ಕುಮಾರಸ್ವಾಮಿ ಶ್ರೀಗಳ ಸಾಧನೆ ಮಹತ್ತರ
Team Udayavani, Jun 12, 2017, 1:22 PM IST
ಪಿರಿಯಾಪಟ್ಟಣ: ಮಾನವೀಯತೆಯ ಮುಖಾಂತರ ಜಾತಿ, ಧರ್ಮ ಸಂಸ್ಕೃತಿ ಉಳಿಸಿ ಸಮಾಜ ಕಟ್ಟುವ ಕಾರ್ಯದಲ್ಲಿ ಕುಮಾರಸ್ವಾಮಿಗಳು ಮಾಡಿರುವ ಸಾಧನೆ ಮಹತ್ತರವಾದುದು ಎಂದು ಹುಬ್ಬಳ್ಳಿ ಜಿಲ್ಲೆಯ ಹಾನಗಲ್‌ನ ಜಗದ್ಗುರು ಮೂರುಸಾವಿರ ಮಠದ ಶ್ರೀ ಮ.ನಿ.ಪ್ರ. ಜಗದ್ಗುರು ಶ್ರೀಗುರುಸಿದ್ದ ರಾಜಯೋಗೀಂದ್ರ ಮಹಾ ಸ್ವಾಮಿಗಳು ಹೇಳಿದರು.
ತಾಲೂಕಿನ ಬೆಟ್ಟದಪುರದ ಸ್ವತಂತ್ರ ಸಲೀಲಾಖ್ಯ ವಿರಕ್ತಮಠ ಮತ್ತು ಕನ್ನಡ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂಗೈಕೈ ಶ್ರೀ ಹಾನಗಲ್ಲ ಕುಮಾರಸ್ವಾಮಿರ 150ನೇ ಜಯಂತಿ ಗಣಾರಾಧನ ಮಹೋತ್ಸವ ಮತ್ತು ಪೂಜ್ಯದ್ವಯರಿಗೆ ನುಡಿ ನೈವೆದ್ಯ ಸಮಾಜ ಯುವ ಚೇತ ಶ್ರೀಗಳಿಂದ ಹಿರಿಯ-ಕಿರಿಯ ಸಾಧಕರ ಸಾಧನೆಗೆ ಅಭಿನಂದನಾ ಕಾರ್ಯಕ್ರಮ, ಎಸ್‌ಸಿವಿಡಿಎಸ್ ವಿದ್ಯಾಸಂಸ್ಥೆಗಳ 26ನೇ ವರ್ಷಾಚರಣೆ, ಕನ್ನಡ ಮಟ್ಟದ ಸ್ಥಾಪನೆ 208ನೇ ವರ್ಷಾಚರಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾನಗಲ್ಲ ಕುಮಾರಸ್ವಾಮಿಯವರು ಮಾನವೀಯತೆಯ ದೃಷ್ಟಿಯ ಮುಖಾಂತರ ಕಲೆ, ಸಾಹಿತ್ಯ, ಸಂಸ್ಕೃತಿ ಕಟ್ಟಿ ಬೆಳೆಸಿದವರು ಮತ್ತು ಅನಾದಿಕಾಲದಲ್ಲೇ ಗೋಶಾಲೆ ಮತ್ತು ಗುರುಕುಲವನ್ನು ಸ್ಥಾಪಿಸಿ ಧರ್ಮ ಪ್ರಚಾರಕ್ಕೆ ಅಡಿಗಲ್ಲು ಇಟ್ಟವರು ಇವರನ್ನು ನಾಡಿನ ಜನತೆ ಎಷ್ಟು ನೆನೆದರು ಸಾಲದು ಎಂದರು.
ಬೆಟ್ಟದಪುರದ ಸಲೀಲಾಖ್ಯ ವಿರಕ್ತಮಠಾಧೀಶ ಶ್ರೀಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಗಣಾರಾಧನ ಮಹೋತ್ಸವದಲ್ಲಿ ಪೂಜ್ಯ ಕುಮಾರಸ್ವಾಮಿರನ್ನು ನಾವು ನೆನೆಯಲೇಬೇಕು. ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಮತ್ತು ಸುತ್ತೂರು ಮಠದ ಶಿವರಾತ್ರೇಶ್ವರ ಸ್ವಾಮೀಜಿಗಳು ದೇಹದ ಎರಡು ಕಣ್ಣುಗಳಿದ್ದಂತೆ ಹಾನಗಲ್ ಕುಮಾರಸ್ವಾಮೀಜಿ ಮೂರನೇಯ ಕಣ್ಣು ಇದ್ದಂತೆ
-ನಾವು ಗಣಾರಾಧನ ಸಮಯದಲ್ಲಿ ಹೊಸದಾಗಿ ಸಮಾಜಕ್ಕೆ ಏನಾದರೂ ಒಂದು ಉಪಯೋಗವಾಗುವಂತಹ ಯೋಜನೆ ಹಾಕಿಕೊಳ್ಳುತ್ತಿದ್ದೇವೆ. ನಾವು ಹುಟ್ಟುವುದು ಎಲ್ಲೋ ಬೆಳೆಯುವುದು ಎಲ್ಲೋ, ಸಾಯುವುದು ಇನ್ನೇಲ್ಲೂ ಆದ್ದರಿಂದ ಪ್ರತಿಯೊಬ್ಬರು ಸಮಾಜಕ್ಕೆ ಉಪಕಾರವಾಗುವಂತಹ ಕೆಲಸ ಮಾಡುವವರಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.
ಕುಂಭಕೋಣಂನ ಮಠಾಧೀಶರಾದ ಶ್ರೀ ಜಗದ್ಗುರು ನೀಲಕಂಠ ಸಾರಂಗ ದೇಸಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಲಿಂಗಕಲ್ಲಲ್ಲ ಕಲ್ಲು ಲಿಂಗವಲ್ಲ ಮೂರು ದಿನದ ಸಂತೆ ಎಲ್ಲರೂ ಕೂಡ ಇಲ್ಲಿಂದ ಹೋಗುವವರೆ ಆದ್ದರಿಂದ ಸಮಾಜದಲ್ಲಿ ಏನಾದರೂ ಗುರುತು ಉಳಿಸಿ ಹೋಗುವಂತಹ ಕೆಲಸ ಮಾಡಬೇಕು. ಎಲ್ಲರೂ ಒಂದಾಗಿ ಬಾಳುವುದನ್ನು ಕಲಿಯಬೇಕು. ಪ್ರಸಾದ ಮತ್ತು ನೀರನ್ನು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ವ್ಯಯ ಮಾಡಬಾರದು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಖೀಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಹಾಗೂ ವಕೀಲ ಸಿ.ಎಸ್.ಮಂಜುನಾಥ್‌ಸ್ವಾಮಿ, ಕಲೆ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಎಲ್.ಮಹದೇವಪ್ಪ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕಿರಣ್ ಸರ್ಕಾರಿ ಸೇವೆಯಲ್ಲಿ ಪಿಡಿಒ ಆಗಿ ಸೇವೆಸಲ್ಲಿಸಿದ ಶಿವಯೋಗಿ ವಾಣಿಜ್ಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ವಿವಿಧ ಗ್ರಾಮಗಳಿಂದ ಬಂದಿದ್ದ ಸ್ವಾಮೀಜಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು.
ನಿರಂಜನಾ ಜಡೇಜ ಸ್ವಾಮೀಜಿಗಳು, ಶ್ರೀಮಹಾಂತ ಸ್ವಾಮೀಜಿಗಳು, ಶ್ರೀಸರ್ಪಭೂಷಣ ಮಹಾಸ್ವಾಮಿಗಳು, ಶ್ರೀಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಶ್ರೀಶರಣೆಜಯದೇವ ತಾಯಿ, ಹೊಸಮಠದ ಚಿದಾನಂದಸ್ವಾಮಿ, ಮಾಜಿ ಶಾಸಕ ಹೆಚ್.ಸಿ.ಬಸವರಾಜ್, ಪರಿಸರ ಹೋರಾಟಗಾರ ಕೆ.ಎನ್.ಸೋಮಶೇಖರ್ ಕೌಲನಹಳ್ಳಿ, ಪುರಸಭಾ ಸದಸ್ಯ ನಂಜುಂಡಸ್ವಾಮಿ, ಅಕ್ಷರ ಮಹಾಲಕ್ಷ್ಮೀ ಚಿಟ್‌ಫಂಡ್‌ನ ಅಧ್ಯಕ್ಷ ಕುಮಾರಸ್ವಾಮಿ, ಮುಖಂಡರಾದ ಪಿ.ಎಂ.ಶಾಂತಪ್ಪ, ಪಾಲಾಕ್ಷ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.