್ಡಿ ಖುಷಿ ಪಡುತ್ತಿವೆ.
ನಿರ್ಜಲೀಕರಣ: ಮುನ್ನೆಚ್ಚರಿಕೆ: ಪ್ರಾಣಿಗಳಲ್ಲಿ ನಿರ್ಜಲೀಕರಣ ಆಗಬಾರದೆಂದು ಮುನ್ನೆಚ್ಚರಿಕೆ ವಹಿಸಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಕರ್ಬೂಜ, ಕಲ್ಲಂಗಡಿ.ಕಿತ್ತಲೆ, ದ್ರಾಕ್ಷಿ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಜತೆಗೆ ಒಆರ್‌ಎಸ್ ದ್ರಾವಣವನ್ನು ಕೊಡಲಾಗುತ್ತಿದೆ. ಪ್ರಾಣಿಗಳಿಗೆ ನಿತ್ಯ ನೀಡಲಾಗುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಹ್ಯವಾಗಿ ವಿಟಮಿನ್ ಹಾಗೂ ಮಿನರಲ್ ಸೇರಿಸಲಾಗುತ್ತಿದೆ.
ಮೃಗಾಲಯದಲ್ಲಿ ತಂಪು ವಾತಾ ವರಣ ಸೃಷ್ಟಿಸಲಾಗುತ್ತಿದೆ ಮತ್ತು ಎಲ್ಲ ಪ್ರಾಣಿಗಳ ಆವರಣಕ್ಕೆ ಸ್ಪ್ರಿಂಕ್ಲರ್ ಮೂಲಕ ನೀರು ಚಿಮುಕಿಸಲಾಗುತ್ತಿದೆ. ಅಲ್ಲದೆ ಕೆಲ ಪ್ರಾಣಿಗಳಿಗೆ ಎಳನೀರು, ಕಲ್ಲಂಗಡಿ, ಕಿತ್ತಳೆ ಹಣ್ಣುಗಳನ್ನು ನೀಡುತ್ತಿದ್ದು, ಮಾಂಸಾಹಾರಿ ಪ್ರಾಣಿಗಳಿಗೆ ಅವುಗಳ ಜಾಗದಲ್ಲಿಯೇ ಕೊಳ ನಿರ್ಮಾಣ ಮಾಡಲಾಗಿದೆ. ಪ್ರಾಣಿಗಳಿಗೆ ನೀರು ಮತ್ತು ನೆರಳು ಒದಗಿಸಲು ಮುತುವರ್ಜಿ ವಹಿಸಲಾಗಿದೆ.-ಡಿ.ಮಹೇಶ್ ಕುಮಾರ್, ಕಾರ್ಯ ನಿರ್ವಾಹಕ ನಿರ್ದೇಶಕ, ಚಾಮರಾಜೇಂದ್ರ ಮೃಗಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.