ಗುಣಮಟ್ಟದ ಹಾಲು ಪೂರೈಕೆ ಮಾಡಿ
Team Udayavani, Sep 26, 2017, 12:08 PM IST
ಬನ್ನೂರು: ರೈತನಿಗೆ ವ್ಯವಸಾಯದೊಂದಿಗೆ ಪಶುಪಾಲನೆ ಮುಖ್ಯವಾಗಿದ್ದು, ಉತ್ತಮÊ ರಾಸುಗಳನ್ನು ಸಾಕುವ ಮೂಲಕ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿದರೆ ಉತ್ತಮ ಆದಾಯವನ್ನೂ ಗಳಿಸಬಹುದೆಂದು ಮಾದಿಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಕುಮಾರ್ ತಿಳಿಸಿದರು.
ಪಟ್ಟಣದ ಸಮೀಪದಲ್ಲಿರುವ ಮಾದಿಗಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರೈತರು ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೆಲವರು ವ್ಯವಸಾಯವನ್ನೇ ಬೇಡವೆಂದು ಅನ್ಯ ಉದ್ಯೋಗದತ್ತ ಮುಖ ಮಾಡಿದ್ದಾರೆ. ರೈತ ಅನ್ನದಾತನಾಗಿದ್ದು, ಯಾರೂ ಈ ವೃತ್ತಿಯನ್ನು ತೊರೆಯದಂತೆ ಮನವಿ ಮಾಡಿದರು.
ಮಾದಿಗಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ರಾಮಕೃಷ್ಣ, 2016-17ನೇ ಸಾಲಿನಲ್ಲಿ 68,50,867.25 ಪೈಸೆಯ ಹಾಲು ಖರೀದಿ ಮಾಡಿದ್ದು, 10,41,979.32 ಪೈಸೆ ವ್ಯಾಪಾರ ಲಾಭ ಬಂದಿದೆ. ಇದರಲ್ಲಿ ಖರ್ಚು ವೆಚ್ಚಗಳನ್ನು ಕಳೆದು 2,47,426.80 ಪೈಸೆ ನಿವ್ವಳ ಬಂದಿರುವುದಾಗಿ ತಿಳಿಸಿದರು. ಮುಖ್ಯ ಅತಿಥಿ ಎಂ.ರವೀಂದ್ರನಾಥ್, ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವುದರಿಂದ ಉತ್ತಮ ಆದಾಯವ ಗಳಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾದಿಗಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದೇಗೌಡ, ರಮೇಶ್, ಬೊಕಳಪ್ಪ, ಎನ್.ಪುಟ್ಟಸ್ವಾಮಿ, ಜೆ.ಜೀವನ್, ಬಸವರಾಜು, ಪರಂಜ್ಯೋತಿ, ಚಂದ್ರ, ಪಾರ್ವತಮ್ಮ, ಜಯಮ್ಮ, ಎಂ.ಸಿ.ಸೋಮೇಗೌಡ, ಎಂ.ಎಸ್.ರಾಮಲಿಂಗು, ಶ್ರೀನಿವಾಸ್, ಮಾದಿಗಹಳ್ಳಿ ಗ್ರಾಮಸ್ಥರು, ಮುಖಂಡರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.