ಪಿರಿಯಾಪಟ್ಟಣದಲ್ಲಿ ಬಿಜೆಪಿ ನೆಲೆಯೂರಲು ಶ್ರಮಿಸಿದ ತಮ್ಮಯ್ಯ
Team Udayavani, Jun 23, 2017, 12:56 PM IST
ಪಿರಿಯಾಪಟ್ಟಣ: ಪಕ್ಷ ಸಂಘಟನೆ ಮತ್ತು ಸಾಮಾಜಿಕ ಕಳಕಳಿಯ ಹೋರಾಟಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ತಾಲೂಕಿನಲ್ಲಿ ಬಿಜೆಪಿ ನೆಲೆಯೂರಲು ಶ್ರಮಿಸಿದ ಧೀಮಂತ ರಾಜಕಾರಣಿ ಡಾ.ಕೆ.ಆರ್.ತಮ್ಮಯ ಎಂದು ತಂಬಾಕು ಮಂಡಳಿ ಉಪಾಧ್ಯಕ್ಷ ಪಿ.ವಿ.ಬಸವರಾಜಪ್ಪ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲೂಕು ಬಿಜೆಪಿ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಆರ್.ತಮ್ಮಯರ 21 ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮದಲ್ಲಿ ಭಾವ ಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಮಾತನಾಡಿದರು.
ವೃತ್ತಿಯಲ್ಲಿ ವೈದ್ಯಕೀಯ ಸೇವೆಯಲ್ಲಿದ್ದು ಸಮಾಜಿಕ ಕಳಕಳಿವುಳ್ಳವರಾಗಿದ್ದ ಡಾ.ಕೆ.ಆರ್.ತಮ್ಮಯ ಜನಸಂಘದಲ್ಲಿ ತೊಡಗಿಸಿಕೊಂಡು ನಂತರ ಬಿಜೆಪಿಯಲ್ಲಿದ್ದ ಕೆಲವೇ ಕಾರ್ಯಕರ್ತರೊಂದಿಗೆ ಸಂಘಟನೆಗೆ ಶ್ರಮಿಸಿ, ತಾಲೂಕಿನಲ್ಲಿ ಪಕ್ಷ ನೆಲೆಕಂಡುಕೊಂಡು ಪಕ್ಷದ ಅಭ್ಯರ್ಥಿಯೊಬ್ಬರು ಶಾಸಕರಾಗುವರೆಗೂ ಬೆಳೆಸಿದರು. ಇಂದು ಪಕ್ಷ ಉತ್ತಮ ರೀತಿಯಲ್ಲಿ ಸಂಘಟನೆಗೊಂಡಿದ್ದು ಹೆಚ್ಚು ಕಾರ್ಯಕರ್ತರು ಪಕ್ಷದಲ್ಲಿದ್ದು ಕೆ.ಆರ್.ತಮ್ಮಯ್ಯರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಬಿಜೆಪಿ ತಾ.ಅಧ್ಯಕ್ಷ ಪಿ.ಜೆ.ರವಿ ಮಾತನಾಡಿ, ನಿಸ್ವಾರ್ಥ ರಾಜಕಾರಣಿಯಾದ ಡಾ.ಕೆ.ಆರ್.ತಮಯ್ಯ ಪಕ್ಷ ಸಂಘಟನೆ ಮಾಡಿದ ಮಾದರಿ ಪ್ರತಿಯೊಬ್ಬರಿಗೂ ಅನುಕರಣೀಯವಾದದು, ಎಂತಹ ತುರ್ತು ಪರಿಸ್ಥಿತಿಯಲ್ಲಿಯೂ ಪಕ್ಷದ ಸಾರಥ್ಯವಹಿಸಿ ತಾಲೂಕಿನಲ್ಲಿ ಪಕ್ಷಕ್ಕೆ ಭದ್ರಬೂನಾದಿ ಹಾಕಿಕೊಟ್ಟಿದ್ದಾರೆ. ಇದರ ಫಲವೇ ನಾವಿಂದು ಪ್ರಬಲ ಪಕ್ಷವಾಗಿ ಬೆಳೆದಿದ್ದೇವೆ ಎಂದರು.
ಉಪಾಧ್ಯಕ್ಷ ಸತ್ಯಗಾಲಶಿವರಾಮ್, ಪ್ರ.ಕಾರ್ಯದರ್ಶಿ ಕಿರಣ್‌ಜೈರಾಮ್‌ಗೌಡ, ಆನಂದ್‌ಕೊಣಸೂರು, ಕಾರ್ಯದರ್ಶಿ ಕರಿಯಪ್ಪ, ಮುಖಂಡರಾದ ಕೆ.ಕೆ.ಶಶಿ, ಬೆಮ್ಮತ್ತಿಕೃಷ್ಣ, ವಕೀಲ ರಾಜೇಗೌಡ, ಗುರುಮೂರ್ತಿ, ರಮೇಶ್, ಮೋರ್ಚಾ ಅಧ್ಯಕ್ಷರುಗಳಾದ ಎಸ್.ಟಿ.ಕೃಷ್ಣಪ್ರಸಾದ್, ಮಹದೇವ್, ಪಿ.ಟಿ.ಲಕ್ಷ್ಮೀ ನಾರಾಯಣ, ಕಲಾ ಪ್ರಕೋಷ್ಟದ ಟಿ.ರಮೇಶ್, ರಘುಅಬ್ಬಳತಿ, ಮಲ್ಲೇಶ್, ಸುಂದರ್, ಮೈಲಾರಿ, ದಿಲೀಪ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.