ಯಶಸ್ವಿಯಾಗಿ ಮುಕ್ತಾಯಗೊಂಡ ಗಜಗಣತಿ 


Team Udayavani, May 20, 2017, 12:45 PM IST

mys6.jpg

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ  ಎಲ್ಲ ವಲಯಗಳಲ್ಲೂ ರಾತ್ರಿ ಉತ್ತಮ ಮಳೆಯಾಗಿದ್ದು, ಬೆಳಗಿನ ಜಾವ ತುಂತುರು ಮಳೆಯಾಗಿ ಭಯಭೀತರಾಗಿದ್ದ ಗಣತಿದಾರರು ನಂತರದಲ್ಲಿ ಮೋಡ ಮುಸುಕಿದ ವಾತಾವರಣದ ನಡುವೆಯೇ ಕೆರೆ-ಕಟ್ಟೆಗಳ ಬಳಿ ಕುಳಿತು ಆನೆಗಣತಿ ನಡೆಸುವ ವೇಳೆ ಬಹುತೇಕ ವಲಯಗಳಲ್ಲಿ ಹಿಂಡು ಆನೆಗಳು ಕಂಡು ಬಂದರೆ ಹಲವೆಡೆ 1-2 ಆನೆಗಳು ಕಾಣಿಸಿಕೊಂಡಿದ್ದು, ಗಣತಿದಾರರು ಸಖತ್‌ ಖುಷಿ ಆಗಿ ಆನೆಗಳ ದಾಖಲೆ ಮಾಡಿಕೊಂಡರು.

ಗಜಗಣತಿಯ ಮೂರನೇ ದಿನದಂದು ನೀರಿನ ಬಳಿ ಕುಳಿತು ನಡೆಸುವ ಗಣತಿಯಲ್ಲಿ ಬರೀ ಆನೆಗಳಲ್ಲದೆ, ನವಿಲು, ಸರ್ಪಂಟೆನಾ ಹದ್ದು, ಹುಲಿ, ಕಾಡುನಾಯಿ, ಜಿಂಕೆ-ಸಾರಂಗ ಸೇರಿದಂತೆ ವಿವಿಧ ಪ್ರಾಣಿಗಳು ನೀರು ಕುಡಿಯಲು ಬಂದ ವೇಳೆ ದರ್ಶನ ನೀಡಿವೆ.

ವೀರನಹೊಸಹಳ್ಳಿ ವಲಯದ ಬಹುತೇಕ ಕೆರೆಗಳ ಬಳಿ ಅಟ್ಟಣೆ ಮೇಲೆ ಕುಳಿತು ಗಣತಿ ನಡೆಸಿದರೆ, ಕೆಲ ವಲಯಗಳನ್ನು  ಹೊರತು ಪಡಿಸಿ ಬಹುತೇಕ ಕಡೆ ಕೆರೆ ಏರಿ, ಮರದ ಮರೆಯಲ್ಲಿ ಗುತ್ತಿಗಳ ಹಿಂದೆ ವನ್ಯಪ್ರಾಣಿಗಳ ಕಣ್ಣಿಗೆ ಕಾಣಿಸದಂತೆ ಅರಣ್ಯ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಕುಳಿತುಕೊಂಡೇ ಆನೆಗಳ ಗಣತಿ ನಡೆಸಿ ದಾಖಲು ಮಾಡಿಕೊಂಡರು. ಮುನ್ನೆಚ್ಚರಿಕೆಯಾಗಿ ಎಲ್ಲ ಸಿಬ್ಬಂದಿಗೆ ರೆಫ‌ಲ್‌, ಪಟಾಕಿ ನೀಡಲಾಗಿತ್ತು.

ಹಿಂಡು ಆನೆಗಳು ಕಂಡ ಸಂತಸ: ಮತ್ತಿಗೋಡು ವಲಯದ ಆನೆಚೌಕೂರು ಕೆರೆಯಲ್ಲಿ ಏಳು ಆನೆಗಳು, ಮರಳುಕಂಠಿ ಕೆರೆಬಳಿ ಎರಡು, ಹುಣಸೂರು ವಲಯದ ಬೆಳಗ್ಗೆ ಒಂಟಿ ಆನೆ ದರ್ಶನ ನೀಡಿದ್ದರೆ, ಪಾರದಕೊಳದಲ್ಲಿ ನಾಲ್ಕು ಆನೆಗಳು, ಕೆಲ್ಲಾರೆಕೆರೆ ಮತ್ತು ಹಂದಿಗೆರೆಯಲ್ಲಿ ಒಂದು ಆನೆ ಕಾಣಿಸಿಕೊಂಡಿದೆ, ಕೋರ್‌ ಏರಿಯಾದ ಕಬಿನಿ ಹಿನ್ನೀರಿನಲ್ಲಿ ಆನೆಗಳ ಹಿಂಡು, ನಾಗರಹೊಳೆ ವಲಯದ ದೊಡ್ಡಹಳ್ಳದಲ್ಲಿ 12 ಆನೆಗಳ ಹಿಂಡು, ಪಿಕಾಕ್‌ಕೆರೆ ಬಳಿ ಬೆಳಗ್ಗೆ ಏಳು ಹಾಗೂ ಸಂಜೆ ಎರಡು ಆನೆಗಳು ಕಂಡಿವೆ.

ಇನ್ನೂ ವೀರನಹೊಸಹಳ್ಳಿ, ಕಲ್ಲಹಳ್ಳ, ಅಂತರಸಂತೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ ವಲಯಗಳಲ್ಲೂ ಸಾಕಷ್ಟು ಆನೆಗಳ ಹಿಂಡು ಹಾಗೂ ಒಂಟಿಯಾಗಿಯೂ ಗೋಚರಿಸಿವೆ. ಅಲ್ಲದೆ ಇತರೆ ಪ್ರಾಣಿ-ಪಕ್ಷಿಗಳನ್ನು ಕಂಡು ಸ್ವಯಂ ಸೇವಕರು ಸಂತಸಪಟ್ಟಿದ್ದಾರೆ.

ಹುಣಸೂರು ವಲಯದ ಮುತ್ತುಗದ ಕಟ್ಟೆ ಬಳಿ ಕಳೆದ ಮೂರು ದಿನಗಳಿಂದಲೂ ಹುಲಿ ಕಂಡಿದ್ದರೆ, ವೀರನಹೊಸಹಳ್ಳಿ, ಕಲ್ಲಹಳ್ಳ, ನಾಗರಹೊಳೆ, ಡಿ.ಬಿ.ಕುಪ್ಪೆ, ಅಂತರಸಂತೆ, ಮೇಟಿಕುಪ್ಪೆ ವಲಯಗಳ ಕೆರೆಗಳ ಬಳಿ ಹುಲಿಗಳು ನೀರು ಕುಡಿಯಲು ಆಗಮಿಸಿದ್ದ ವೇಳೆ ಕಾಣಿಸಿಕೊಂಡಿದ್ದು, ಆನೆಗಣತಿಯಲ್ಲಿದ್ದ ಸ್ವಯಂಸೇವಕರಿಗೆ ಹುಲಿಗಳ ದರ್ಶನ ಆಯಾಸ ದೂರಮಾಡಿವೆ. ಆನೆಚೌಕೂರು ವಲಯದ ಮರಳು ಕಂಡಿಕೆರೆ ಬಳಿ ಹುಲಿಯ ಘರ್ಜನೆ ಕೇಳಿ ಸ್ವಯಂಸೇವಕರು ಹುಲಿಕಾಣಿಸದಿದ್ದರೂ ಘರ್ಜನೆ ಕೇಳಿಸಿಕೊಂಡು ಅಲ್ಲದೆ ಕೆನ್ನಾಯಿಯ ಹಿಂಡು ಕಂಡು ಪುಳಕಿತರಾಗಿದ್ದರು.

ಆನೆಚೌಕೂರು ವಲಯದ ಎಲ್ಲೆಡೆ ಎಸಿಎಫ್ ಪ್ರಸನ್ನಕುಮಾರ್‌ ಅಡ್ಡಾಡಿ ಸ್ವಯಂಸೇವಕರೊಂದಿಗೆ ವನ್ಯಜೀವಿ ಹಾಗೂ ಅರಣ್ಯ ಪರಿಸರ, ಗಣತಿ ಬಗ್ಗೆ ಚರ್ಚಿಸಿ ಮಾಹಿತಿ ನೀಡಿದರು. ಆನೆಚೌಕೂರು ವಲಯದ ಆರ್‌ಎಫ್ಒ ಕಿರಣ್‌ಕುಮಾರ್‌, ಹುಣಸೂರು ವಲಯದ ಸುಬ್ರಮಣ್ಯ ಎಲ್ಲಕೆರೆ-ಕಟ್ಟೆಗಳಿಗೆ ಭೇಟಿ ಇತ್ತು ಪರಿಶೀಲಿಸಿದರು.

ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ ವಲಯ ಸೇರಿದಂತೆ ಹಲವೆಡೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಸೂಗಾರ, ಅನೂರ್‌ರೆಡ್ಡಿ, ರಂಗರಾವ್‌ ಹಾಗೂ ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್‌, ಗಣತಿಯ ಉಸ್ತುವಾರಿಯಾದ ಎಸಿಎಫ್ ಸತ್ಯನಾರಾಯಣ್‌ ಭೇಟಿ ನೀಡಿ ಗಣತಿ ಕಾರ್ಯ ಪರಾಮರ್ಶಿಸಿ, ಸ್ವಯಂಸೇವಕರ ಅನಿಸಿಕೆ ಪಡೆದು ಕೊಂಡರು.

ಬೆಂಗಳೂರಿನಿಂದ ಬಂದಿದ್ದ ಸ್ವಯಂ ಸೇವಕರಾದ  ಸುರೇಖಾ ಶಿವಶಿಂಪಿ, ರಶ್ಮಿರಾವ್‌ ಉದಯವಾಣಿಯೊಂದಿಗೆ ಮಾತನಾಡಿ ಮೂರು ದಿನಗಳ ಆನೆಗಣತಿ ಕಾರ್ಯದಿಂದಾಗಿ ನನ್ನಲ್ಲಿ ಅರಣ್ಯ ಪ್ರೀತಿ ಹೆಚ್ಚಿದೆ, ಪ್ರಥಮ ದಿನ ಆನೆ ದರ್ಶನವಾಗಿತ್ತು, ಕೆನ್ನಾಯಿ(ಕಾಡುನಾಯಿ), ಜಿಂಕೆ, ಸಾರಂಗ ಹಾಗೂ ಕಾಡಿನ ಪರಿಸರ ಕಂಡು ಖುಷಿಯಾಗಿದೆ.

ಆದರೆ ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ ಜೀವನ ಕಷ್ಟಕರವಾಗಿದೆ. ಕುಟುಂಬದ ಸಂಪರ್ಕದಿಂದ ದೂರವಿರುವ ಇವರಿಗೆ ಹೆಚ್ಚಿನ ಸೌಲಭ್ಯಗಳು ಅತ್ಯವಶ್ಯಕ. ಅರಣ್ಯದ ಪರಿಸರ ಹಾಗೂ ವನ್ಯಜೀವಿಗಳ ದರ್ಶನದಿಂದ ನನ್ನಲ್ಲಿದ್ದ ಭಯ ದೂರವಾಗಿದೆ. ಇಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರು. ಮತ್ತೂಮ್ಮೆ ಇಲ್ಲಿಗೆ ಬಂದು ಸಿಬ್ಬಂದಿಗೆ ಕೈಲಾದ ಮಟ್ಟಿಗೆ ಸೇವೆ ಗೈಯುವೆ ಎಂದರು.

ಮಹತ್ವಾಕಾಂಕ್ಷೆಯ ಮೂರು ದಿನಗಳ ಕಾಲ ನಡೆದ ವಿವಿಧ ಮಾದರಿಯ ಗಜಗಣತಿ ಯಶಸ್ವಿಯಾಗಿ ನಡೆದಿದೆ. ಎಲ್ಲ ವಲಯಗಳಿಂದ ಮಾಹಿತಿಯನ್ನು ಅಂತಿಮ ಗೊಳಿಸಿ, ಅಂತಿಮವಾಗಿ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಸೆನ್ಸ್‌ಗೆ ಕಳುಹಿಸಿ ಕೊಡಲಾಗುವುದು. ಅವರು ಪರಾಮರ್ಶಿಸಿ 2-3 ತಿಂಗಳ ನಂತರ  ಅಂತಿಮವಾಗಿ ಆನೆಗಣತಿಯ ವರದಿ ನೀಡುವರು. ಮಣಿಕಂಠನ್‌, ಮುಖ್ಯಸ್ಥರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ.

* ಸಂಪತ್‌ ಕುಮಾರ್

ಟಾಪ್ ನ್ಯೂಸ್

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

1-qeqwewq

Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.