ತಾಲೂಕಾದ್ಯಂತ 107 ಬಾರ್‌ಗಳು ಬಂದ್
Team Udayavani, Apr 17, 2017, 1:00 PM IST
ಹುಣಸೂರು: ಇತ್ತೀಚಿನ ಸುಪ್ರಿಂಕೋರ್ಟ್‌ನ ಪರಿಷ್ಕೃತ ಆದೇಶದನ್ವಯ ರಾಷ್ಟ್ರೀಯ ಹೆದ್ದಾರಿ 275ಕ್ಕೆ ಒಳಪಡುವ ಹುಣಸೂರು ಉಪವಿಭಾಗದ ಹುಣಸೂರು ತಾಲೂಕು ಸೇರಿದಂತೆ ನಾಲ್ಕು ತಾಲೂಕುಗಳಿಂದ ಒಟ್ಟು 147 ಬಾರ್‌ಗಳ ಪೈಕಿ 107 ಮದ್ಯದಂಗಡಿಗಳು ಜುಲೈ 1 ರಿಂದ ಮುಚ್ಚಲಿವೆ.
ಸುಪ್ರಿಂಕೋರ್ಟ್ ಹೆದ್ದಾರಿಗಳಲ್ಲಿರುವ ಬಾರ್‌ಗಳು 500 ಮೀಟರ್ ದೂರದಲ್ಲಿರಬೇಕು ಮತ್ತು 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಗ್ರಾಮ ಗಳಲ್ಲಿ 220 ಮೀಟರ್ ದೂರದಲ್ಲಿರಬೇಕೆಂದು ಅಂತಿಮ ಆದೇಶ ನೀಡಿದೆ.
ಹುಣಸೂರು ಉಪವಿಭಾಗದ ಪಿರಿಯಾಪಟ್ಟಣ, ಹುಣಸೂರು ತಾಲೂಕು ರಾಷ್ಟ್ರೀಯ ಹೆದ್ದಾರಿಗೆ ಒಳಪಡುತ್ತದೆ, ಇನ್ನು ಕೆ.ಆರ್.ನಗರ, ಎಚ್.ಡಿ.ಕೋಟೆ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿದೆ. ಈ ತಾಲೂಕುಗಳಲ್ಲಿ ಒಟ್ಟು 147 ಬಾರ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ರೆಸಾರ್ಟ್‌ಗಳು ಮುಚ್ಚಲಿವೆ.
ಎಲ್ಲೆಲ್ಲಿ ಬಂದ್: ಹುಣಸೂರು ತಾಲೂಕು 31, ಪಿರಿಯಾ ಪಟ್ಟಣ 33, ಕೆ.ಆರ್. ನಗರ 22, ಎಚ್. ಡಿ. ಕೋಟೆ 21 ಮದ್ಯದಂಗಡಿಗಳು ಜೂನ್ 30ಕ್ಕೆ ಅಂತ್ಯಗೊಳ್ಳಲಿದ್ದು, ಬಂದಾಗುವ ಮದ್ಯದಂಗಡಿ ಗಳವರಿಗೆ ಬೇರೆಡೆಗೆ ಸ್ಥಳಾಂತರಿಸಲು ಅವಕಾಶವಿದೆ.
ಸ್ಥಳಾಂತರಕ್ಕೆ ಅವಕಾಶ: ನಗರ ಪ್ರದೇಶದಲ್ಲಿರುವ ಮದ್ಯದಂಗಡಿಗಳು ಗ್ರಾಮಾಂತರ ಪ್ರದೇಶಕ್ಕೆ ಸ್ಥಳಾಂತರ ಗೊಳ್ಳಬಹುದು, ಆದರೆ ಗ್ರಾಮಾಂತರ ಪ್ರದೇಶದಿಂದ ನಗರಕ್ಕೆ ವರ್ಗಾಯಿಸಲು ನಿಯಮದಡಿ ಅವಕಾಶವಿಲ್ಲ. ಆದರೆ ನಗರ ಪ್ರದೇಶದಿಂದ ಮತ್ತೂಂದು ನಗರಕ್ಕೆ ಸ್ಥಳಾಂತರಿಸಲು ಅವಕಾಶವಿದೆ.
ಹೆದ್ದಾರಿಯಲ್ಲಿ ಬೋರ್ಡ್‌ಗೆ ಅವಕಾಶವಿಲ್ಲ; ಸುಪ್ರಿಂಕೋರ್ಟ್ ಆದೇಶದಂತೆ ಹೆದ್ದಾರಿ ಬಳಿ ಇರುವ ಮದ್ಯದಂಗಡಿ, ಬಾರ್‌ಗಳನ್ನು ಹೆದ್ದಾರಿಯಿಂದ 500 ಮೀಟರ್ ಹಿಂದಕ್ಕೆ ಸ್ಥಳಾಂತರಿಸಿದರೂ ಸಹ ಹೆದ್ದಾರಿ ಬದಿಯಲ್ಲಿ(ರಸ್ತೆಬಳಿ) ಬಾರ್ ಇರುವ ಮಾಹಿತಿಯ ನಾಮಫಲಕ ಅಳವಡಿಸುವಂತಿಲ್ಲ.
ಹುಣಸೂರು ತಾ.ನಲ್ಲಿ ಬಂದಾಗುವ ಅಂಗಡಿಗಳು: ರಾಷ್ಟ್ರೀಯ ಹೆದ್ದಾರಿಯಲ್ಲಿನ ಹುಣಸೂರು ನಗರದ ಎಂ.ಎಸ್.ಐ.ಎಲ್. ಮದ್ಯದಂಗಡಿ ಸೇರಿದಂತೆ ನಗರವ್ಯಾಪ್ತಿಯ 18, ಗ್ರಾಮೀಣ 6 ಒಟ್ಟು 22 ಬಾರ್‌ಗಳಲ್ಲಿ ಲಕ್ಷ್ಮೀವೈನ್ಸ್, ಗೋಲ್ಡನ್ ವೈನ್ಸ್, ಡ್ರೀಮ್‌ಲ್ಯಾಂಡ್, ಎಸ್‌ಎಲ್‌ವಿ, ಪ್ರಶಾಂತ್ ರೆಸಿಡೆನ್ಸಿ,
ಪೂರ್ಣಿಮಾ, ಗುರು ರಾಘವೇಂದ್ರ, ಸಂತೋಷ್, ಗಂಧರ್ವಬಾರ್, ಕಲ್ಪತರು, ಅಲಂಕಾರ್, ಎಸ್.ಎನ್. ಎಂಟರ್‌ಪ್ರೈಸಸ್, ಮಲ್ಲಿಕಾರ್ಜುನ ಬಾರ್, ಎಸ್‌ಆರ್ ಬಾರ್, ರೇಣುಕಾ ಬಾರ್, ಎಸ್‌ಎಲ್‌ವಿ ವೈನ್ಸ್, ಮನುಗನಹಳ್ಳಿಯ ಸಾಗರ್‌ಬಾರ್, ಪ್ರಿನ್ಸ್ ಬಾರ್, ಶ್ರೀನಿವಾಸ ಬಾರ್,
ಎಚ್‌ವಿಎಸ್ ಬಾರ್ ಹಾಗೂ ರಾಜ್ಯ ಹೆದ್ದಾರಿಯಲ್ಲಿರುವ 9 ಬಾರ್‌ಗಳ ಪೈಕಿ ನಗರದ ಗೋಲ್ಡನ್‌ವೆನ್ಸ್, ಚಂಪವೆನ್ಸ್, ಮಾಲತೇಶ್‌ವೆನ್ಸ್, ವೆಂಕಟರಮಣ ಲಿಕ್ಕರ್, ಧನುಷ್ ಬಾರ್, ಪಕ್ಷಿರಾಜಪುರದ ಟೆಗರ್ ರೆಸಾರ್ಟ್ಸ್,ಹೊಸೂರುಗೇಟ್‌ನ ರಾಘವೇಂದ್ರ ವೈನ್ಸ್, ಗುರುಪುರದ ಮೈಲಾರ ಲಿಂಗೇಶ್ವರಬಾರ್, ಕಟ್ಟೆಮಳಲ ವಾಡಿಯ ಸತೀಶ್ ಬಾರ್‌ಗಳು ಬಾಗಿಲು ಮುಚ್ಚಲಿವೆ.
ಕಳೆದ ನವಂಬರ್‌ನಲ್ಲಿ ಹಾಡಿಯಲ್ಲಿ ಅಕ್ರಮ ಮದ್ಯ ಹಾಗೂ ಬಾರ್ ಗಳಿಂದಾಗುತ್ತಿರುವ ಅನಾಹುತದ ಬಗ್ಗೆ ಗಿರಿಜನ ಮುಂದಾಳುಗಳು ಕೊಟ್ಟಿಗೆ ಕಾವಲ್ ಹಾಡಿಯ ಟೆಗರ್ ರೆಸಾರ್ಟ್ ಬಂದ್ ಮಾಡಿಸುವಂತೆ ಎಸ್.ಪಿ ರವಿಚನ್ನಣ್ಣನವರ್‌ರಲ್ಲಿ ಮನವಿ ಮಾಡಿದ್ದರು. ಅವರಿಗೆ ಈ ಆದೇಶ ವರದಾನವಾಗಿದೆ.
* ಸಂಪತ್‌ಕುಮಾರ್ ಹುಣಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.