ತಮಿಳುನಾಡು ನೋಡಿ ಕಲಿಯಬೇಕಿದೆ
Team Udayavani, May 9, 2018, 3:45 PM IST
ಬನ್ನೂರು: ಇಂದಿರಾ ಕ್ಯಾಂಟೀನ್‌ಗೆ ಯಾರು ಹೋಗುತ್ತಾರೆ ಸ್ವಾಮಿ, ಅಲ್ಲಿಗೆ ಹೋಗುವವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ. ನಮಗೆ ಸರಿಯಾಗಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದರೆ ನಾವೇ ನಿಮ್ಮ ಜೋಳಿಗೆಗೆ ಭತ್ತ ಹಾಕಿ ತುಂಬಿಸುತ್ತಿದ್ದೆವು ಸಿದ್ದರಾಮಯ್ಯನವರೇ ಎಂದು ಮಾಜಿ ಪ್ರಧಾನಿ ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಪಟ್ಟಣದ ಹಾಲಿನ ಡೇರಿ ಮುಂಭಾಗದಲ್ಲಿ ಟಿ.ನರಸೀಪುರ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಅಶ್ವಿನ್‌ಕುಮಾರ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ತಮಗೆ ದೇಶದ ರೈತರ ಇಂದಿನ ಸ್ಥಿತಿಯನ್ನು ಕಂಡು ಬಹಳಷ್ಟು ಮರುಕವಿದೆ.
ನಾವು ಪಕ್ಕದ ತಮಿಳುನಾಡಿನ ಜನರನ್ನು ನೋಡಿ ಸಾಕಷ್ಟು ಕಲಿಯಬೇಕಿದೆ. ಅಲ್ಲಿ ಅಣ್ಣಾ ಡಿಎಂಕೆ ಮತ್ತು ಡಿಎಂಕೆಯಂತಹ ಪ್ರಾದೇಶಿಕ ಪಕ್ಷದ ಆಡಳಿತವಿದೆಯೇ ಹೊರತು ಕಾಂಗ್ರೆಸ್, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ಆಡಳಿತವಿಲ್ಲ. ಆದರೂ ಕೇಂದ್ರ ಸರ್ಕಾರ ತಮಿಳುನಾಡಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತಾರೆ ಎಂದು ತಿಳಿಸಿದರು.
ನಮ್ಮಲ್ಲೂ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡುವ ಮೂಲಕ ರೈತರ ಪರವಾಗಿ ಕಾರ್ಯನಿರ್ವಹಿಲಸಲು ಸಿದ್ದರಿರುವ ಕುಮಾರಸ್ವಾಮಿ ಕೈ ಬಲಪಡಿಸಲು ಈ ಭಾಗದಲ್ಲಿ ಅಸ್ವಿನ್ ಕುಮಾರ್‌ರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು.
ಇಡೀ ದೇಶದಲ್ಲಿ ಮುಸ್ಲಿಂರ ಪರವಾಗಿ ಹೋರಾಟ ಮಾಡಿದ ವ್ಯಕ್ತಿ ಇದ್ದರೇ ಅದು ದೇವೇಗೌಡ ಮಾತ್ರ. ಬಿಎಸ್ಪಿ ಪಕ್ಷದ ಮಾಯಾವತಿ ಹಿಂದುಳಿದ ವರ್ಗದ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಅವರು ರಾಜ್ಯದಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಬೇಕೆಂದು ಆಶಿಸಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಅದನ್ನು ಲೋಕಸಭೆಯಲ್ಲೂ ಮುಂದುವರಿಸುವುದಾಗಿ ತಿಳಿಸಿದರು.
ಇಂದು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಕುಮಾರಸ್ವಾಮಿ ಮತ್ತೂಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯದ ರೈತರ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಇಂದು ಜೆಡಿಎಸ್ ಅಲೆ ಹೆಚ್ಚಾಗುತ್ತಿದ್ದು, ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರೂ ಆಶ್ಚರ್ಯ ವ್ಯಕ್ತಪಡಿಸುವುದೇನಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಬಳಗದ ರಾಜ್ಯಾಧ್ಯಕ್ಷ ಮಂಜುನಾಥ್, ಪುರಸಭೆಯ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ರಾಜ್ಯ ಜೆಡಿಎಸ್ ಜಂಟಿ ಕಾರ್ಯದರ್ಶಿ ರಾಹುಲ್, ಚಿಕ್ಕಯ್ಯ, ಅನಂತ, ಪಾರ್ಥಸಾರಥಿ, ರಾಮಸ್ವಾಮಿ, ಚಿಕ್ಕ ಜವರಪ್ಪ, ರಮೇಶ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.
ನಮ್ಮಲ್ಲಿ ಒಗ್ಗಟ್ಟಿನ ಕೊರತೆ: ಕಾವೇರಿ ವಿಚಾರದಲ್ಲಿ ಟ್ರಿಬನಲ್ ಮಂಡಳಿ ವಾರಕ್ಕೆ, ತಿಂಗಳಿಗೆ ತಮಿಳುನಾಡಿಗೆ ನೀರು ಬಿಡಬೇಕೆಂದು ತಿಳಿಸುತ್ತದೆ. ಕಾವೇರಿ ಅಣೆಕಟ್ಟನ್ನು ರಾಜ್ಯದ ಜನತೆಯ ಹಣದಿಂದ ಕಟ್ಟಿದ್ದೇವೆಯೇ ಹೊರತು ತಮಿಳುನಾಡಿನ ಹಣದಿಂದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡ, ತಮಿಳುನಾಡಿನಲ್ಲಿ ಶಾಸಕರು, ಸಂಸದರೆಲ್ಲರೂ ಸೇರಿ ನೀರಿಗಾಗಿ ಧರಣಿ ಕೂರುವ ವ್ಯವಸ್ಥೆ ನಮ್ಮಲ್ಲಿ ಏಕೆ ಇಲ್ಲ.
ರೈತರ ಬಗ್ಗೆ ಕಾಳಜಿ ಇಲ್ಲವೇ ಎಂದು ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದರು. ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅದರ ಬಗ್ಗೆ ಮಾತನಾಡದೇ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಅದು ಜ್ಞಾಪಕವಾಗಿದೆ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.