ಲೈಸೆನ್ಸ್ ಪಡೆಯದ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ
Team Udayavani, Feb 22, 2017, 12:29 PM IST
ಮೈಸೂರು: ವೃತ್ತಿ ರಹದಾರಿ ಪಡೆಯದೆ ವ್ಯಾಪಾರ, ವಹಿವಾಟು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಮಹಾ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಎಚ್ಚರಿಕೆ ನೀಡಿದರು.
ಹೋಟೆಲ್ ಮಾಲೀಕರ ಸಂಘ ಮತ್ತು ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ವತಿಯಿಂದ ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ನಗರ ಪಾಲಿಕೆಯ ವೃತ್ತಿ ರಹದಾರಿ ನವೀಕರಣ ಮೇಳ ಉದ್ಘಾಟಿಸಿ ಮಾತನಾಡಿದರು.
ಯಾವುದೇ ವ್ಯಾಪಾರ – ವಹಿವಾಟು ನಡೆಸು ವವರು ಕಡ್ಡಾಯವಾಗಿ ನಗರ ಪಾಲಿಕೆಯಿಂದ ರಹದಾರಿ ಪಡೆಯಬೇಕು. ಆದರೆ ಅನೇಕ ವ್ಯಾಪಾರಿಗಳು ಯಾವುದೇ ರಹದಾರಿ ಪಡೆಯದೆ ವ್ಯಾಪಾರ-ವಹಿವಾಟು ನಡೆಸುವ ಮೂಲಕ ವಂಚನೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರ ಪಾಲಿಕೆಯಿಂದ ವೃತ್ತಿ ರಹದಾರಿ ಪಡೆಯದೆ ವ್ಯಾಪಾರ, ವಹಿವಾಟು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.
ಅಲ್ಲದೆ ವ್ಯಾಪಾರ ವಹಿವಾಟು ನಡೆಸುವವರು ಕಡ್ಡಾಯವಾಗಿ ವೃತ್ತಿ ರಹದಾರಿ ಶುಲ್ಕ, ಕಟ್ಟಡ ತೆರಿಗೆ ಸೇರಿದಂತೆ ಇತರೆ ತೆರಿಗೆಗಳನ್ನು ಸಮಯಕ್ಕೆ ತೆರಿಗೆ ಪಾವತಿಸಬೇಕು. ಆಗ ಮಾತ್ರ ನಗರಪಾಲಿಕೆ ಉತ್ತಮ ಆಡಳಿತ ಹಾಗೂ ವ್ಯಾಪಾರಸ್ಥರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಸಾಧ್ಯ ಎಂದು ಹೇಳಿದರು.
ಈ ಬಾರಿ ವೃತ್ತಿ ರಹದಾರಿ ನವೀಕರಣ ಮೇಳದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮಂದಿ ಭಾಗವಹಿಸುವ ಮೂಲಕ ವೃತ್ತಿ ರಹದಾರಿ ನವೀಕರಣ ಮಾಡಿಸಿಕೊಳ್ಳುವ ಜತೆಗೆ ವೃತ್ತಿ ರಹದಾರಿ ಶುಲ್ಕ ಪಾವತಿಸಿದರು. ಪ್ರಮುಖವಾಗಿ ಹೋಟೆಲ್, ಉಪಹಾರಗೃಹಗಳು, ಸಸ್ಯಾಹಾರಿ, ಮಾಂಸಾಹಾರಿ ಹೋಟೆಲ್‌ಗಳು, ಬೇಕರಿ, ಸ್ವೀಟ್ಸ್ ಅಂಗಡಿ, ಫಾಸ್ಟ್‌ಫುಡ್ ಮಾಲೀಕರು ವೃತ್ತಿ ರಹದಾರಿ ನವೀಕರಣ ಮೇಳದಲ್ಲಿ ಭಾಗವಹಿಸಿ ವೃತ್ತಿ ರಹದಾರಿ ನವೀಕರಣ ಮಾಡಿಸಿಕೊಂಡರು.
ಎಫ್ಕೆಸಿಸಿಐ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಪಾಲಿಕೆ ಆರೋಗ್ಯಾಧಿಕಾರಿ ರಾಮಚಂದ್ರ, ಚಾಮರಾಜ ಕ್ಷೇತ್ರದ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಅಧ್ಯಕ್ಷ ರವಿಶಾಸಿŒ ಇನ್ನಿತರರು ಹಾಜರಿದ್ದರು.
20 ಲಕ್ಷ ರೂ. ಶುಲ್ಕ ಸಂಗ್ರಹ
ಮೈಸೂರು: ಹೋಟೆಲ್ ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ನಗರ ಪಾಲಿಕೆಯ ವೃತ್ತಿ ರಹದಾರಿ ನವೀಕರಣ ಮೇಳದಲ್ಲಿ ಮಂಗಳವಾರ ಪಾಲಿಕೆಯ 9 ವಲಯಗಳಿಂದ 20,80,596 ರೂ. ರಹದಾರಿ ನವೀಕರಣ ಶುಲ್ಕ ಸಂಗ್ರಹವಾಗಿದೆ. 363 ಮಂದಿ ವೃತ್ತಿ ರಹದಾರಿ ನವೀಕರಣ ಮಾಡಿಕೊಂಡರು. ಈ ಪೈಕಿ ವಲಯ 6ರಲ್ಲಿ ಅತಿ ಹೆಚ್ಚು 12,85,118 ರೂ. ನಗದು ಸಂಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Brahmavar: ಲಾಕ್‌ಅಪ್ ಡೆತ್; ಕೇರಳ ಸಿಎಂಗೆ ದೂರು
ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ
Bengaluru: ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ
Udupi: ಬಾಂಗ್ಲಾದಲ್ಲಿ ಇಸ್ಕಾನ್ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.