ಇಂತಹ ಮೃಗೀಯ ಆಚರಣೆ ನೋಡಿದ್ದೀರಾ?


Team Udayavani, Jan 31, 2020, 4:08 PM IST

mysuru-tdy-2

ಎಚ್‌.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆಯಲ್ಲಿ ಹುಲಿಕೆರೆ ವೇಣುಗೋಪಾಲಸ್ವಾಮಿ ಜಾತ್ರೆಯಲ್ಲಿ ನರಿಯೊಂದನ್ನು ಬಂಧಿಸಿ ಬೀದಿ ನಾಯಿಗಳಿಂದ ದಾಳಿ ನಡೆಸುತ್ತಿರುವ ಮೌಡ್ಯ ಸಂಪ್ರದಾಯದ ವಿವಿಧ ದೃಶ್ಯಾವಳಿಗಳು.

ಎಚ್‌.ಡಿ.ಕೋಟೆ: ಜಾತ್ರೆ, ಭಕ್ತಿಯ ಹೆಸರಿನಲ್ಲಿ ಇಂತಹ ಅಮಾನವೀಯ ಹಾಗೂ ಮೌಡ್ಯದ ಆಚರಣೆ ಯನ್ನು ಸಾಮಾನ್ಯವಾಗಿ ನೀವು ನೋಡಿಯೇ ಇರುವುದಿಲ್ಲ.

ನರಿಯನ್ನು ಬೇಟೆಯಾಡಿ, ಗ್ರಾಮಕ್ಕೆ ತಂದು ಅದರ ಬಾಯಿಯನ್ನು ಹಗ್ಗದಿಂದ ಕಟ್ಟಿಹಾಕಲಾಗುತ್ತದೆ. ಬಳಿಕ ಬಂಧಿಯಾಗಿರುವ ಆ ನರಿಯನ್ನು ಬೀದಿ ನಾಯಿ ಗಳೊಂದಿಗೆ ಕಾಳಗಕ್ಕೆ ಬಿಡಲಾಗುತ್ತದೆ. ಬಂಧಿಯಾಗಿರುವ ಮೂಕಪ್ರಾಣಿ ನರಿಯನ್ನು ನಾಯಿಗಳು ಅಟ್ಟಾಡಿಸಿಕೊಂಡು ಕಚ್ಚುತ್ತವೆ. ಒಂದೆಡೆ ನರಿಯು ಹಿಂಸೆಯಿಂದ ನರಕಯಾತನೆ ಅನುಭವಿಸಿದರೆ, ಗ್ರಾಮಸ್ಥರು ಮಾತ್ರ ಮಜಾ ತೆಗೆದುಕೊಳ್ಳುತ್ತಾರೆ. ಇಂತಹ ಮೃಗೀಯ ಆಚರಣೆಯು, ಎಚ್‌.ಡಿ. ಕೋಟೆ ತಾಲೂಕು ಕೇಂದ್ರ ಸ್ಥಾನದಿಂದ ಸುಮಾರು 8 ಕಿ.ಮೀ. ಅಂತರದಲ್ಲಿರುವ ಹೆಬ್ಬಲಗುಪ್ಪೆ ಗ್ರಾಮದಲ್ಲಿ ನಡೆಸಲಾಗಿದೆ. ಇದೇ ತಿಂಗಳ 16ರಂದು ನಡೆದಿದೆ ಎನ್ನಲಾಗಿದೆ.

ಈ ಅಮಾನವೀಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಈ ಬಗ್ಗೆ ನೆಟ್ಟಿಗರು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಬ್ಬಲಗುಪ್ಪೆ ಗ್ರಾಮದಲ್ಲಿ ಹುಲಿಕೆರೆ ವೇಣುಗೋಲ ಸ್ವಾಮಿ ಜಾತ್ರೆಯಲ್ಲಿ ಗ್ರಾಮಸ್ಥರು ಈ ರೀತಿ ಮೂಕ ಪ್ರಾಣಿಗೆ ಹಿಂಸೆ ಕೊಡುವ ಆಚರಣೆ ನಡೆಸಲಾಗಿದೆ.

ಏನಿದು ಆಚರಣೆ?: ಹೆಬ್ಬಲಗುಪ್ಪೆ ಗ್ರಾಮದ ಹುಲಿಕೆರೆ ವೇಣು ಗೋಪಾಲಸ್ವಾಮಿ ಜಾತ್ರೆ ವೇಳೆ, ಪ್ರತಿ ವರ್ಷ ಗ್ರಾಮದ ಒಂದು ತಂಡ ಅರಣ್ಯಕ್ಕೆ ಹೋಗಿ ನರಿ ಯೊಂದನ್ನು ಜೀವಂತವಾಗಿ ಬೇಟೆಯಾಡಿ ಗ್ರಾಮಕ್ಕೆ ತರುತ್ತಾರೆ. ಬಳಿಕ ಜಾತ್ರಾ ಸಂದರ್ಭದಲ್ಲಿ ನರಿಯ ಬಾಯಿಗೆ ಹಗ್ಗ ಕಟ್ಟಲಾಗುತ್ತದೆ. ನಂತರ ಬೀದಿ ನಾಯಿಗಳೊಂದಿಗೆ ಕಾಳಗಕ್ಕೆ ಬಿಡುತ್ತಾರೆ. ಈ ವೇಳೆ, ನರಿ ಹಿಂಸೆ ಅನುಭವಿಸುವುದನ್ನು ತಮಾಷೆಯಾಗಿ ನೋಡುವುದು ಇಲ್ಲಿನ ಸಂಪ್ರದಾಯವಾಗಿದೆ. ಇದು ತಲೆ ಮಾರುಗಳಿಂದ ನಡೆದುಕೊಂಡು ಬರುತ್ತಿದೆ ಎಂದು ತಿಳಿದು ಬಂದಿದೆ.

ಅದರಂತೆಯೇ ಕಳೆದ 15 ದಿನಗಳ ಹಿಂದೆ ನರಿಯನ್ನು ತಂದು ಬೀದಿನಾಯಿ ಗಳಿಂದ ಕಚ್ಚಿಸಿ ಚಿತ್ರಹಿಂಸೆ ನೀಡಲಾಗಿರುವ ವಿಡಿಯೋ ಈಗ ವೈರಲ್‌ ಅಗಿದೆ. ತಾಲೂಕು ಕೇಂದ್ರ ಸ್ಥಾನದಿಂದ 8 ಕಿ.ಮೀ. ಅಂತರದಲ್ಲಿ ಪ್ರತಿವರ್ಷ ಈ ಮೂಢನಂಬಿಕೆ ಪದ್ಧತಿ ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬರುತ್ತಿದ್ದರೂ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಗಮನಕ್ಕೆ ಬಂದಿಲ್ಲ. ಇನ್ನಾದರೂ ಅಧಿಕಾರಿಗಳು ಜಾಗೃತರಾಗಿ ಈ ವೈರಲ್‌ ಆಗಿರುವ ದೃಶ್ಯಾವಳಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿ ಮುಂದಿನ ದಿನಗಳಲ್ಲಿ ಇಂತಹ ಮೂಢನಂಬಿಕೆ, ಕಂದಾಚಾರಗಳು ನಡೆಯದಂತೆ ಕ್ರಮ ಕೈಗೊಳ್ಳುವಂತೆ ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ದೇವಾಲಯಗಳಲ್ಲಿ ಪ್ರಾಣಿ ಬಲಿ ನಿಷೇಧಿಸಿ ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ಆದೇಶ ಹೊರಡಿಸಿದೆ. ಇನ್ನು ವನ್ಯಜೀವಿಗಳ ಜೊತೆ ಚಲ್ಲಾಟ ವನ್ಯಜೀವಿಗಳ ಬೇಟೆಯಾಡುವುದು, ವನ್ಯಜೀವಿಗಳನ್ನು ಕಾಡಿನಿಂದ ನಾಡಿಗೆ ತಂದು ಪೋಷಣೆ ಮಾಡುವುದು ಕಾನೂನು ಬಾಹಿರ. ವನ್ಯ ಜೀವಿಗಳ ರಕ್ಷಣೆಗಾಗಿ ವನ್ಯಜೀವಿ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಇಷ್ಟಿದ್ದರೂ ಹೆಬ್ಬಲಗುಪ್ಪೆ ಗ್ರಾಮಸ್ಥರು ನರಿಯೊಂದನ್ನು ಜೀವಂತವಾಗಿ ಅರಣ್ಯದಲ್ಲಿ ಬೇಟೆಯಾಡಿ ಬಂಧಿಸಿ ತಂದು ಇಡೀ ಗ್ರಾಮದಲ್ಲಿ ನರಿ ಮೆರವಣಿಗೆ ನಡೆಸಿ ಬಳಿಕ ದೇವಸ್ಥಾನದ ಜಾತ್ರಾ ಆವರಣದಲ್ಲಿ ನರಿ ಬಾಯಿಯನ್ನು ಹಗ್ಗದಿಂದ ಬಂಧಿಸಿ ಬೀದಿ  ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಹೆಬ್ಬಲಗುಪ್ಪೆಯಲ್ಲಿ ಇಂತಹ ಆಚರಣೆ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ವನ್ಯಜೀವಿಗಳನ್ನು ಬೇಟೆಯಾಡಿ ತಂದು ಹಿಂಸೆ ನೀಡುವುದು ಕಾನೂನು ಬಾಹಿರವಾಗಿದೆ. ಗ್ರಾಮದಲ್ಲಿ ಈಗ ನಡೆದಿರುವ ಅಮಾನವೀಯ ಆಚರಣೆ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಮುಂದಿನ ವರ್ಷದಿಂದ ಇಂತಹ ಕೃತ್ಯ ನಡೆಯದಂತೆ ನೋಡಿಕೊಳ್ಳಲಾಗುವುದು.  –ಆರ್‌.ಮಂಜುನಾಥ್‌, ತಹಶೀಲ್ದಾರ್‌

ಹೆಬ್ಬಲಗುಪ್ಪೆ ಗ್ರಾಮದಲ್ಲಿ ನರಿಯನ್ನು ಹಿಂಸಿಸಿ ಜಾತ್ರೆ ನಡೆಸಿರುವುದು ಈಗ ನಮ್ಮ ಗಮನಕ್ಕೆಬಂದಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗ್ರಾಮಕ್ಕೆ ಕಳುಹಿಸಿ, ವಿಡಿಯೋದಲ್ಲಿ ಕಂಡು ಬಂದ ವ್ಯಕ್ತಿಗಳನ್ನು ಗುರುತಿಸಿ ಮಾಹಿತಿಪಡೆಯಲಾಗುವುದು. ಬಳಿಕ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು.ಮಧು, ಎಚ್‌.ಡಿ.ಕೋಟೆ ವಲಯ ಅರಣ್ಯಾಧಿಕಾರಿ

 

-ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.