ವಿವಾದಿತ ಸಾರಾ ಕಲ್ಯಾಣ ಮಂಟಪ ವ್ಯಾಪ್ತಿಯಲ್ಲಿ ಸರ್ವೆ
Team Udayavani, Jun 12, 2021, 5:12 PM IST
ಮೈಸೂರು: ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆಗಂಭೀರ ಆರೋಪ ಎದುರಿಸುತ್ತಿರುವ ಶಾಸಕ ಸಾ.ರಾ.ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪದ ಸುತ್ತಮುತ್ತ ಅಧಿಕಾರಿಗಳು ಸರ್ವೆ ನಡೆಸಿದರು.
ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಎಸಿ ವೆಂಕಟರಾಜು ಹಾಗೂ ತಹಶೀಲ್ದಾರ್ ರಕ್ಷಿತ್ ನೇತೃತ್ವದಲ್ಲಿ ಸರ್ವೆಕಾರ್ಯ ನಡೆಯಿತು.ಮೂಲ ಸರ್ವೆ, ರೀ ಸರ್ವೆ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ಮಾಡುತ್ತಿದ್ದೇವೆ. 11 ಜನರ ತಂಡಈ ಕಾರ್ಯದಲ್ಲಿ ಪಾಲ್ಗೊಂಡಿದೆ. ಸರ್ವೆ ಮುಗಿದ ಮೇಲೆಅದರ ವರದಿಯನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಲಿದ್ದೇವೆ ಎಂದು ಸರ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಎಸಿ ವೆಂಕಟರಾಜು ಪ್ರತಿಕ್ರಿಯಿಸಿ, ಪ್ರಾದೇಶಿಕಆಯುಕ್ತರ ಸೂಚನೆಯಂತೆ ಸರ್ವೆ ನಡೆಯುತ್ತಿದೆ. ಸಾರಾಭವನ ರಾಜಕಾಲುವೆ ಮೇಲೆ ಕಟ್ಟಲಾಗಿದೆ ಎಂಬ ಆರೋಪಹಿನ್ನೆಲೆ, ಈ ಅಂಶದ ಮೇಲೆ ಸರ್ವೆ ನಡೆಯುತ್ತಿದೆ. ಇದೇಅಂಶವನ್ನು ಇಟ್ಟುಕೊಂಡು ಸರ್ವೆ ಮಾಡುತ್ತಿದ್ದೇವೆ. ಸರ್ವೆನಂಬರ್ 130/3 ಸೇರಿದಂತೆ ಅಕ್ಕಪಕ್ಕದ ಸ.ನಂನಲ್ಲಿ ಸರ್ವೆಕಾರ್ಯ ನಡೆಸಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆ ಮುಗಿದನಂತರ ಪ್ರಾದೇಶಿಕ ಆಯುಕ್ತರಿಗೆ ವರದಿ ಕೊಡ್ತೇವೆ ಎಂದು ತಿಳಿಸಿದರು.
ಮೈಸೂರು ನಗರ ಹಾಗೂ ಸುತ್ತಮುತ್ತ ಕೆರೆಒತ್ತುವರಿಯಾಗಿದ್ದು, ಭೂ ಹಗರಣ ನಡೆದಿದೆ ಎಂದುಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗಂಭೀರಆರೋಪ ಮಾಡಿದ್ದರು. ಬಳಿಕ ಶಾಸಕ ಸಾ.ರಾ.ಮಹೇಶ್‌ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ಕಟ್ಟಿದ್ದರೆ ಕ್ರಮಜರುಗಿಸುವಂತೆ ಗುರುವಾರ ಪ್ರಾದೇಶಿಕ ಆಯುಕ್ತರಿಗೆಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.