ಜಾತಿಯ ಕೆಟ್ಟ ಮನಸ್ಸುಗಳು ಸ್ವಚ್ಛವಾಗಲಿ


Team Udayavani, Nov 5, 2018, 12:18 PM IST

m1-jatiya.jpg

ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಇಡೀ ದೇಶ ಜಾತಿಯ ಕೆಟ್ಟ ಮನಸ್ಸುಗಳಿಂದ ತುಂಬಿದ್ದು, ನಮ್ಮ ಜನರ ಮನಸ್ಸಿನಲ್ಲಿರುವ ಇಂತಹ ಕೊಳಕುಗಳನ್ನು ಮೊದಲು ಸ್ವಚ್ಛಗೊಳಿಸಬೇಕಿದೆ ಎಂದು ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಅಭಿಪ್ರಾಯಪಟ್ಟರು.

ನಗರದ ವಿ. ಶ್ರೀನಿವಾಸಪ್ರಸಾದ್‌ ಅಭಿಮಾನಿಗಳ ಬಳಗದ ವತಿಯಿಂದ ಮಾನಸಗಂಗೋತ್ರಿ ರಾಣಿ ಬಹದ್ಧೂರ್‌ ಸಭಾಂಗಣದಲ್ಲಿ ಸಾಮಾಜಿಕ ಕ್ರಾಂತಿಕಾರಿ ಮಾಜಿ ಸಚಿವ ಬಿ. ಬಸವಲಿಂಗಪ್ಪನವರ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ಮಲ್ಕುಂಡಿ ಮಹಾದೇವಸ್ವಾಮಿ ಅವರ “ಬಯಲು ಬಹಿರ್ದೆಸೆ-ಒಂದು ಸಾಮಾಜಿಕ ಅನಿಷ್ಟ’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗೆ ದೇಶದ ಜನತೆ ಮನಸ್ಸಿನಲ್ಲಿ ಜಾತಿಯ ಆಲೋಚನೆ ತುಂಬಿದೆ. ಆದರೂ ನಮ್ಮ ಜನರು ಕೈಯಲ್ಲಿ ಪೊರಕೆ ಹಿಡಿದು ಪರಿಸರವನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಆದರೆ ಸ್ವಚ್ಛ ಭಾರತದ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ಸ್ವಚ್ಛತೆಗಿಂತಲೂ ಮೊದಲಾಗಿ ದೇಶದ ಜನರ ಮನಸ್ಥಿತಿಯಲ್ಲಿ ತುಂಬಿರುವ ಜಾತಿಯ ಮಲೀನತೆಯನ್ನು ಮೊದಲು ಸ್ವಚ್ಛಗೊಳಿಸಬೇಕಿದೆ ಎಂದರು. 

ಸಮಾಜದಲ್ಲಿ ತಾಂಡವವಾಡುತ್ತಿರುವ ಜಾತೀಯತೆ ಮತ್ತು ದಲಿತರ ಶೋಷಣೆಯನ್ನು ದಲಿತರು ಪ್ರಶ್ನಿಸಿದರೆ ಜಾತಿವಾದಿಗಳಾಗುತ್ತಾರೆ. ಬೇರೆ ಜಾತಿಯವರು ಅದರ ಬಗ್ಗೆ ಮಾತನಾಡಿದರೆ ಸಮಾಜ ಸುಧಾಕರೆಂದು ಬಿಂಬಿಸುವ ವಾದವನ್ನು ಇಂದಿಗೂ ಬೆಳೆಸಿಕೊಂಡು ಬರಲಾಗಿದೆ. ಆದರೆ 
ದಲಿತರ ನೋವು ದಲಿತನಿಗಷ್ಟೇ ತಿಳಿದಿದ್ದು, ಧರ್ಮ, ವರ್ಣಾಶ್ರಮ ಪದ್ಧತಿ, ಜಾತಿಯಿಂದ ದಲಿತರು ನೋವು ಅನುಭವಿಸಿದ್ದಾರೆ.

ಅದರಲ್ಲೂ ಪೌರಕಾರ್ಮಿಕರು ಮಲ ಹೊರುತ್ತಿದ್ದನ್ನು ಕಂಡ ಬಸವಲಿಂಗಪ್ಪ, ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದರು. ಅಲ್ಲದೇ ಮೇಲ್ವರ್ಗದವರು ಪೌರಕಾರ್ಮಿಕರಿಂದಲೇ ಸರ್ಕಾರದ ವಿರುದ್ಧ ಕೇಸು ಹಾಕಿಸಿದಕ್ಕೆ ಬಸವಲಿಂಗಪ್ಪ ನೊಂದುಕೊಂಡಿದ್ದರು. ಇದೇ ಕಾರಣಕ್ಕಾಗಿ ಬಸವಲಿಂಗಪ್ಪ ಅವರ ಕ್ರಾಂತಿ ಆರಂಭವಾಗಿದೆ, ಎದುರಿಸಲು ಸಿದ್ಧರಾಗಬೇಕಿದೆ ಎಂದು ಹೇಳಿದರು.

ಕೃತಿ ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನೀಲಗಿರಿ ಎಂ.ತಳವಾರ್‌ ಮಾತನಾಡಿ, ಭಾರತವೆಂದರೆ ನಮ್ಮ ಕಣ್ಮುಂದೆ ಬರುವುದು ನಗರಗಳು. ಗ್ರಾಮ ಭಾರತ ಕೂಡ ಇದೆ ಎಂಬುದನ್ನು ನಾವು ಮರೆಯುತ್ತೇವೆ. ಮಲ್ಕುಂಡಿ ಮಹದೇವಸ್ವಾಮಿ ಅವರ ಕೃತಿ ಗ್ರಾಮ ಭಾರತದ ನೋಡಲು ಪ್ರೇರೆಪಿಸುತ್ತದೆ. ಅದರ ಬಗ್ಗೆ ಚಿಂತಿಸಲು ಒತ್ತಾಯಿಸುತ್ತದೆ. 110 ಪುಟಗಳ ಪುಟ್ಟ ಪುಸ್ತಕ ಗ್ರಾಮ ಭಾರತದ ವಿಶ್ವರೂಪ ದರ್ಶನ ಮಾಡಿಸುತ್ತದೆ.

ಕೃತಿಯು ಸಹೃದಯ ಜನರ ಗ್ರಾಮ ಜೀವನದ ಬಗೆಗೆ ಆತ್ಮವಲೋಕನ ಮಾಡಿಕೊಳ್ಳುವ ಪ್ರಜ್ಞೆ ಬರಲಿದ್ದು, ಮನವರಿಕೆಯ ಬರವಣಿಗೆಯಿದೆ. ವೈಜ್ಞಾನಿಕ ದೃಷ್ಟಿಕೋನವಿದ್ದು, ಅಂಕಿ ಸಂಖ್ಯೆಗಳ ಕ್ರೋಢೀಕರಣ ದಾಖಲಾಗಿದೆ. ಒಂದು ಕೃತಿಯ ಯಶಸ್ಸು ಇರುವುದು ಪ್ರಶ್ನೆ ಮೂಡಿಸುವುದರಲ್ಲಿ ಮಲ್ಕುಂಡಿ ಮಹದೇವಸ್ವಾಮಿ ಅವರ ಕೃತಿ ಯಶಸ್ವಿಯಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇದೊಂದು ವಿಭಿನ್ನ ಕೃತಿಯಾಗಿ ನಿಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಪಂ ಪಿಡಿಒ, ಕವಿ ಮಲ್ಕುಂಡಿ ಮಹಾದೇವಸ್ವಾಮಿ ಅವರ “ಬಯಲು ಬಹಿರ್ದೆಸೆ- ಒಂದು ಸಾಮಾಜಿಕ ಅನಿಷ್ಠ’ ಕೃತಿಯನ್ನು ಕವಿ ಡಾ. ಸಿದ್ದಲಿಂಗಯ್ಯ ಬಿಡುಗಡೆ ಮಾಡಿದರು. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌, ಲೇಖಕ ಮಲ್ಕುಂಡಿ ಮಹದೇವಸ್ವಾಮಿ, ಬಳಗದ ಅಧ್ಯಕ್ಷ ಪಿ.ನಂದಕುಮಾರ್‌, ಪ್ರಧಾನ ಕಾರ್ಯದರ್ಶಿ ಡಿ.ವೆಂಕಟರಾಜು, ಮೈಸೂರು ವಿವಿ ಪರೀûಾಂಗ ಕುಲಸಚಿವ ಪೊ›.ಜೆ.ಸೋಮಶೇಖರ್‌, ಮಾಜಿ ಮೇಯರ್‌ ಪುರುಷೋತ್ತಮ್‌, ಸಾಹಿತಿ ಬನ್ನೂರು ಕೆ.ರಾಜು, ಈಶ್ವರ್‌ ಚಕ್ಕಡಿ ಇನ್ನಿತರರು ಹಾಜರಿದ್ದರು.

ಪ್ರತಿಭೆಗೆ ಬೆಲೆಯಿಲ್ಲ: ದೇಶದಲ್ಲಿ ಜಾತಿಯದೇ ದೊಡ್ಡ ಸಂಶೋಧನೆಯಾಗಿದ್ದು, ಒಬ್ಬ ವ್ಯಕ್ತಿಯ ಜಾತಿ ಯಾವುದೆಂದು ಸಂಶೋಧನೆ ಮಾಡದಿದ್ದರೆ ನಮ್ಮ ದೇಶದ ಜಾತಿಯ ಮನಸ್ಸುಗಳಿಗೆ ಊಟ, ನಿದ್ದೆ ಸೇರುವುದಿಲ್ಲ ಹಾಗೂ ಸಮಾಧಾನ ಇರುವುದಿಲ್ಲ. ಅಥ್ಲೀಟ್‌ ಹಿಮದಾಸ್‌ ಅವರು ಚಿನ್ನದ ಪದಕ ಗೆದ್ದಾಗ ವಿದೇಶಿಗರು “ಭಾರತದಲ್ಲಿ ನವತಾರೆ ಉದಯಿಸಿತು’ ಎಂದು ಹೊಗಳಿದರೆ, ನಮ್ಮ ದೇಶದಲ್ಲಿ ಹಿಮದಾಸ್‌ ಜಾತಿ ಯಾವುದೆಂಬ ಸಂಶೋಧನೆ ನಡೆಯುತ್ತದೆ.

ಒಲಂಪಿಕ್ಸ್‌ನಲ್ಲಿ ಪಿ.ವಿ. ಸಿಂಧು ಪದಕ ಗೆದ್ದಾಗ 10 ನಿಮಿಷದಲ್ಲಿ 10 ಸಾವಿರ ಮಂದಿ ಸಿಂಧು ಯಾವ ಜಾತಿಯೆಂದು ಸಂಶೋಧನೆ ಮಾಡುತ್ತಾರೆ. ಇದನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಜಾತಿಗೆ ಬೆಲೆ ಇದೆ ಹೊರತು, ಪ್ರತಿಭೆ, ಪ್ರಾಮಾಣಿಕತೆಗೆ ಬೆಲೆ ಇಲ್ಲದಿರುವುದು ದುರಾದುಷ್ಟಕರ ಸಂಗತಿ ಎಂದು ಕವಿ ಡಾ.ಸಿದ್ದಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.