ಮೂಲ ವಿಜ್ಞಾನದತ್ತ ವಿದ್ಯಾರ್ಥಿಗಳು ಆಸಕ್ತಿ ವಹಿಸಲಿ


Team Udayavani, Jun 5, 2017, 12:45 PM IST

mys1.jpg

ನಂಜನಗೂಡು: ವೈದ್ಯರು ಹಾಗೂ ಎಂಜನಿಯರೇ ಆಗಬೇಕೆಂಬ ದಾವಂತದಲ್ಲಿ ವಿದ್ಯಾರ್ಥಿಗಳು ಮೂಲ ವಿಜ್ಞಾನವನ್ನು ಮರೆಯುತ್ತಿದ್ದಾರೆ ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ತಾಲೂಕಿನ ಹುಲ್ಲಹಳ್ಳಿಯಲ್ಲಿ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆ ನಿರ್ಮಿಸಿದ ಶಿಕ್ಷಣ ಸಂಸ್ಥೆಗಳ ನೂತನ ಕಟ್ಟಡದ ಲೋಕಾರ್ಪಣೆ ನಡೆಸಿ ಮಾತನಾಡಿ, ಕಲಿತವರೆಲ್ಲರೂ ವೈದೈಕೀಯ ಹಾಗೂ ತಂತ್ರಜ್ಞಾನದತ್ತಲೇ ಮುಖ ಮಾಡಿದರೆ ಸಮಾಜದ ಸರ್ವತೋಮುಖ ಬೆಳವಣಿಗೆ ಅಸಾಧ್ಯ ಎಂದ ಮುಖ್ಯಮಂತ್ರಿಗಳು ಸಮಾಜಕ್ಕೆ ಎಲ್ಲ ರಂಗಗಳು ಅವಶ್ಯಕತೆ ಇದ್ದು ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಆಸಕ್ತಿ ಬೆಳಸಿಕೊಳ್ಳಲಿ ಎಂದರು.

ಕೌಶಲ್ಯಭರಿತ ಶಿಕ್ಷಣಕ್ಕೆ ಒತ್ತು: ಶಿಕ್ಷಣದಲ್ಲೂ ಬದಲಾವಣೆಯಾಗಬೇಕು ಎಂದು ಕರೆ ನೀಡಿದ ಸಿದ್ದರಾಮಯ್ಯ, ನೈತಿಕ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ ಬೆಳೆಸಿ ಅವರೆಲ್ಲರನ್ನೂ ವಿಶ್ವ ಮಾನವರನ್ನಾಗಿಸುವ ಸತ್ವಯುತವಾದ ಶಿಕ್ಷಣ ಜಾರಿಗೆ ಬರಬೇಕು ಎಂದು  ಕರೆ ನೀಡಿದರು .

ಕೌಶಲ್ಯ ಭರಿತ ಜ್ಞಾನಾರ್ಜನೆಯನ್ನು ನೀಡುವ ಸಲುವಾಗಿ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು  ಪ್ರತಿ ವರ್ಷ 5 ಲಕ್ಷ ವಿದ್ಯಾರ್ಥಿಗಳಿಗೆ  ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ನುಡಿದರು.  ಆಧುನಿಕ ತಂತ್ರಜ್ಞಾನದ ಅರಿವು ನಮ್ಮ ಮಕ್ಕಳಿಗಾಗಬೇಕೆಂಬುದು ಸರ್ಕಾರದ ಆಶಯವೆಂದ ಮುಖ್ಯಮಂತ್ರಿಗಳು ಅದಕ್ಕಾಗಿಯೇ  ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪಟಾಪ್‌ ನೀಡಲು ತೀರ್ಮಾನಿಸಲಾಗಿದೆ ಎಂದರು.

ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ವಿಶ್ವವ್ಯಾಪಿಯಾಗಿ ಹೆಸರು ಮಾಡುತ್ತಿರುವ ಸುತ್ತೂರು ಶಿಕ್ಷಣ ಸಂಸ್ಥೆ ನಮ್ಮದು ನಮ್ಮ ತಾಲೂಕಿನದು ಎಂಬುದೇ ನಮಗೆಲ್ಲ ಹೆಮ್ಮೆ ತರುತ್ತಿದೆ ಎಂದರು . ಶ್ರೀ ಮಠದಿಂದ ತಾಲೂಕಿಗೆ, ರಾಜ್ಯಕ್ಕೆ , ರಾಷ್ಟ್ರಕ್ಕೆ ಇನ್ನೂ ಹೆಚ್ಚನ ಸೇವೆ ದೊರಕಲಿ ಎಂದು ಕೇಶವಮೂರ್ತಿ ಆಶಿಸಿದರು.

ಸಮಾರಂಭದ ಆಶೀರ್ವಚನ ನೀಡಿದ ಸುತ್ತೂರು ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರರು, ಗ್ರಾಮೀಣ ಭಾಗದ ಜನತೆ ಅಕnರ ವಂತರಾಗಬೇಕೆಂಬ ಹಿಂದಿನ ಶ್ರೀಗಳಾದ ರಾಜೇಂದ್ರ ಸ್ವಾಮಿಗಳ ಸಂಕಲ್ಪದಿಂದಾಗಿ ಈ ಊರಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದನ್ನು ಸ್ಮರಿಸಿದರು. ಇಂದು ಬೇಕಾಗಿರುವುದು ಅಂಕದ ಶಿಕ್ಷಣವಲ್ಲ ಎಂದ ಶ್ರೀಗಳು ಕೌಶಲ್ಯ ಪೂರಿತವಾದ ಶಿಕ್ಷಣದ ಕಲಿಕೆಯತ್ತ ಎಲ್ಲರೂ ಲಕ್ಷವಹಿಸಬೇಕು ಎಂದು ಕರೆ ಇತ್ತರು .  

ದೇವನೂರು ಮಠದ ಪೀಠಾದ್ಯಕ್ಷ ಮಹಂತ ಸ್ವಾಮಿಗಳು ಹಾಗೂ ಮಲ್ಲನ ಮೂಲೇ ಮಠಧ ಶ್ರೀ ಚೆನ್ನಬಸವ ಸ್ವಾಮಿಗಳು ಲೋಕೋಪಯೋಗಿ ಸಚಿವ ಡಾ ಎಚ್‌ ಸಿ ಮಹದೇವಪ್ಪ, ಶಿಕ್ಷಣ ಸಚಿವ ತನ್ವೀರ ಶೇಟ್‌, ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ಕಳಲೆ , ಧರ್ಮಸೇನ್‌. ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್‌, ತಾಪಂ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ,ಉಪಾಧ್ಯಕ್ಷ ಗೋವಿಂದರಾಜ್‌ ನಂದಕುಮಾರ ಮೂಂತಾದವರು ಉಪಸ್ಥಿತರಿದ್ದರು. ಶಾಸಕ ಧರ್ಮಸೇನ ಸಂಸ್ಥೆಯ ಪ್ರಯೋಗಾಲಯಕ್ಕೆ ಚಾಲನೆ ನೀಡಿದರೆ. ಸಂಸದ ಆರ್‌.ಧ್ರುವನಾರಾಯಣ ಗ್ರಂಥಾಲಯದ ಲೋಕಾರ್ಪಣೆ ಗೈದರು.

ಸಿಎಂ,ಸಚಿವರ ಹೊಗಳಿದ ಸುತ್ತುರು ಶ್ರೀ: ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ವಿಶೇಷ ಮುತುವರ್ಜಿಯಿಂದಾಗಿ ನಂಜನಗೂಡು ಈಗ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಇಕ್ಕುತ್ತಿದೆ ಎಂದು ಕಾರ್ಯಕ್ರಮದಲ್ಲಿ ದೇಶಿಕೇಂದ್ರರು ಹೇಳಿದ್ದು ಮಾತ್ರ ಎಲ್ಲರ ಗಮನ ಸೆಳೆಯಿತು. ರಾಜ್ಯವನ್ನಾಳಿದ ಎಲ್ಲ ಮುಖ್ಯಮಂತ್ರಿಗಳು ಅಧಿಕಾರದ ಅವಧಿಯಲ್ಲಿ ಎಡರು ತೊಡರುಗಳನ್ನು ಎದುರಿಸುತ್ತಲೇ ಆಡಳಿತ ನಡೆಸುವಂತಾಗಿದ್ದರೆ ನಮ್ಮ ಸಿದ್ದರಾಮಯ್ಯ ಮಾತ್ರ ಸುಲಭವಾಗಿ ನಾಲ್ಕು ವರ್ಷ ರಾಜ್ಯದ ಆಡಳಿಮುಗಿಸಿ ಈಗ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಎಂದು ಶ್ರೀಗಲ ನುಡಿದರು.

ವಿವಿ ಗಿಂತ ಮಿಗಿಲಾದದ್ದು ಶ್ರೀಮಠ: ಪ್ರಪಂಚದ ಯಾವುದೇ ವಿಶ್ವವಿದ್ಯಾಲಯಗಳನ್ನೂ ಮೀರಿ ಬೆಳದಿದೆ ನಮ್ಮ ಸುತ್ತೂರು ಶ್ರೀ ಮಠ ,ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಧಾರ್ಮಿಕ ,ಆದ್ಯಾತ್ಮಿಕ, ಶೈಕ್ಷಣಿಕ ,ಆರೋಗ್ಯ ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶ್ರೀ ಮಠದ ಸೇವೆಯನ್ನು ಶ್ಲಾ ಸಿದರು.

ಶಿಕ್ಷಣ ಸಮಾಜದ ಆಸ್ತಿಯಾಗಬೇಕೆ ಹೊರತು ಅದು ಕೆಲವರ  ಸ್ವತ್ತಾಗಬಾರು. ಸಮಾಜದಿಂದ ನನಗೆನು ಎನ್ನುವ ನಮ್ಮ, ಮನೋಭಾವ ಬದಲಾಗಿ ನನ್ನಿಂದ ಸಮಾಜಕ್ಕೇನು ಎಂದು ಆಲೋಚನೆ ಮಾಡುವ ಮನಸ್ಸು ಮೂಡಿ ಬಂದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಎಂಬುದನ್ನು ಎಲ್ಲರೂ ನೆನಪಿಡಿ ಎಂದರು. ಅಕ್ಷರ ಜ್ಞಾನ ಪಡೆದವರೆಲ್ಲರ ಮೇಲೂ ಸಮಾಜದ ಋಣವಿರುತ್ತದೆ ಅದನ್ನು ತೀರಿಸಲು ನಾವೆಲ್ಲ ಪ್ರಯತ್ನಿಸುವ ಮನೋಭಾವ ರೂಢಿಸಿಕೊಂಡಾಗ ಸಮಾಜ ತಾನೇ ತಾನಾಗಿ ಬದಲಾವಣೆಯಾಗುತ್ತದೆ ಎಂದು ಆಶಿಸಿದರು.

ಟಾಪ್ ನ್ಯೂಸ್

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Dalilama

Visit: ಜ.5ಕ್ಕೆ ಬೈಲುಕುಪ್ಪಗೆ ದಲೈಲಾಮಾ ಭೇಟಿ

5-snehamayi

Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.