ನಾಳೆಯಿಂದ ಸಿಎಫ್ ಟಿಆರ್‌ಐನಲ್ಲಿ ಟೆಕ್ ಭಾರತ್
Team Udayavani, May 18, 2022, 2:55 PM IST
ಮೈಸೂರು: ಲಘು ಉದ್ಯೋಗ ಭಾರತ್ ಹಾಗೂ ಸಿಎಫ್ ಟಿಆರ್‌ಐ ವತಿಯಿಂದ ಆಯೋಜಿಸಲಾಗಿರುವ ಟೆಕ್ ಭಾರತ್-2022ರ ಮೂರನೇ ಅವೃತ್ತಿಯು ಮೇ 19ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ಸಿಎಫ್ಟಿಆರ್‌ಐ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಹೇಳಿದರು.
ನಗರದ ಸಿಎಫ್ಟಿಆರ್‌ಐ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮೇ 19ರಂರಿಂದ 21ರವರೆಗೆ ಸಮ್ಮೇಳನವು ಸಿಎಫ್ ಟಿಆರ್‌ಐ ಕೇಂದ್ರದ ಆವರಣದಲ್ಲಿ ನಡೆಯುತ್ತದೆ. ಮೂರು ದಿನಗಳ ಕಾಲ ವಿಚಾರಗೋಷ್ಠಿಗಳು ನಡೆಯಲಿದ್ದು, ನೋಂದಣಿಯಾಗಿರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಹಾಗೆಯೇ ಸಂಸ್ಥೆಯ ಆವರಣದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನಕ್ಕೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ ಎಂದರು.
100ಕ್ಕೂ ಹೆಚ್ಚು ಕಂಪನಿಗಳು ಭಾಗಿ: ಕೃಷಿ ತಂತ್ರಜ್ಞಾನ, ಆಹಾರ ಸಂಸ್ಕರಣೆ, ಆಹಾರ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರದರ್ಶನ ಮಳಿಗೆಗಳನ್ನು 100ಕ್ಕೂ ಹೆಚ್ಚು ಕಂಪನಿಗಳು ತೆರೆಯಲಿವೆ. ಅಲ್ಲದೇ ಡ್ರೋನ್‌ತಂತ್ರಜ್ಞಾನದ ಮೂಲಕ ಬೆಳೆಗಳಿಗೆ ಔಷಧ ಸಿಂಪಡಣೆ ಹಾಗೂ ಬೆಳೆಗಳ ಇನ್ನಿತರ ಅಂಶಗಳನ್ನು ತಿಳಿದುಕೊಳ್ಳುವ ವಿಚಾರವಾಗಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಮೆಜಾನ್, ನೆದರ್‌ಲ್ಯಾಂಡ್ ಮೂಲದ ಉದ್ಯಮಿಗಳು: ಕಾರ್ಯಕ್ರಮದಲ್ಲಿ ರೈತರಿಗೆ ಉಪನ್ಯಾಸಗಳ ಜತೆಗೆ ಯಶಸ್ವಿ ಉದ್ಯಮಿಗಳ ಜತೆ ಸಂವಾದವನ್ನು ಏರ್ಪಡಿಸಲಾಗಿದೆ. ಆಹಾರ ಉದ್ಯಮದಲ್ಲಿ ಯಶಸ್ಸು ಪಡೆದವರು ಭಾಗವಹಿಸಿ ತಾವು ಎಂಥಪದಾರ್ಥವನ್ನು ನಿರೀಕ್ಷೆ ಮಾಡುತ್ತವೆ ಎನ್ನುವುದರ ಬಗ್ಗೆಮಾಹಿತಿ ನೀಡುತ್ತಾರೆ. ಆದೇ ರೀತಿ ಅಂತಾರಾಷ್ಟ್ರೀಯಮಟ್ಟದ ಅಮೆಜಾನ್, ನೆದರ್‌ಲ್ಯಾಂಡ್ ಮೂಲದ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ತಂತ್ರಜ್ಞಾನಗಳು ಸಾರ್ವಜನಿಕರಿಗೆ ಮುಕ್ತ: ಸಿಎಫ್ ಟಿಆರ್‌ಐನ ತಂತ್ರಜ್ಞಾನ ವರ್ಗಾವಣೆ ಮತ್ತು ಮಾರಾಟ ವಿಭಾಗದ ಡಾ.ವಿ.ಬಿ.ಸತ್ಯೇಂದ್ರರಾವ್ ಮಾತನಾಡಿ,ಸಮ್ಮೇಳನದ ಅಂಗವಾಗಿ ಸಿಎಫ್ಟಿಆರ್‌ಐನ 22 ತಂತ್ರ ಜ್ಞಾನಗಳ ಮಾಹಿತಿಯನ್ನು ಅಂತ ರ್ಜಾಲಕ್ಕೆ ಉಚಿತವಾಗಿ ಸೇರ್ಪಡೆ ಮಾಡಲಾಗುತ್ತದೆ. ರಾಗಿ ಆಧಾರಿತ ಬ್ರೆಡ್ ತಯಾರಿಕೆ, ಕುಸುಬಲಕ್ಕಿ ತಂತ್ರ ಜ್ಞಾನ ಸೇರಿದಂತೆ ಇತರೆ ತಂತ್ರಜ್ಞಾನಗಳು ಸಾರ್ವಜನಿಕರಿಗೆ ಮುಕ್ತವಾಗಿ ದೊರೆಯಲಿವೆ. ಅಲ್ಲದೇ ಈ ತಂತ್ರ ಜ್ಞಾನಗಳ ಬಗ್ಗೆ ಇನ್ನೂ ಹೆಚ್ಚಿನ ವಿವರಣೆಗಳನ್ನು ಬಯಸಿದರೇ ಅಂತಹವರಿಗೆ ನಮ್ಮ ಕೇಂದ್ರದ ಮೂಲಕ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸುಮಾರು 300 ಕೋಟಿ ರೂ. ವಹಿವಾಟು: ಸಿ ಎಫ್ಟಿಆರ್‌ಐನ ದೋಸೆ- ಇಡ್ಲಿ ತಯಾರಿಕಾ ತಂತ್ರ ಜ್ಞಾನವು ಸುಮಾರು 300 ಕೋಟಿ ರೂ. ವಹಿವಾಟು ನಡೆಸಿದೆ. 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳು ಈ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಉದ್ಯಮ ಸ್ಥಾಪನೆ ಮಾಡಿ ಯಶ್ವಸಿಯಾಗಿವೆ ಎಂದು ತಿಳಿಸಿದರು.
ಲಘು ಉದ್ಯೋಗ ಭಾರತಿ ಸಂಸ್ಥೆಯ ಛಾಯಾ ನಂಜಪ್ಪ, ಸಿ.ಎನ್. ಭೋಜರಾಜ್ ಇದ್ದರು.
ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ : ಟೆಕ್ ಭಾರತ್-2022 ಸಮ್ಮೇಳನವನ್ನು ಮೇ 19ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರದ ಆಹಾರ ಸಂಸ್ಕರಣ ಉದ್ಯಮ ಖಾತೆ ಸಚಿವ ಪಶುಪತಿ ಕುಮಾರ್ ಪರಾಸ್, ಕೇಂದ್ರದ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೈಲಾಸ್ ಚೌಧರಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.