ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಮಿತಿ ವತಿಯಿಂದ ವಾತ್ಸಲ್ಯ ಕಿಟ್ ಹಾಗೂ ಮಾಸಾಶನ ವಿತರಣೆ
Team Udayavani, Mar 21, 2022, 5:08 PM IST
ಪಿರಿಯಾಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಮಿತಿಯು ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ಹಾಗೂ ಮಾಸಾಶನವನ್ನು ವಿತರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಗ್ರಾಮಾಭಿವೃದ್ಧಿ ಸಮಿತಿ ಕೃಷಿ ಅಧಿಕಾರಿ ಉಮೇಶ್ ತಿಳಿಸಿದರು.
ತಾಲೂಕಿನ ಆವರ್ತಿ, ಬೆಣಗಾಲು, ಮುತ್ತಿನ ಮುಳುಸೋಗೆ ಹಾಗೂ ಅಂಬ್ಲಾರೆ ಗ್ರಾಮಮಗಳಲ್ಲಿ ನಿರ್ಗತಿಕ ಕುಟುಂಬದ ಫಲಾನುಭವಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ಹಾಗೂ ಮಾಸಾಶನವನ್ನು ವಿತರಿಸಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ, ವಯೋವೃದ್ದರ, ಆರೋಗ್ಯ ವಂಚಿತ ನಿರ್ಗತಿಕ ಕುಟುಂಬಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ 750 ರಿಂದ 1000 ರೂ. ವರೆಗೆ ಮಾಸಾಶನ ನೀಡಲಾಗುತ್ತದೆ. ಅದೇರೀತಿ ಎರಡು ಜೊತೆ ಸೀರೆ, ಹಾಗೂ ಉಡುಗೆಗಳು, ಪಾತ್ರೆ, ತಲೆ ದಿಂಬು, ಚಾಪೆ, ಸೋಪು, ಪೌಷ್ಠಿಕ ಆಹಾರದ ಸಾಮಾಗ್ರಿಗಳು ಹೊಂದಿಕೆ ಸೇರಿದಂತೆ ಮೂಲಭೂತ ಅವಶ್ಯಕ ವಸ್ತುಗಳನ್ನು ಒಳಗೊಂಡಿರುವ ವಾತ್ಸಲ್ಯ ಕಿಟ್ ವಿತರಿಸುವ ಮಹತ್ವದ ಕಾರ್ಯದ ಜೊತೆಗೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ಅವರನ್ನು ಅರ್ಥಿಕವಾಗಿ ಸಬಲೀಕರಣ ಮಾಡುವುದು ಗ್ರಾಮಗಳ ಅಭಿವೃದ್ಧಿಗಾಗಿ ಅನೇಕ ರೀತಿಯ ಯೋಜನೆಗಳು ಸೌಲಭ್ಯಗಳು ನೀಡುತ್ತಿದ್ದು ಇದರ ಸದುಪಯೋಗ ಪ್ರತಿ ಹಳ್ಳಿಯ ಜನರು ಬಳಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಗತಿ ಹೊಂದಬೇಕು ಎಂಬುದು ಡಾ.ವಿರೇಂದ್ರಹೆಗ್ಗಡೆ ಮತ್ತು ಹೇಮಾವತಿ ವಿ.ಹೆಗ್ಗಡೆ ಅಮ್ಮನವರ ಆಶಯವಾಗಿದೆ. ತಾಲೂಕಿನ 25 ಕುಟುಂಬಗಳಿಗೆ ವಾತ್ಸಲ್ಯಕಿಟ್ ಮಂಜೂರಾತಿಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ವಾತ್ಸಲ್ಯ ಕುಟುಂಬಗಳನ್ನು ಗುರುತಿಸಿದಿನಬಳಕೆಗೆ ಅವಶ್ಯಕತೆ ಇರುವ ವಸ್ತುಗಳ ಕಿಟ್ ಗಳನ್ನು ವಿತರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಿತರ ಮೂಲಭೂತ ಅಗತ್ಯತೆಗಳಾದ ಶೌಚಾಲಯ, ಮನೆಛಾವಣಿ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಬಿಂದ್ಯಾ, ಸದಸ್ಯ ಲೋಕೇಶ, ವಲಯ ಮೇಲ್ಚಿಚಾರಕರಾದ ವಿದ್ಯಾನಂದ, ಸೇವಾ ಪ್ರತಿನಿಧಿಗಲಾದ ಭಾಗಯ, ವಿದ್ಯಾ, ಜ್ಯೋತಿ, ಮಮತ, ನಯೀಮಾ, ಪವಿತ್ರ, ಜಯಂತಿ ಮುಖಂಡರಾದ ರಾಮಚಂದ್ರೇಗೌಡ, ರಂಜಿತ್, ಸಂದರೇಗೌಡ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.