ಸ್ವಿಫ್ಟ್ ಕಾರು-ಜೀಪ್ ಢಿಕ್ಕಿ: ಮದುಮಗ ಸಾವು, ತಾಯಿ ಸೇರಿ ಮೂವರಿಗೆ ತೀವ್ರ ಗಾಯ
Team Udayavani, Mar 6, 2021, 9:29 AM IST
ಹುಣಸೂರು: ಮದುವೆಗೆ ಬಟ್ಟೆ ಖರೀದಿಸಿ ಊರಿಗೆ ಮರಳುತ್ತಿದ್ದವರಿದ್ದ ಸ್ವಿಫ್ಟ್ ಕಾರಿಗೆ ತೂಫಾನ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಹಸೆಮಣೆ ಏರಬೇಕಿದ್ದ ವರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಈತನ ತಾಯಿ ಸೇರಿದಂತೆ ಕಾರಿನಲ್ಲಿದ್ದ ಮೂವರಿಗೆ ತೀವ್ರಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಣಸೂರಿನ ಹಿರಿಕ್ಯಾತನಹಳ್ಳಿ ನಿವಾಸಿ ಜಗದೀಶ್ ರ ಪುತ್ರ ಅಭಿಷೇಕ್ ಗೌಡ (26 ವ) ಸಾವನ್ನಪ್ಪಿದ್ದ ದುರ್ದೈವಿ. ತಾಯಿ ಮಂಜುಳ ಹಾಗೂ ನಟರಾಜ್ ಎಂಬುವವರಿಗೆ ತೀವ್ರಗಾಯಗಳಾಗಿದ್ದು, ಚನ್ನರಾಯಪಟ್ಟಣ ಮತ್ತು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ರ ಅಭಿಷೇಕ್ ಗೌಡನ ಮದುವೆ ಸಂಬಂಧ ದಾವಣಗೆರೆಯಿಂದ ಬಟ್ಟೆ ಖರೀದಿಸಿದ್ದ ಜಗದೀಶ್ ಬಟ್ಟೆಯೊಂದಿಗೆ ಟಿ.ಟಿ.ವಾಹನದಲ್ಲಿ ಹುಣಸೂರಿನತ್ತ ಬರುತ್ತಿದ್ದರು. ಮದುಮಗ ಅಭಿಷೇಕ್ ಗೌಡ ಹಾಗೂ ತಾಯಿ ಮಂಜುಳ ಮತ್ತವನ ಸ್ನೇಹಿತ ನಟರಾಜ್ ಹಾಗೂ ಯುವತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಬೆಳಗಿನ ಜಾವ 3.30ರ ಸಮಯಕ್ಕೆ ಚನ್ನರಾಯಪ್ಪಣದ ಬಳಿ ಎದುರಿನಿಂದ ತೀವ್ರ ಮಂಜು ಬೀಳುತ್ತಿದ್ದರಿಂದ ಎದುರಿನಿಂದ ಬರುತ್ತಿದ್ದ ತುಫಾನ್ ಜೀಪ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮುಂದೆ ಕುಳಿತಿದ್ದ ನಟರಾಜ್ ಗೆ ತೀವ್ರಗಾಯವಾಗಿದೆ. ಮಂಜುಳರ ಕೈ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿದೆ.
ಇದನ್ನೂ ಓದಿ:ಪಂಚ ಸಮರಕ್ಕೆ ಕಳೆ : ಪ. ಬಂಗಾಲದಲ್ಲಿ ಟಿಎಂಸಿಯಿಂದ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆದರೆ ಜಗದೀಶ್ ಹಿಂಬದಿಯ ಟಿಟಿ ವಾಹನದಲ್ಲಿದ್ದರಿಂದ ಪಾರಾಗಿದ್ದಾರೆ.
ಐದು ವರ್ಷಗಳ ಹಿಂದೆ ಜಗದೀಶರ ಮೊದಲ ಪುತ್ರ ಪ್ರವಾಸಕ್ಕೆ ಹೋಗಿದ್ದ ವೇಳೆ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದರು. ಇದೀಗ ಹಸೆಮಣೆ ಏರಬೇಕಿದ್ದ ಎರಡನೇ ಪುತ್ರ ಸಹ ಸಾವನ್ನಪ್ಪಿದ್ದು,ಮಕ್ಕಳ ಸಾವಿನಿಂದ ಕುಟುಂಬದಲ್ಲೀಗ ಅನಾಥ ಪ್ರಜ್ಣೆ ಕಾಡುತ್ತಿದೆ.
ಶವವನ್ನು ಚನ್ನರಾಯಪಟ್ಟಣ ಶವಾಗಾರದಲ್ಲಿರಿಸಲಾಗಿದೆ. ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.