ಪಿಡಿಒಗಳಿಗೆ ತಾಪಂ ಇಒ ಶೌಚಾಲಯ ಪಾಠ!
Team Udayavani, Sep 8, 2017, 11:24 AM IST
ಭೇರ್ಯ: ಹೊಸಅಗ್ರಹಾರ ಹೋಬಳಿಯ 6 ಗ್ರಾಪಂಗಳಲ್ಲಿನ ಶೌಚಾಲಯದ ಪ್ರಗತಿಯ ವರದಿ ನೋಡಿದ ತಾಪಂ ಇಒ ಸಂಬಂಧಪಟ್ಟ ಪಿಡಿಒಗಳನ್ನು ತೀವ್ರ ತರಾಟೆ ತೆಗೆದುಕೊಂಡ ಘಟನೆ ನಡೆಯಿತು. ಸಮೀಪದ ಹೊಸಅಗ್ರಹಾರ ಗ್ರಾಪಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಸ್ವತ್ಛ ಭಾರತ್ ಮಿಷನ್ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲೆಲ್ಲಿ ಎಷ್ಟೆಷ್ಟು ಶೌಚಾಲಯ: ಹೊಸಅಗ್ರಹಾರ ಹೋಬಳಿಯ 6 ಗ್ರಾಪಂಗಳ ಪೈಕಿ ಒಟ್ಟು 1933 ಶೌಚಾಲಯ ನಿರ್ಮಿಸಬೇಕಿದೆ. ಅದರಲ್ಲಿ ಭೇರ್ಯ ಗ್ರಾಪಂ 109ಕ್ಕೆ-33, ಹೊಸ ಅಗ್ರಹಾರ ಗ್ರಾಪಂ 317ಕ್ಕೆ 44, ಗಂಧನಹಳ್ಳಿ ಗ್ರಾಪಂ 254ಕ್ಕೆ 48 ಮುಂಜನಹಳ್ಳಿ ಗ್ರಾಪಂ 203ಕ್ಕೆ 141, ಅಡುಗೂರು ಗ್ರಾಪಂ 464ಕ್ಕೆ 111 ಹಾಗೂ ಅರ್ಜುನಹಳ್ಳಿ ಗ್ರಾಪಂ 234ಕ್ಕೆ 24 ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಈ ವೇಳೆ ಪ್ರಗತಿಯಲ್ಲಿದ್ದ ವರದಿ ಬಗ್ಗೆ ಮಾಹಿತಿ ಪಡೆದು ಕೊಂಡ ತಾಪಂ ಇಒ ಚಂದ್ರು, ಪಿಡಿಒಗಳಿಗೆ ತರಾಟೆ ತೆಗೆದುಕೊಂಡು, ಅ.2 ರೊಳಗೆ ಸಂಪೂರ್ಣವಾಗಿ ಶೌಚಾಲಯ ಮುಕ್ತವನ್ನಾಗಿ ಮಾಡಿ ಎಂದು ಎಚ್ಚರಿಸಿದರು.
ಶೌಚಾಲಯ ಕಟ್ಟಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಅದರಲ್ಲಿಯೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಬಹಳಷ್ಟು ಶ್ರಮಿಸಿದರೇ ತಾಲೂಕಿನ್ನು ಬಯಲು ಶೌಚಾಲಯ ಮುಕ್ತವನ್ನಾಗಿ ಮಾಡಬಹುದು ಎಂದು ಹೇಳಿದರು. ಶೌಚಾಲಯ ನಿರ್ಮಾಣ ಮಾಡಲು ಫಲಾನುಭವಿ ಒಂದು ಪಂಚಾಯ್ತಿಗೆ ಬರಲು ಸಾಧ್ಯವಾಗದಿದ್ದರೇ ನೀವೇ ಮನೆಮನೆಗೆ ತೆರಳಿ ಶೌಚಾಲಯಕ್ಕೆ ಸಂಬಂಧಿಸಿದ ದಾಖಾಲೆಗಳನ್ನು ಪಿಡಿಒ ಅವರಿಗೆ ತಲುಪಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಶಾಲೆಯಲ್ಲಿ ಮಕ್ಕಳಿಗೆ ಅರಿವು: ಇದಕ್ಕೆ ಪ್ರತಿಕ್ರಿಯಿಸಿದ ಹರಂಬಳ್ಳಿ ಶಾಲೆ ಮುಖ್ಯ ಶಿಕ್ಷಕ ಸ್ವಾಮಿ, ನಾವು ನಮ್ಮ ಶಾಲೆಯಲ್ಲಿ ಪ್ರತಿಯೊಬ್ಬ ತರಗತಿ ಶಿಕ್ಷಕರು ಶಾಲೆಯ ಪ್ರಾರ್ಥನೆ ಮಾಡುವ ವೇಳೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಮನವರಿಕೆ ಜತೆಗೆ ಅರಿವು ಮೂಡಿಸುತ್ತಿದ್ದೇವೆ. ಶೌಚಾಲಯ ನಿರ್ಮಿಸಿಕೊಳ್ಳಲು ಮೊದಲ ಆದ್ಯತೆ ನೀಡಿ ಎಂದು ಪೋಷಕರಿಗೆ ವಿದ್ಯಾರ್ಥಿಗಳ ಮೂಲಕ ಹೇಳಿಸಲಾಗುತ್ತಿದೆ ಎಂದು ತಿಳಿಸಿದರು.
ನಾವು ನಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡರೆ ಸಾಲದು. ಅಕ್ಕಪಕ್ಕದವರ ಮನೆಯವರೂ ಶೌಚಾಲಯ ನಿರ್ಮಿಸಿಕೊಳ್ಳಿ ಎಂದು ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ. ಶೌಚಾಲಯ ನಿರ್ಮಿಸಿ ಕೊಳ್ಳದಿದ್ದರೇ ದೈಹಿಕ, ಮಾನಸಿಕವಾಗಿ ಆರೋಗ್ಯ ಹಾಳಾಗುತ್ತದೆ. ಜತೆಗೆ ಮನೆಯಲ್ಲಿ ನೆಮ್ಮದಿ, ಸಂತೋಷವಿಲ್ಲದೆ ಕುಟುಂಬದಲ್ಲಿ ಆರೋಗ್ಯವಂತರೇ ಇಲ್ಲದಂತಾಗುತ್ತದೆ ಕಿವಿಮಾತು ಹೇಳಿದರು.
ಗ್ರಾಪಂ ಅಧ್ಯಕ್ಷ ಡಿ.ವಿ.ಗುಡಿ ಯೋಗೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಾಗಮ್ಮ, ಸದಸ್ಯರಾದ ಪ್ರಸನ್ನ, ಶಂಕರೇಗೌಡ, ಮೋಹನ, ಪಿಡಿಒಗಳಾದ ದಿವ್ಯಾ, ರಾಜಕುಮಾರ್, ಯೋಗೇಶ್, ಚಂದ್ರಶೇಖರ್, ಸರಳ, ತಾಪಂ ನೋಡಲ್ ಅಧಿಕಾರಿ ನಿರಂಜನ್‌ಮೂರ್ತಿ, ಸ್ವತ್ಛಭಾರತ್ ಮಿಷನ್ ಮೇಲ್ವಿಚಾರಕರಾದ ಅಂಕನಹಳ್ಳಿ ಮಂಜುನಾಥ್, ಅನಿತಾ, ನೇತ್ರಾವತಿ, ಮುಖಂಡರಾದ ದೊಡ್ಡಕೊಪ್ಪಲು ಮಹದೇವ್, ಹರಂಬಳ್ಳಿ ಚಂದ್ರೇಗೌಡ, ಆರೋಗ್ಯ ಸಹಾಯಕಿ ಹೇಮಲತಾ ಮತ್ತಿತರರಿದ್ದರು.
ಕಾರ್ಯನಿರ್ವಹಿಸದಿದ್ದರೆ ವೇತನಕ್ಕೆ ತಡೆ: ಅ.2ರ ಗಾಂಧಿ ಜಯಂತಿಯಂದು ತಾಲೂಕನ್ನು ಬಯಲು ಶೌಚಾಲಯ ಮುಕ್ತವನ್ನಾಗಿ ಘೋಷಣೆ ಮಾಡೋಣ. ಈ ಕುರಿತು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಸೇರಿದಂತೆ ಎಲ್ಲರಿಗೂ ಒಂದೊಂದು ತಿಂಗಳು ವೇತನವನ್ನು ತಡೆ ಹಿಡಿಯಲಾಗುವುದು ಎಂದು ತಾಪಂ ಇಒ ಚಂದ್ರು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.