5.5 ಕೋಟಿ ರೂ. ವೆಚ್ಚದಡಿ ಬಾಲಸ್ನೇಹಿ ಅಂಗನವಾಡಿ
Team Udayavani, May 9, 2022, 3:54 PM IST
ಹುಣಸೂರು: ಶಾಸಕ ಎಚ್.ಪಿ.ಮಂಜುನಾಥರ ಆಶಯದಂತೆ ತಾಲೂಕಿನ 194 ಅಂಗನವಾಡಿ ಕೇಂದ್ರ ಗಳನ್ನು ವಿವಿಧ ಅನುದಾನದಡಿ ಬಾಲಸ್ನೇಹಿ ಅಂಗನ ವಾಡಿ ಗಳನ್ನಾಗಿ ಪರಿವರ್ತಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಾಪಂ ಇಒ ಗಿರೀಶ್ ಹೇಳಿದರು.
ತಾಪಂ ಆಡಳಿತಾಧಿಕಾರಿ ಎಚ್.ಸಿ.ನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆ ಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ವೇಳೆ ಮಾಹಿತಿ ನೀಡಿದರು. ತಾಲೂಕಿನಲ್ಲಿ 366 ಅಂಗನವಾಡಿಗಳಿದ್ದು, ಈಗಾಗಲೇ ಮನುಗನಹಳ್ಳಿ ಗ್ರಾಪಂನ ಆರು ಕೇಂದ್ರಗಳನ್ನು ಬಾಲ ಸ್ನೇಹಿ ಕೇಂದ್ರಗಳನ್ನಾಗಿಸಿದ್ದಾರೆ. ಉತ್ತಮವಾಗಿ ರುವುದನ್ನು ಹೊರತುಪಡಿಸಿ ಉಳಿದಂತೆ ಮೊದಲ ಹಂತದಲ್ಲಿ 195 ಅಂಗನವಾಡಿಗಳನ್ನು ಮಕ್ಕಳ ಆಕರ್ಷಣೆ ಗೊಳ್ಳುವಂತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
5.5 ಕೋಟಿ ವೆಚ್ಚದಡಿ ಹೈಟೆಕ್ ಸ್ಪರ್ಶ: ಗೋಡೆಗಳ ಮೇಲೆ ಚಿತ್ರ ಬಿಡಿಸುವುದು, ಕುಡಿಯುವ ನೀರು, ಶೌಚಾಲಯ, ಸೋಲಾರ್, ಪ್ರೊಜೆಕ್ಟರ್, ಆಟಿಕೆಗಳ ಅಳವಡಿಕೆ ಮೂಲಕ ಬಾಲ ಸ್ನೇಹಿಯಾಗಿಸಲು ಸುಮಾರು 5.5 ಕೋಟಿ ರೂ. ವೆಚ್ಚದಡಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ತಾಪಂನ 1.20 ಕೋಟಿ, ಗ್ರಾಪಂನ 15ನೇ ಹಣಕಾಸು ಯೋಜನೆಯಡಿ ಒಂದು ಕೋಟಿ, ಜಿಪಂ ನಿಂದ 50 ಲಕ್ಷ ಅನುದಾನ ಸಿಗಲಿದ್ದು, ಉಳಿಕೆ ಅನುದಾನಕ್ಕೆ ಶಾಸಕ-ಸಂಸದರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
81 ಬಾಡಿಗೆ ಕೇಂದ್ರ: ಈಗಾಗಲೇ 20ಲಕ್ಷ ವೆಚ್ಚದಡಿ 40 ಕೇಂದ್ರಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ನಗರದ 20 ಕೇಂದ್ರ ಸೇರಿದಂತೆ 81 ಬಾಡಿಗೆ ಅಂಗನವಾಡಿಗಳಿವೆ. 8 ಕೇಂದ್ರಗಳು ಸಂಪೂರ್ಣ ಶಿಥಿಲಗೊಂಡಿವೆ ಎಂದು ಸಿಡಿಪಿಒ ರಶ್ಮಿ ತಿಳಿಸಿದರೆ, ನಗರ ವ್ಯಾಪ್ತಿಯಲ್ಲಿ ಅಂಗನವಾಡಿಕೇಂದ್ರಗಳಿಗೆ ನಗರಸಭೆ ವತಿಯಿಂದ ನಿವೇಶನ ಕೊಡಿಸಲು ಕ್ರಮವಹಿಸಿವುದಾಗಿ ಪೌರಾಯುಕ್ತ ರವಿಕುಮಾರ್ ಭರವಸೆ ನೀಡಿದರು.
ಸಿಡಿಪಿಒ ಬೇಸರ: ತಾಲೂಕಿನಲ್ಲಿ 24 ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾಗಿದೆ. 11 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಬಾಲ್ಯವಿವಾಹ ತಡೆಯಲು ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಸಹಕಾರ ಸಿಗುತ್ತಿಲ್ಲವೆಂದು ಸಿಡಿಪಿಒ ರಶ್ಮಿ ಬೇಸರ ವ್ಯಕ್ತಪಡಿಸಿದರು. ಅಪೂರ್ಣಭವನ: 2016-17ನೇ ಸಾಲಿನಿಂದಲೂ 8 ಅಂಬೇಡ್ಕರ್ ಭವನಗಳ ಹಾಗೂ ಚಿಕ್ಕಹುಣಸೂರು ಕೆರೆಯನ್ನು ಪ್ರವಾಸಿ ಕೇಂದ್ರವನ್ನಾಗಿಸುವ ಕೋಟಿ ವೆಚ್ಚದ ಯೋಜನೆ ಹಾಗೂ ಇತರೆ ಕಾಮಗಾರಿಗಳು ಅಪೂರ್ಣಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಆಡಳಿತಾಧಿಕಾರಿ ನಂದ, ಶಾಸಕರೊಂದಿಗೆ ಚರ್ಚಿಸಿ ಪೂರ್ಣಗೊಳಿಸಲು ಕ್ರಮವಹಿಸಿರೆಂದು ಭೂಸೇನಾ ನಿಗಮದ ಎಂಜಿನಿಯರ್ ವಿಜಯ್‌ಗೆ ಸೂಚಿಸಿದರು.
ನಗರದ ಜಗಜೀವನರಾಂ ಭವನ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಶಾಸಕರು ಅನುದಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆಂದು ಸಮಾಜ ಕಲ್ಯಾಣಾಧಿಕಾರಿ ಮೋಹನ್‌ಕುಮಾರ್ ಮಾಹಿತಿ ನೀಡಿದರು.
ಕಳಪೆ ಕಾಮಗಾರಿ ಎಚ್ಚರ: ಬಿಳಿಕೆರೆ ಭಾಗದ ವಡ್ಡರಹಳ್ಳಿ ಹಾಗೂ ಇತರೆಡೆ ಜಲಜೀವನ್ ಮಿಷನ್ ಯೋಜನೆಯ 10.28 ಕೋಟಿ ವೆಚ್ಚದ 28ರ ಕಾಮಗಾರಿಗಳ ಪೈಕಿ 24 ಪೂರ್ಣಗೊಂಡಿವೆ ಎಂದು ಎಇಇ ಮಹೇಶ್‌ರ ಮಾಹಿತಿಗೆ ಕೆಲ ಕಾಮಗಾರಿ ಕಳಪೆಯಾಗಿದೆ ಎಂಬ ದೂರು ಬಂದಿದೆ. ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ನಡೆಸ ಬೇಕೆಂದು ಆಡಳಿತಾಧಿಕಾರಿ ಎಚ್.ಸಿ.ನಂದ ಕಟ್ಟುನಿಟ್ಟಿನ ಆದೇಶಿಸಿದರೆ, ಹರೀನಹಳ್ಳಿ ಕುಡಿಯುವ ನೀರಿನ ಯೋಜನೆಯನ್ನೆಕೆ ಪೂರ್ಣಗೊಳಿಸಿಲ್ಲ ವೆಂದು ಪ್ರಶ್ನಿಸಿ ಅಗತ್ಯಕ್ರಮ ಗೊಳ್ಳುವಂತೆ ಇಒಗೆ ಸೂಚನೆ ನೀಡಿದರು.
ಜಿಪಂ ಎಂಜಿನಿಯರಿಂಗ್ ಉಪವಿಭಾಗವು ಹೊಸ ಗ್ರಾಪಂಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ತಕ್ಷಣವೇ ಎಸ್ಟಿಮೇಟ್ ತಯಾರಿಸಬೇಕೆಂದು ಎಇಇ ಪ್ರಭಾಕರ್‌ಗೆ ಹಾಗೂ ಎಲ್ಲಾ ಇಲಾಖೆಗಳವರು ಮೇ 10ರೊಳಗೆ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆದು ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಇಓ ಗಿರೀಶ್ ಸೂಚಿಸಿದರು.
11 ಕ್ಷಯ ಪತ್ತೆ: ತಾಲೂಕಿನಲ್ಲಿ 11 ಕ್ಷಯ, 3 ಕುಷ್ಠ ರೋಗ ಪತ್ತೆಯಾಗಿದೆ. 73 ಉಪ ಕೇಂದ್ರಗಳ ಪೈಕಿ 44 ಸಮುದಾಯ ಆರೋಗ್ಯಾಧಿಕಾರಿಗಳು ನೇಮಕಗೊಂಡಿದ್ದಾರೆಂದು ತಾ.ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ತಿಳಿಸಿದರು. ವಿವಿಧ ಇಲಾಖೆಗಳ ಮುಖ್ಯಸ್ಥರು ಪ್ರಗತಿ ಪರಿಶೀಲನಾವರದಿ ಮಂಡಿಸಿದರು.
ರಸಬಾಳೆ-ಮಲ್ಲಿಗೆಗೆ ಆದ್ಯತೆ : ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆ ಇಲ್ಲವೆಂದು ಎಡಿಎ ವೆಂಕಟೇಶ್ ತಿಳಿಸಿದರೆ, ಹನಗೋಡು ಭಾಗದಲ್ಲಿ ರಸಬಾಳೆ, ಬಿಳಿಕೆರೆ ಭಾಗದಲ್ಲಿ ಮೈಸೂರು ಮಲ್ಲಿಗೆ ಬೆಳೆಯಲು ಪ್ರೋತ್ಸಾಹಿಸಲಾಗುವುದೆಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ನೇತ್ರಾವತಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.