ವಿಶೇಷ ಚೇತನರಿಗೆ ತಾಂತ್ರಿಕ ಶಿಕ್ಷಣ ನೀಡಲಿ
Team Udayavani, Nov 14, 2022, 3:16 PM IST
ಮೈಸೂರು: ವಿಶೇಷಚೇತನ ಮಕ್ಕಳು ಸ್ವಂತ ಬದುಕು ಕಟ್ಟಿಕೊಳ್ಳಲು ತಾಂತ್ರಿಕ ಶಿಕ್ಷಣ ನೀಡುವಂತೆ ಕೆಲವು ಸಂಘ ಸಂಸ್ಥೆ ಗಳೊಂದಿಗೆ ಸರ್ಕಾರಕ್ಕೆ ಮನವಿ ಮಾಡುವು ದಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ನಗರದ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆ ಆವರಣದಲ್ಲಿ ಇನ್ನರ್‌ವ್ಹೀಲ್ ಆಫ್ ಮೈಸೂರು ಸಂಸ್ಥೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪೂರ್ಣ ಗೊಳಿಸಿದ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ದೊರೆತರೆ ಉದ್ಯೋಗ ಪಡೆದು ಜೀವನ ನಿರ್ಮಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ನುಡಿದರು. ವಿಶೇಷ ಚೇತನ ಮಕ್ಕಳಲ್ಲಿ ಇತರರಿಗಿಂತಲೂ ವಿಶಿಷ್ಟವಾದ ಗ್ರಹಿಕಾ ಶಕ್ತಿ ಹೆಚ್ಚಿದೆ. ವಿಶೇಷ ಚೇತನ ಮಕ್ಕಳು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದನ್ನು ನೋಡಿದಾಗ ನನಗೆ ಬಹಳ ಸಂತೋಷ ವಾಗುತ್ತದೆ.ಈ ಮಕ್ಕಳು ಹೆಚ್ಚಿನ ಪ್ರಮಾಣ ದಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಆ ನಿಟ್ಟಿನಲ್ಲಿ ನಾನು ಶಕ್ತಿ ಮೀರಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹಿರಿಯ ರಂಗ ಕರ್ಮಿ ಬಿ.ಎಂ.ರಾಮ ಚಂದ್ರ ಮಾತನಾಡಿ, 26 ವರ್ಷದಿಂದಲೂ ನನಗೆ ಮತ್ತು ಈ ಶಾಲೆಗೆ ಉತ್ತಮ ಸಂಬಂಧವಿದೆ. ಶಾಲೆ ಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವ ಮಕ್ಕಳಿಗೆ ವಸ್ತ್ರಾಲಂಕಾರ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.
1901ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು 9 ಎಕರೆ ಭೂಮಿಯನ್ನು ಅಂಧ ಮಕ್ಕಳ ವಿದ್ಯಾಭ್ಯಾಸಕ್ಕೆಂದು ನೀಡಿ ದ್ದಾರೆ. ಆದರೆ, ಇಂದು ನಗರ ಪಾಲಿಕೆ ಯರು ಈ ಶಾಲೆ ಆವರಣದಲ್ಲಿ ವಾಟರ್ ಟ್ಯಾಂಕ್ ನಿರ್ಮಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ನಗರ ಪಾಲಿ ಕೆ ಯಿಂದ ಶಾಲೆಯ ಆವರಣದಲ್ಲಿ ಟ್ಯಾಂಕ್ ನಿರ್ಮಿಸಲು ಮುಂದಾಗಿರುವುದನ್ನು ತಡೆಯಬೇಕು ಎಂದು ಶಾಲೆಯ ಹಿರಿಯ ವಿದ್ಯಾರ್ಥಿಗಳ ತಂಡ ತಮ್ಮ ಸಹಿ ಸಂಗ್ರಹದ ಮೂಲಕ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಗೆ ಮನವಿ ಸಲ್ಲಿಸಿತು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಮಾಲಿನಿ, ಇನ್ನರ್‌ವೀಲ್ ಆಫ್ ಮೈಸೂರು ಸಂಸ್ಥೆಯ ಗೌರಿ ಗೋಕುಲ್, ಕಾರ್ಯದರ್ಶಿ ಪಲ್ಲವಿ ಅರುಣ್, ಡಾ.ಗೋವ ರ್ಧನ್, ಬಸವರಾಜು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.