ಜಂಬೂಸವಾರಿ ಮೆರವಣಿಗೆಯಲ್ಲಿ 42 ಸ್ತಬ್ಧಚಿತ್ರಗಳು ಭಾಗಿ
Team Udayavani, Oct 17, 2018, 11:29 AM IST
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 42 ಸ್ತಬ್ದಚಿತ್ರಗಳು ಭಾಗವಹಿಸಲಿವೆ ಎಂದು ಸ್ತಬ್ಧಚಿತ್ರ ಉಪ ಸಮಿತಿ ಉಪ ವಿಶೇಷಾಧಿಕಾರಿ ಪ್ರಭುಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಪ್ರವಾಸೋದ್ಯಮ, ಹಬ್ಬಗಳು, ಅಂತರ್ಜಲ, ಜಿಲ್ಲೆಗಳ ಯಶೋಗಾಥೆಗಳನ್ನು ಬಿಂಬಿಸುವ ರಾಜ್ಯದ 30 ಜಿಲ್ಲಾ ಪಂಚಾಯ್ತಿಗಳು, ವಿವಿಧ ಇಲಾಖೆಗಳ 42 ಸ್ತಬ್ಧಚಿತ್ರಗಳ ಪೈಕಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾನೂನು ಸೇವೆಗಳು, ಜಿಲ್ಲಾ ಸ್ವೀಪ್ ಸಮಿತಿಯ ನಮ್ಮ ಮತ-ನಮ್ಮ ಹಕ್ಕು,
ಎನ್‌ಸಿಸಿಯ ಕಾರ್ಯ ಚಟುವಟಿಕೆ-ಪ್ರವಾಹ ಸಂತ್ರಸ್ತರಿಗೆ ನೆರವು ಮತ್ತು ಕ್ರೀಡೆಗಳು, ಉನ್ನತ ಶಿಕ್ಷಣ ಇಲಾಖೆಯಿಂದ ರಾಜ್ಯದ ವಿಶ್ವವಿದ್ಯಾನಿಲಯಗಳು ನಡೆದುಬಂದ ಹಾದಿ ಬಿಂಬಿಸುವ ಸ್ತಬ್ಧಚಿತ್ರಗಳು ಇದೇ ಪ್ರಥಮ ಬಾರಿಗೆ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ. ಇದರಲ್ಲಿ ಉನ್ನತ ಶಿಕ್ಷಣ ಇಲಾಖೆಯ ಸ್ತಬ್ಧಚಿತ್ರದಲ್ಲಿ ಎಲ್‌ಇಡಿ ಸ್ಕ್ರೀನ್‌ನಲ್ಲಿ ವಿಶ್ವವಿದ್ಯಾನಿಲಯಗಳು ನಡೆದು ಬಂದ ಹಾದಿ ಬಿಂಬಿಸಲು ಡಿಜಿಟಲ್ ತಂತ್ರಜ್ಞಾನ ಬಳಸಲಾಗುತ್ತಿದೆ.
ಯಾವ್ಯಾವ ಸ್ತಬ್ಧಚಿತ್ರ: ಬಾಗಲಕೋಟೆ ಜಿಪಂ; ಪಟ್ಟದಕಲ್ಲು-ಕಾಯಕವೇ ಕೈಲಾಸ-ಕೂಡಲ ಸಂಗಮ, ಬೆಂಗಳೂರು ಗ್ರಾಮಾಂತರ ಜಿಪಂ;ಜಿಲ್ಲೆಯ ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ದೇವಾಲಯ ಮತ್ತು ದೇವನಹಳ್ಳಿ ಕೋಟೆ, ಬೆಂಗಳೂರು ನಗರ ಜಿಪಂ; ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿಟಕ, ಎನ್‌ಸಿಸಿ; ಪ್ರವಾಹ ಸಂತ್ರಸ್ತರಿಗೆ ನೆರವು ಮತ್ತು ಕ್ರೀಡೆಗಳು, ಉನ್ನತ ಶಿಕ್ಷಣ ಇಲಾಖೆ; ವಿಶ್ವವಿದ್ಯಾನಿಲಯಗಳು ನಡೆದು ಬಂದ ದಾರಿ, ಬೆಳಗಾವಿ ಜಿಪಂ; ಕಿತ್ತೂರಿನ ವೈಭವ, ಬಳ್ಳಾರಿ; ತುಂಗಭದ್ರಾ ಜಲಾಶಯ.
ಪ್ರವಾಸೋದ್ಯಮ ಇಲಾಖೆ: ಒಂದು ರಾಜ್ಯ ಹಲವು ಜಗತ್ತುಗಳು, ವಿಜಯಪುರ ಜಿಪಂ; ಗೋಲ್ ಗುಂಬಜ್, ಚಾಮರಾಜ ನಗರ ಜಿಪಂ; ಅರಣ್ಯ ಸಂಪತ್ತಿನೊಳಗಿನ ಆಧ್ಯಾತ್ಮಿಕ ಕ್ಷೇತ್ರಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ; ಕರ್ನಾಟಕದ ನವರತ್ನಗಳು, ಚಿತ್ರದುರ್ಗ; ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ, ನಾಯಕನಹಟ್ಟಿ ಪುಣ್ಯಕ್ಷೇತ್ರ, ಚಿಕ್ಕಮಗಳೂರು; ಭೂತಾಯಿ ಕಾಫಿ ಕನ್ಯೆ, ಚಿಕ್ಕಬಳ್ಳಾಪುರ; ವಿಧುರಾಶ್ವಥ ಪುಣ್ಯಕ್ಷೇತ್ರ,
ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ; ಕಾನೂನು ಸೇವೆಗಳು, ದಾವಣಗೆರೆ ಜಿಪಂ; ಸ್ಮಾರ್ಟ್‌ಸಿಟಿಯತ್ತ ದಾವಣಗೆರೆ, ದಕ್ಷಿಣ ಕನ್ನಡ ಜಿಪಂ; ಕೋಟಿ ಚೆನ್ನಯ ತುಳುನಾಡ ವೀರರು, ಧಾರವಾಡ; ದ.ರಾ.ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ-ಧಾರವಾಡ, ವಾರ್ತಾ ಇಲಾಖೆ; ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ಗದಗ; ಮರಗಳ ಮರು ನೆಡುವಿಕೆ, ಕಲುºರ್ಗಿ; ಕಲುºರ್ಗಿ ವಿಮಾನ ನಿಲ್ದಾಣ,
ಹಾಸನ; ಹೊಯ್ಸಳ ನಾಡಿನ ಬೇಲೂರು ಶಿಲ್ಪಗಳ 900ರ ಸಂಭ್ರಮ, ಕಾವೇರಿ ನೀರಾವರಿ ನಿಗಮ; ನಾವು ಜಲವನ್ನು ಉಳಿಸಿದರೆ ಜಲವು ನಮ್ಮನ್ನು ಉಳಿಸುವುದು, ಹಾವೇರಿ; ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ-ಬಂಕಾಪುರ ನವಿಲುಧಾಮ, ಕೋಲಾರ; ಜಿಪಂ ನಡೆ ಗ್ರಾಮದ ಅಭಿವೃದ್ಧಿಯ ಕಡೆ, ಕೊಪ್ಪಳ; ಶ್ರೀಕನಕಾಚಲ ದೇವಸ್ಥಾನ ಮತ್ತು ಐತಿಹಾಸಿಕ ಬಾವಿ ಕನಕಗಿರಿ.
ಶಿವಮೊಗ್ಗ; ಬಿದನೂರು ಶಿವಪ್ಪನಾಯಕನ ಸಾಧನೆ, ತುಮಕೂರು; ಶತಮಾನಕಂಡ ಮಹಾ ಸಂತ ಡಾ.ಶಿವಕುಮಾರಸ್ವಾಮಿಗಳು, ಸ್ತಬ್ದಚಿತ್ರ ಉಪಸಮಿತಿ; ಭಾರತದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಆಡಳಿತ ವಿಕೇಂದ್ರೀಕರಣ,ಉಡುಪಿ; ಪರಶುರಾಮ ಸೃಷ್ಟಿಯ ತುಳುನಾಡು, ಉತ್ತರ ಕನ್ನಡ; ಸಿದ್ದಿ ಜನಾಂಗ ಹಾಗೂ ಪ್ರವಾಸಿ ತಾಣ ಯಾಣ,
ಯಾದಗಿರಿ; ಬಂಜಾರ ಸಂಸ್ಕೃತಿ, ಆರೋಗ್ಯ; ಆರೋಗ್ಯ ಇಲಾಖೆಯ ಸೇವೆಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: ಇಲಾಖಾ ಕಾರ್ಯಕ್ರಮಗಳು, ಶಿಕ್ಷಣ ಇಲಾಖೆ: ಇಲಾಖಾ ಕಾರ್ಯಕ್ರಮಗಳು, ಕೊಡಗು ಜಿಪಂ; ಪ್ರವಾಸೋದ್ಯಮ. ಸುದ್ದಿಗೋಷ್ಠಿಯಲ್ಲಿ ಉಪ ಸಮಿತಿ ಕಾರ್ಯಾಧ್ಯಕ್ಷ ಲಿಂಗರಾಜು, ಕಾರ್ಯದರ್ಶಿ ರಮೇಶ್ ಮೂರ್ತಿ ಹಾಜರಿದ್ದರು.
ಮೈಸೂರು ಜಿಲ್ಲಾ ಸ್ವೀಪ್ ಸಮಿತಿ: ನಮ್ಮ ಮತ-ನಮ್ಮಹಕ್ಕು, ಮಂಡ್ಯ; ಮಂಡ್ಯ ಜಿಲ್ಲೆಗೆ ನಾಲ್ವಡಿಯವರ ಪ್ರಮುಖ ಕೊಡುಗೆ (ಕೆಆರ್‌ಎಸ್ ಅಣೆಕಟ್ಟೆ), ಮೈಸೂರು; ಸ್ವರ್ಣದೇಗುಲ(ಗೋಲ್ಡನ್ ಟೆಂಪಲ್-ಬೈಲುಕುಪ್ಪೆ), ರಾಯಚೂರು; ಯರಮರಸ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರ, ರಾಮನಗರ; ಭಕ್ತಿ-ನಂಬಿಕೆ ಕರಕುಶಲ ಇತಿಹಾಸಗಳ ಸಂಗಮ.
ಬಹುಮಾನ: ಅತ್ಯುತ್ತಮ ಸ್ತಬ್ಧಚಿತ್ರಗಳಿಗೆ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 30 ಸಾವಿರ, ದ್ವಿತೀಯ 20 ಸಾವಿರ, ತೃತೀಯ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಅಲ್ಲದೇ ಮೆರವಣಿಗೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಸ್ತಬ್ದಚಿತ್ರಗಳಿಗೂ ಪ್ರಶಸ್ತಿ ಪತ್ರ ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.