Heggadadevankote: ಗಿಡಗಂಟಿಯಿಂದ ಮುಚ್ಚಿದ ತಾರಕ ನಾಲೆ; ರೈತರ ಬೆಳೆಗೆ ಹರಿಯದ ನೀರು
Team Udayavani, Dec 6, 2023, 5:06 PM IST
ಎಚ್.ಡಿ.ಕೋಟೆ: ಮುಂಗಾರು ಹಿಂಗಾರು ಮಳೆ ಕೊರತೆ ನಡುವೆಯೂ ರೈತರ ಬೆಳೆಗಳ ಅನುಕೂಲಕ್ಕಾಗಿ ತಾರಕ ಜಲಾಶಯದಿಂದ ಎಡದಂಡೆ ನಾಲೆಗೆ ಹಂತ ಹಂತವಾಗಿ ನೀರು ಹರಿಸುತ್ತಿದ್ದರೂ ಡಿಸ್ಟಿಬ್ಯೂಟರ್ ನಾಲೆಗಳಲ್ಲಿ ಹೂಳು ತುಂಬಿಕೊಂಡು ಗಿಡಗಂಟಿ ಆಳೇತ್ತರ ಬೆಳೆದು ನಿಂತಿರುವುದರಿಂದ ನಾಲೆಯಲ್ಲಿ ನೀರು ಸರಾಗವಾಗಿ ಮುಂದೆ ಹರಿಯದ ಕಾರಣ ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ನೀರು ಸಿಗದೆ ರೈತರು ಪರಿತಪಿಸುವಂತಾಗಿದೆ.
ರೈತರು ಬೆಳೆದ ಬೆಳೆಗಳಿಗೆ ಜಲಾಶಯದಿಂದ ನಾಲೆಗಳ ಮೂಲಕ ಹಂತ ಹಂತವಾಗಿ ನೀರು ಪೂರೈಕೆ ಮಾಡಿ ಅಚ್ಚುಕಟ್ಟು ರೈತರ ಹಿತ ಕಾಪಾಡ ಬೇಕಾದ ತಾರಕ ಜಲಾಶಯದ ಅಧಿಕಾರಿಗಳು ನಾಲೆಗೆ ನೀರು ಹರಿಸುವ ಮೊದಲೇ ನಾಲೆಗಳಲ್ಲಿ ಬೆಳೆದಿರುವ ನಾಲೆಯ ಪುನಶ್ಚೇತನಕ್ಕೆ ಮುಂದಾಗಿ, ಅಳೇತ್ತರ ಬೆಳೆದಿರುವ ಗಿಡಗಂಟಿ ಮತ್ತು ಹೂಳು ತೆರವಿಗೆ ಶ್ರಮಿಸದೇ ನಿರ್ಲಕ್ಷ್ಯ ವಹಿಸಿದ್ದರ ಫಲ ಇಂದು ನಾಲೆಗಳಲ್ಲಿ ನೀರು ಹರಿದರೂ ಅಚ್ಚುಕಟ್ಟು ಪ್ರದೇಶ ಕೊನೆ ಹಂತದ ರೈತರಿಗೆ ನೀರು ಸಿಗದಂತಾಗಿ ರೈತರು ಕಣ್ ಕಣ್ ಬಿಡುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ, ಒತ್ತುವರಿದಾರರಿಂದ ಸೊರಗಿದ ನಾಲೆ: ತಾರಕ ಜಲಾಶಯದ ಎಡದಂಡೆ ನಾಲೆಯ 22 ಮತ್ತು 23ನೇ ಡಿಸ್ಟಿಬ್ಯೂಟರ್ ನಾಲೆ ವ್ಯಾಪ್ತಿಯಲ್ಲಿ ನಾಲೆಗಳು ಹೂಳು ತುಂಬಿಕೊಂಡು ಆಳೇತ್ತರ ಬೆಳೆದು ನಿಂತಿರುವ ಗಿಡಗಂಟಿಯಿಂದ ಮುಚ್ಚಿ ಹೋಗಿವೆ, ಈ ನಾಲೆಗಳ ಪುನಶ್ಚೇತನಕ್ಕೆ ಮುಂದಾಗದ ಜಲಾಶಯದ ಅಧಿಕಾರಿಗಳು ನಾಲೆಗಳ ಈ ದುರಸ್ತಿಯಲ್ಲೇ
ನೀರು ಹರಿಸುತ್ತಿರುವುದರಿಂದ ಬಿಟ್ಟ ನೀರು ನಾಲೆಯಲ್ಲಿ ನೀರು ಸರಾಗವಾಗಿ ಮುಂದೆ ಹರಿಯುತ್ತಿಲ್ಲ, ಇನ್ನೂ ಕೆಲವು ಭಾಗಗಳಲ್ಲಿ
ನಾಲೆಯಲ್ಲಿ ಹೂಳು ತುಂಬಿರುವುದರಿಂದ ನಾಲೆಗೆ ಬಿಟ್ಟ ನೀರು ರಸ್ತೆಗೆ ಹರಿಯುತ್ತಿದೆ.
ದಿನೇ ದಿನೆ ನಾಲೆ ಒತ್ತುವರಿ ತಾರಕ ಅಧಿಕಾರಿಗಳ ಜಾಣಮೌನ: ಎಚ್.ಡಿ.ಕೋಟೆ ಪಟ್ಟಣ ಪ್ರದೇಶದಲ್ಲಿ ಹಾಯ್ದುಹೋಗಿರುವ 23ನೇ ಡಿಸ್ಟಿಬ್ಯೂಟರ್ ನಾಲೆ ದಶಕಗಳಿಂದ ಒತ್ತುವರಿಯಾಗುತ್ತಿದ್ದು ನಾಲೆಯ ಗ್ರಾತ್ರ ದಿನೇ ದಿನೆ ಸೊರಗಿ ಚಿಕ್ಕದಾಗುತ್ತಿದೆ, ಅದರೆ ಕೂಗಳತೆ ದೂರದಲ್ಲೇ ತಾರಕ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಇದ್ದರೂ ಅಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಲೀ, ಕಿರಿಯ ಎಂಜಿನಿಯರ್ ಆಗಲೀ, ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ನಾಲೆಯ ಜಾಗ ಉಳಿಸಲು ಮುಂದಾಗಿ ಒತ್ತುವರಿ ಬಿಡಿಸುವ ಗೋಜಿಗೆ ಜಾಣ ಮೌನ ತಾಳಿರುವುದು
ಹಲವು ಅನುಮಾನ ಹುಟ್ಟುಹಾಕಿದೆ.
ಇನ್ನಾದರೂ ತಾರಕ ಜಲಾಶಯದ ಅಧಿಕಾರಿಗಳು ಎಚ್ಚೆತ್ತು ನಾಲೆಗಳಲ್ಲಿ ಬೆಳೆದಿರುವ ಗಿಡಗಂಟಿ ಮತ್ತು ಹೂಳು ತೆರವುಗೊಳಿಸಿ ನಾಲೆಗೆ ಹರಿಸಿದ ನೀರು ಸರಾಗವಾಗಿ ಹರಿದು ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯವುದರ ಒತ್ತುವರಿ ಯಾಗಿರುವ ಜಾಗವನ್ನು ಒತ್ತುವರಿದಾರರಿಂದ ಬಿಡಿಸುವುದರ ಜೊತೆಗೆ ನಾಲೆ ಹೊಡೆದು ಹಾಕಿ ಆಕ್ರಮವಾಗಿ ತನ್ನ ಖಾಸಗಿ ಲೇಔಟ್‌ಗೆ ನೀರು ಹರಿಸುಕೊಳ್ಳುತ್ತಿರುವ ವ್ಯಕ್ತಿಯ ಮೇಲೆ ಕಠಿಣ ಕ್ರಮಕೈಗೊಂಡು ಒತ್ತು ವರಿದಾರರಿಂದ ಸರ್ಕಾರ ಸ್ವಾಧೀನಪಡಿಸಿ ಕೊಂಡಿರುವ ಜಾಗ ರಕ್ಷಣೆಗೆ ಶ್ರಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನೀರಿಗಾಗಿ ನಾಲೆಯನ್ನೆ ಒಡೆದ ಲೇಔಟ್ ಮಾಲೀಕ!
ಈಗಾಗಲೇ ತಾರಕ ಜಲಾಶಯದ 22ನೇ ಡಿಸ್ಟ್ರೀಬ್ಯೂಟರ್ ನಾಲೆಗೆ ಸರ್ಕಾರ ಸ್ವಾಧೀನ ಪಡಿಸಿಕೊಂಡಿರುವ ಜಾಗವನ್ನು ಸಾಕಷ್ಟು ಕಬಳಿಸಿರುವ ಖಾಸಗಿ ಲೇಔಟ್ ಮಾಲೀಕ, ಈಗ ತಾನು ನಿರ್ಮಾಣ ಮಾಡುತ್ತಿರುವ ಲೇಔಟ್ ನಿರ್ಮಾಣದ ಕಾಮಗಾರಿಯ ನೀರಿಗಾಗಿ ನಾಲೆಯನ್ನೇ ಹೊಡೆದು ಕಾಮಗಾರಿ ನೀರು ಬಳಸಿಕೊಳ್ಳುತ್ತಿದ್ದರೂತಾರಕ ಜಲಾಶಯದ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೊದಲೇ ಮುಂಗಾರು ಹಿಂಗಾರು ಮಳೆ ಇಲ್ಲದೇ ರೈತ ಸಂಕಷ್ಟಕ್ಕೀಡಾಗಿದ್ದೇವೆ. ಆಗಾಗ ಬಿದ್ದ ಮಳೆಗೆ ತಾರಕ ಜಲಾಶಯದಲ್ಲಿ
ಸಂಗ್ರಹವಾಗಿರುವ ನೀರನ್ನು ರೈತ ಕಾಳುಕಟ್ಟಿಯನ್ನಾದರೂ ಬೆಳೆದುಕೊಳ್ಳಲಿ ಎಂದು ಡಿಸ್ಟಿಬ್ಯೂಟರ್ ನಾಲೆಗಳಿಗೆ ನೀರು ಹರಿಸುವ ಅಧಿಕಾರಿಗಳು ನೀರು ಹರಿಸುವ ಮುನ್ನ ನಾಲೆಗಳ ಹೂಳು, ಜಂಗಲ್ ತೆಗೆಯದೇ, ನೀರು ಬಿಡುವ ಮುನ್ನ ಮೂರ್‍ನಾಲ್ಕು ದಿನ ಕೆಲಸ ಆರಂಭಿಸಿ ಅರೆಬರೆ ಕಾಮಗಾರಿ ಮಾಡಿ ಗುತ್ತಿಗೆದಾರನಿಗೆ ಹೊಂದಾಣಿಕೆ ಮಾಡಿಕೊಂಡು ತಾವು ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದು ನಾಲೆಗಳ ಪುನಶ್ಚೇತನಕ್ಕೆ ಶ್ರಮಿಸುತ್ತಿಲ್ಲ, ಖಾಸಗಿ ಲೇಔಟ್ ಮಾಲೀಕ ನಾಲೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೂ ಅವನಿಂದ ಹಣ ಪಡೆದು ಸುಮ್ಮನಿದ್ದಾರೆ.
●ಶ್ರೀನಿವಾಸ್, ಅಚ್ಚುಕಟ್ಟು ಪ್ರದೇಶದ ರೈತ
ಕಳೆದ ಬಾರಿ ನಮ್ಮ ಮೇಲಧಿಕಾರಿಗಳು ವಿಂಡ್ ಕಟ್ಟರ್‌ನಲ್ಲಿ ಜಂಗಲ್ ತೆಗೆಸಿ ಎಂದು ಹೇಳಿದ್ದರೂ, ಈ ಬಾರಿ ಜಂಗಲ್ ತೆರವಿಗೆ ಪ್ರಾವಿಷನ್ ಕೊಟ್ಟಿಲ್ಲ, ಹೂಳು ತೆಗೆಯಲು ಮಾತ್ರ ಪರ್ಮಿಷನ್ ಕೊಟ್ಟಿದ್ದರು, ಆಗಾಗಿ ನಾಲೆಯಲ್ಲಿ ನೀರು ಸರಾಗವಾಗಿ ಹರಿಯದ ಕಡೆ ಜಂಗಲ್ ಜೊತೆಗೆ ಅಲ್ಲಲ್ಲಿ ಸಿಲ್ಟ್ ತೆಗೆಸಿದ್ದೇವೆ. ಮತ್ತೊಮ್ಮೆ ಎಲ್ಲೆಲ್ಲಿ ಜಂಗಲ್, ಸಿಲ್ಟ್ ಪರಿಶೀಲಿಸಿ ತೆರವಿಗೆ ಕ್ರಮವಹಿಸುತ್ತೇನೆ.
●ರಾಮೇಗೌಡ, ಸಹಾಯಕ
ಕಾರ್ಯಪಾಲಕ ಅಭಿಯಂತರ, ಎಚ್.ಡಿ.ಕೋಟೆ
●ಬಿ.ನಿಂಗಣ್ಣಕೋಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.