ಆರೋಪಿಸುವವರಿಗೆ ಅಭಿವೃದ್ಧಿಯಿಂದಲೆ ಉತ್ತರಿಸುವೆ


Team Udayavani, Aug 5, 2017, 12:33 PM IST

mys3.jpg

ಹುಣಸೂರು: ಯೋಜನೆಯಲ್ಲಿ ಸಣ್ಣಪುಟ್ಟ ಲೋಪಗಳು ಸಹಜ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿ ಜನರಿಗೆ ನೆರವಾಗಬೇಕೆ ಹೊರತು ನಿತ್ಯ ಟೀಕೆ, ಆರೋಪ ಮಾಡುವವರಿಗೆ ಜೀನಹಳ್ಳಿ ಕೆರೆಗೆ ನೀರು ತುಂಬಿಸಿರುವುದೇ ಸಾಕ್ಷಿಯಾಗಿದೆ ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಹೇಳಿದರು. ತುಂತುರು ಮಳೆಯ ನಡುವೆಯೇ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿರುವ ಹುಣಸೂರು ತಾಲೂಕಿನ ಜೀನಹಳ್ಳಿ ಕೆರೆಗೆ ವರ ಮಹಾ ಲಕ್ಷ್ಮೀ ಹಬ್ಬದಂದು ಬಾಗಿನ ಅರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ 22 ವರ್ಷಗಳಿಂದ ಬತ್ತಿಹೋಗಿದ್ದ 49.5 ಎಕರೆ ವಿಸ್ತೀರ್ಣದ ಜೀನಹಳ್ಳಿ ಕೆರೆಗೆ 340 ಗಂಟೆ ನೀರು ಹರಿಸಿ ತುಂಬಿಸಲಾಗಿದೆ. ಅಲ್ಲದೆ ಮೂಕನಹಳ್ಳಿ ಯೋಜನೆಯಡಿ ಬೀಜಗನಹಳ್ಳಿ ದೊಡ್ಡಕೆರೆ, ಮೂಕನಹಳ್ಳಿ ಪುಟ್ಟನಕಟ್ಟೆ ತುಂಬಿ ಕೋಡಿ ಬಿದ್ದು ಬಳ್ಳೆಕಟ್ಟೆಗೆ ಹರಿಯುತ್ತಿದೆ. ಜೀನಹಳ್ಳಿ ಕೆರೆಯಿಂದ ಬಿಳಿಕೆರೆ- ಹಳೇಬೀಡು ಕೆರೆಗೆ ನೀರು ಹರಿಸುವುದು ದೂರವಾಗುವುದರಿಂದಾಗಿ ಹತ್ತಿರದ ಮಾರ್ಗದ ಮೂಲಕ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಟೀಕಾಕಾರರಿಗೆ ಅಭಿವೃದ್ಧಿಯೇ ಉತ್ತರ: ತಾಲೂಕಿನ ಮೂರು ಕಡೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆ ಬಗ್ಗೆ ಕೆಲವರು ಸಣ್ಣಪುಟ್ಟ ತಾಂತ್ರಿಕ ತೊಂದರೆಯನ್ನೇ ಮುಂದಿಟ್ಟುಕೊಂಡು ನೀರು ತುಂಬಿಸಲಾಗಲ್ಲ, ಈ ಯೋಜನೆ ಫೇಲ್‌ ಎಂದು ಬೊಬ್ಬೆ ಹೊಡೆಯುತ್ತಿದ್ದವರಿಗೆ ಈ ಕೆರೆಗಳಿಗೆ ನೀರು ತುಂಬಿರುವುದೇ ತಕ್ಕ ಉತ್ತರ ಎಂದು ಹೇಳಿ, ಈ ಭಾಗದ ಜನರು ಸಂತೃಪ್ತರಾದರಷ್ಟೇ ನಮಗೆ ಸಮಾಧಾನ, ಇದು ಮಾನವ ನಿರ್ಮಿತವಾದ ಯೋಜನೆಯಾಗಿದ್ದು, ಸಣ್ಣಪುಟ್ಟ ದೋಷಗಳು ಸಹಜ, ಈ ಬಗ್ಗೆ ಜನ ಮೆಚ್ಚಿದರೆ ಸಾಕು, ಟೀಕಾಕಾರರಿಗೆ ತಮ್ಮದೇನಿದ್ದರೂ ಅಭಿವೃದ್ಧಿ ಮೂಲಕವೇ ಉತ್ತರ ನೀಡುವುದಾಗಿ ತಿಳಿಸಿದರು.

ಮತ್ತಷ್ಟು ಯೋಜನೆ ಅನುಷ್ಠವಾಗಲಿದೆ: ಲಕ್ಷಣತೀರ್ಥ ನದಿಯಿಂದ ಕೊಳಗಟ್ಟ, ಬೋಳನಹಳ್ಳಿ, ಮೈದನಹಳ್ಳಿ ಹಾಗೂ ಹನಗೋಡು ಭಾಗದ ದೊಡ್ಡಹೆಜೂjರು, ನಾಗಾಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಂದಿದ್ದರೆ, ತಾವು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಒತ್ತಾಯದ ಮೇರೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಆರ್‌ಎಸ್‌ ಹಿನ್ನೀರಿನ ಆನಂದೂರು ಕೊಪ್ಪಲು ಬಳಿ 19 ಕೋಟಿ ರೂ ವೆಚ್ಚದಡಿ ಮೈಸೂರು ತಾಲೂಕಿನ 16 ಕೆರೆ ಸೇರಿದಂತೆ  ತಾಲೂಕಿನ ಚನ್ನಿಕೆರೆ, ದಬ್ಬನಕಟ್ಟೆ, ಶೆಟ್ಟರಕಟ್ಟೆ, ಹೊಸಹಾರೋಹಳ್ಳಿಕೆರೆ, ಹುಚ್ಚಪ್ಪನಕಟ್ಟೆ, ಸಾಬರಕಟ್ಟೆ, ಹಳ್ಳದಕಲ್ಲಹಳ್ಳಿಕಟ್ಟೆ, ಗೌರಿಕೆರೆ, ಗೆರಸನಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ. ಈಗಾಗಲೆ ಹಾರಂಗಿ ಯೋಜನೆಯ ನಾಲೆಗಳ ಆಧುನೀಕರಣ ಕಾಮಗಾರಿ ನಡೆಯುತ್ತಿದೆ ಎಂದರು.

ಜನ ಮೆಚ್ಚುವ ಕೆಲಸಕ್ಕೆ ಸಹಕಾರ: ಬಿಳಿಕೆರೆ ತಾಪಂ ಸದಸ್ಯ ರಾಜೇಶ್‌ ಮಾತನಾಡಿ, ಈ ಭಾಗದ ಕೆರೆಗಳು ತುಂಬಿ ಅನೇಕ ವರ್ಷಗಳೇ ಆಗಿತ್ತು. ಇದೀಗ ಶಾಸಕರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದು ಜನ ಮೆಚ್ಚುವ ಕೆಲಸ ಮಾಡಿದ್ದಾರೆಂದು ಶ್ಲಾ ಸಿದರು. ತಾಪಂ ಮಾಜಿ ಸದಸ್ಯ ಸೋಮಶೇಖರ್‌  ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಹಿಡಿದು ಬಿಳಿಕೆರೆ, ಕಟ್ಟೆಮಳಲವಾಡಿ, ಗಾವಡಗೆರೆ, ಹನಗೋಡು ನಂತಹ ಪ್ರಮುಖ ಗ್ರಾಮಗಳ ಅಭಿವೃದ್ಧಿ ಮಾಡಿಸಿದ್ದಾರಲ್ಲದೆ ನಗರದಲ್ಲಿ ತೂಗು ಸೇತುವೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಸಿರುವ ಶಾಸಕರು ಅಭಿವೃದ್ಧಿಯ ಹರಿಕಾರ ಎಂದರು.

ಬಾಗಿನಸಮರ್ಪಣೆ: ಉಕ್ಕಿನಕಂತೆ ಮಾದಹಳ್ಳಿಮಠದ ಸಾಂಬಸದಾಶಿವಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶಾಸಕರೊಂದಿಗೆ ಜಿಪಂ ಸದಸ್ಯರಾದ ಗೌರಮ್ಮ, ಡಾ.ಪುಷ್ಪ, ತಾಪಂ ಸದಸ್ಯ ರಾಜೇಶ್‌, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹಾಗೂ ಗ್ರಾಮದ ಮಹಿಳೆಯರೊಡಗೂಡಿ ತುಂಬಿದ ಕೆರೆಗೆ ಬಾಗಿನ ಅರ್ಪಿಸಿದರು.

ತಾಪಂ ಇಒ ಕೃಷ್ಣಕುಮಾರ್‌, ಸಣ್ಣನೀರಾವರಿ ಇಲಾಖೆಯ ಸೂಪರಿಂಡೆಂಟ್‌ ಎಂಜಿನಿಯರ್‌ ಕೃಷ್ಣ, ಇಇ ಚನ್ನಕೇಶವ, ಎಇಇ ಶ್ರೀನಿವಾಸಲು, ಎಇಇ ಕೃಷ್ಣಮೂರ್ತಿ, ಪಿಡಿಒ ಶ್ರೀನಿವಾಸ್‌, ಗ್ರಾಮದ ಯಜಮಾನರಾದ ಮಾದೇಗೌಡ, ರಾಮಕೃಷ್ಣ, ಬಿಳಿಕೆರೆ ಕಾಂಗ್ರೆಸ್‌ ಅಧ್ಯಕ್ಷ ನಾರಾಯಣ್‌, ಮುಖಂಡರಾದ ತಿಮ್ಮನಾಯ್ಕ, ಸಿದ್ದನಾಯ್ಕ, ಕುಮಾರ್‌, ಸ್ವಾಮಿ, ರಾಘು, ಬಸವರಾಜು, ಪ್ರಸನ್ನ, ಕಾರ್ಗಳ್ಳಿಗೌಡ ಸೇರಿದಂತೆ  ಸುತ್ತ ಮುತ್ತಲ ಗ್ರಾಮಸ್ಥರು ಇದ್ದರು.

ಟಾಪ್ ನ್ಯೂಸ್

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.