ಮೃಗಾಲಯದಲ್ಲಿ ರಾತ್ರಿ ಸಫಾರಿ ಆರಂಭಿಸಿ: ಸಿಎಂ


Team Udayavani, Aug 11, 2017, 12:07 PM IST

mys5.jpg

ಮೈಸೂರು: ಮೈಸೂರು ಮೃಗಾಲಯಕ್ಕೆ ಇನ್ನೂ ಹೆಚ್ಚಿನ ಜನರನ್ನು ಆಕರ್ಷಿಸುವಂತಾಗಲು ರಾತ್ರಿ ಸಫಾರಿ ಆರಂಭಿಸುವ ಬಗ್ಗೆ ಕಾರ್ಯ ಪ್ರವೃತ್ತರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶ್ರೀ ಚಾಮರಾಜೇಂದ್ರ ಮೃಗಾಲಯದ 125ನೇ ವರ್ಷದ ಸಂಭ್ರಮಾಚರಣೆ ಮತ್ತು ಮೃಗಾಲಯದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ವನ್ಯರಂಗ ಮಂದಿರ ಉದ್ಘಾಟಿಸಿ ಮಾತನಾಡಿದರು.

ಅಗತ್ಯ ಮೂಲ ಸೌಕರ್ಯ ಕಲ್ಪಿಸಿ: 1892ರಲ್ಲಿ ಅಂದಿನ ಮೈಸೂರು ಮಹಾರಾಜ ಚಾಮರಾಜ ಒಡೆಯರ್‌ ಅವರು ಸ್ಥಾಪಿಸಿದ ಮೈಸೂರು ಮೃಗಾಲಯ ಎಂದೇ ಜನಜನಿತವಾಗಿರುವ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಇಂದು 125ನೇ ವರ್ಷದ ಸಂಭ್ರಮದ ದಿನ. ಮೃಗಾಲಯ ಮೈಸೂರು ನಗರಕ್ಕೆ ಭೂಷಣ ಇದ್ದಂತೆ. ಇನ್ನೂ ಹೆಚ್ಚಿನ ಜನರನ್ನು ಆಕರ್ಷಿಸಬೇಕಾದರೆ, ಜಗತ್ತಿನ ಎಲ್ಲ ರೀತಿಯ ಪ್ರಾಣಿಗಳೂ ಇಲ್ಲಿರುವಂತಾಗಬೇಕು. ಜತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಎಂದು ಸಲಹೆ ನೀಡಿದರು.

ಸಚಿವರಿಗೆ ಸೂಚನೆ: ಇಲ್ಲಿ ದುಡಿಯುತ್ತಿರುವ ನೌಕರರಿಂದಲೇ ಮೃಗಾಲಯ ಅಭಿವೃದ್ಧಿ ಕಾಣುತ್ತಿದೆ. ಆದರೆ, ಮೃಗಾಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಾವಳಿ ಇಲ್ಲದ್ದರಿಂದ ಇಲ್ಲಿನ ನೌಕರರನ್ನು ಸಕ್ರಮಗೊಳಿಸಲು ಹಾಗೂ ಅನುಕಂಪದ ಆಧಾರದ ಮೇಲೆ ಅವರ ಅವಲಂಬಿತರಿಗೆ ಕೆಲಸ ಕೊಡಲಾಗುತ್ತಿಲ್ಲ. ಹೀಗಾಗಿ ಮೃಗಾಲಯಕ್ಕೆ ವೃಂದ ಮತ್ತು ನೇಮಕಾತಿ ನಿಯಮಾವಳಿ ರೂಪಿಸಿ, ನಾನು ಹಣಕಾಸು ಇಲಾಖೆಗೆ ಹೇಳುತ್ತೇನೆ ಎಂದು ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಸೂಚಿಸಿದರು. ಮೃಗಾಲಯ ವಿಸ್ತರಣೆಗೆ ರೇಸ್‌ಕೋರ್ಸ್‌ ಜಾಗ ಬಳಸಿಕೊಳ್ಳಲು, ಆ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಸದ್ಯಕ್ಕೆ ಆಗುವುದಿಲ್ಲ ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌ ಮಾತನಾಡಿ, ಮೈಸೂರು ಮೃಗಾಲಯದ ವಾಹನ ನಿಲುಗಡೆ ತಾಣ ನಿರ್ಮಾಣಕ್ಕೆ 25 ಕೋಟಿ ರೂ., ಮೈಸೂರು ಮಹಾ ನಗರಪಾಲಿಕೆ ಕೈಗೆತ್ತಿಕೊಂಡು ಅಪೂರ್ಣಗೊಳಿಸುವ ಮತ್ಸಾಲಯ ಕಾಮಗಾರಿ ಪೂರ್ಣಗೊಳಿಸಲು 25 ಕೋಟಿ ರೂ ಹಾಗೂ ಕೂರ್ಗಳಿಯಲ್ಲಿರುವ ಚಾಮುಂಡೇಶ್ವರಿ ವನ್ಯಜೀವಿಗಳ ಪುನರ್ವಸತಿ ಕೇಂದ್ರದ ಅಭಿವೃದಿಗೆ 30 ಕೋಟಿ ರೂ. ಮಂಜೂರು ಮಾಡುವಂತೆ ಮನವಿ ಮಾಡಿದರು.

ಬಿಡುಗಡೆ: ಇದೇ ಸಂದರ್ಭದಲ್ಲಿ ಮೃಗಾಲಯದ 125ನೇ ವರ್ಷಾಚರಣೆ ಸಂಬಂಧ ನಿರ್ಮಿಸಿರುವ ಸಾಕ್ಷÂ ಚಿತ್ರದ ಸೀಡಿ ಹಾಗೂ ಅಂಚೆ ಲಕೋಟೆ ಮತ್ತು ಅಂಚೆಚೀಟಿಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಅರಣ್ಯ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್‌, ಶಾಸಕ ಎಂ.ಕೆ.ಸೋಮಶೇಖರ್‌, ವಿಧಾನಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಕಿಶನ್‌ಸಿಂಗ್‌ ಸುಗಾರ್‌, ಬಿ.ಪಿ.ರವಿ, ಸಿ.ರವಿಶಂಕರ್‌ ಇತರರು ಇದ್ದರು.

ನೆನಪಿನಾಳಕ್ಕಿಳಿ ಸಿಎಂ
ನಾನು ಐದೋ-ಆರನೇ ತರಗತಿಲಿದ್ದಾಗ ಒಂದ್ಸಾರಿ ಮೃಗಾಲಯಕ್ಕೆ ಬಂದಿದ್ದೆ. 1957-58ನೇ ಇಸವಿ ಇರಬಹುದು. ಆಗ ಸ್ಕೂಲಿಂದ ಕೆಆರ್‌ಎಸ್‌, ಚಾಮುಂಡಿಬೆಟ್ಟ, ಜ್ಹೂ ಗೆಲ್ಲ ಕರ್ಕೊಬಂದಿದ್ರು. ಅದು ಬುಟ್ರೆ, ಈ ಸುಶೀಲ ಕೇಶವಮೂರ್ತಿ ಜೂ ಅಥಾರಿಟಿ ಛೇರ್ಮನ್‌ ಆಗಿದ್ದಾಗ ಒಂದ್ಸಾರಿ ಕರ್ಕೊ ಬಂದಿದ್ರು. ಅದು ಬುಟ್ರೆ ಈಗ ಬಂದಿದ್ದೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆನಪಿನಾಳಕ್ಕೆ ಇಳಿದರು.

ಮೃಗಾಲಯ ಪ್ರಾಧಿಕಾರಕ್ಕೆ ರಾಜ್ಯ ವ್ಯಾಪಿ ಇದೆ. ಮೈಸೂರು ಮೃಗಾಲಯ ಚೆನ್ನಾಗಿದೆ ಅಂಥಾ ಇದನ್ನೇ ನೋಡ್ಕೊಂಡು ಕೂತ್ಕೊಬುಡ್‌ ಬೇಡಾ, ಇನ್ನೂ 8 ಮೃಗಾಲಯ ಅವಂತೆ ಅವಕ್ಕೂ ಹೋಗು, ಸದಸ್ಯರನ್ನೂ ಒಮ್ಮೆ ಅಲ್ಲಿಗೆಲ್ಲ ಟೂರ್‌ ಕರ್ಕೊಂಡೋಗು ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌ಗೆ ಸಿಎಂ ಸಲಹೆ ನೀಡಿದರು.

ಆಗ ಮೃಗಾಲಯ ಪ್ರಾಧಿಕಾರದ ಸದಸ್ಯರೊಬ್ಬರು ಫಾರಿನ್‌ ಟೂರ್‌ ಕಳಿಸ್ಕೊಡಿ ಸಾರ್‌ ಎಂದು ಮುಖ್ಯಮಂತ್ರಿಯವರಿಗೆ ಬೇಡಿಕೆ ಇಟ್ಟರು. ಇಲ್ಲಿ ಜ್ಹೂ ನೋಡ್ಕೊ ಬಾ ಅಂದ್ರೆ, ಫಾರಿನ್‌ ಟೂರ್‌ ಕೇಳ್ತೀಯಾ, ನಾನೇ ಫಾರಿನ್‌ ಟೂರ್‌ ಹೋಗಲ್ಲ, ನೀನು ಹೋಗ್ಬೇಕಾ ಸುಮ್ನೆ ಕೂತ್ಕೊ ಎಂದು ತಮ್ಮ ಎಂದಿನ ಶೈಲಿಯಲ್ಲಿ ಗದರಿದರು.

ಟಾಪ್ ನ್ಯೂಸ್

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.