ಅಪಪ್ರಚಾರಕ್ಕೆ ದಲಿತರ ಕಿವಿಗೊಡದೆ ಬಿಜೆಪಿ ಬೆಂಬಲಿಸಿ


Team Udayavani, Apr 13, 2019, 3:00 AM IST

apaprachara

ಹುಣಸೂರು: 70 ವರ್ಷದಿಂದ ದೇಶವನ್ನು ಆಳಿದ ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಇದುವರೆಗೂ ದಲಿತ ಮುಖ್ಯಮಂತ್ರಿ ಮಾಡಲೇ ಇಲ್ಲ, ಕಾಂಗ್ರೆಸ್‌ನಿಂದ ದಲಿತರು ಉದ್ಧಾರ ಸಾಧ್ಯವೇ ಎಂದು ಬಿಜೆಪಿ ಮುಖಂಡ, ಛಲವಾದಿ ಮಹಾಸಭಾದ ಸಂಸ್ಥಾಪಕ ಕೆ.ಶಿವರಾಂ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಬಡ್ತಿ ಮೀಸಲಾತಿ ಬೇಡವೆಂದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸುಗ್ರೀವಾಜ್ಞೆ ತಂದು ರಾಷ್ಟ್ರಪತಿ ಅಂಕಿತ ಹಾಕಿಸಿದರೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಈ ಮೈತ್ರಿ ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ.

ಕಾಂಗ್ರೆಸ್ಸಿಗರೂ ಪ್ರಶ್ನಿಸುತ್ತಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ದಲಿತರ ಬಗ್ಗೆ ಕಾಳಜಿ ಇಲ್ಲದ್ದರಿಂದಾಗಿ ಜಾರಿಗೆ ಮುಂದಾಗಿಲ್ಲ, ಇದರಿಂದಾಗಿ ರಾಜ್ಯದ 20 ಸಾವಿರಕ್ಕೂ ಹೆಚ್ಚು ಮಂದಿ ದಲಿತ ನೌಕರರು ಬೀದಿಪಾಲಾಗಿದ್ದಾರೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಕೇಂದ್ರ ಸಚಿವ ಅನಂತಕುಮಾರ್‌ ಮಾತಿನ ಭರದಲ್ಲಿ ಆಡಿದ ವಿವಾದಾತ್ಮಕ ಹೇಳಿಕೆಗೆ ಈಗಾಗಲೇ ಕ್ಷಮೆ ಕೋರಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಾವಣೆ ಮಾಡುತ್ತಾರೆಂಬ ಕಾಂಗ್ರೆಸ್‌-ಜೆಡಿಎಸ್‌ ಅಪಪ್ರಚಾರ ನಡೆಸುತ್ತಿದ್ದು, ಇನ್ನು ದಲಿತ ಮುಖಂಡರೇ ಇದನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಇದನ್ನು ದಲಿತರು ನಂಬದೆ ದಲಿತರ ಪರವಾಗಿರುವ ಮೋದಿ ನೇತೃತ್ವದ‌ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೋರಿದರು.

ಅಂಬೇಡ್ಕರ್‌ ಪುಣ್ಯಸ್ಥಳ ಅಭಿವೃದ್ಧಿ: ಅಂಬೇಡ್ಕರ್‌ರ ಪವಿತ್ರವಾದ ಸಂವಿಧಾನದ ಬಗ್ಗೆ ಮೋದಿಗೆ ಅಪಾರ ಗೌರವ ಹೊಂದಿದ್ದರಿಂದಲೇ ಅವರಿಗೆ ಸಂಬಂಧಿಸಿದ ಐದು ಪುಣ್ಯ ಸ್ಥಳಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಿದ್ದಾರೆ. ಮೋದಿ ಮತ್ತೂಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ಬೆಂಬಲಿಸಬೇಕು. ಈ ಮೂಲಕ ಪ್ರತಾಪ್‌ ಸಿಂಹ ಅವರನ್ನು ಪುನರಾಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಅದೃಷ್ಟದ ಮೇಲೆ ನಂಬಿಕೆ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲು ಶ್ರೀನಿವಾಸಪ್ರಸಾದ್‌ ಅವರು ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಯಡಿಯೂರಪ್ಪರ ಸೂಚನೆಯಂತೆ ಚಾಮರಾಜನಗರ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿದ್ದೆ. ಆದರೆ, ಕಡೆಗಳಿಗೆಯಲ್ಲಿ ತಾನೇ ಸ್ಪರ್ಧಿಸುತ್ತೇನೆಂದು ಹೇಳಿದ್ದರಿಂದ ನಾನು ಹಿಂದೆ ಸರಿದೆ.

ಪಕ್ಷವು ಕೋಲಾರದಲ್ಲಿ ಸ್ಪರ್ಧಿಸಿ ಎಂದು ಸೂಚಿಸಿದರೂ ತಾವು ಒಪ್ಪಲಿಲ್ಲ. ತಮಗೆ ಅದೃಷ್ಟದ ಮೇಲೆ ನಂಬಿಕೆ ಇದ್ದು, ಮುಂದೆ ಪಕ್ಷದಲ್ಲಿ ಒಳ್ಳೆಯ ಅವಕಾಶವಿದೆ. ರಾಜ್ಯದೆಲ್ಲೆಡೆ ಸಂಚರಿಸಿ, ಸಂಘಟನೆಯೊಂದಿಗೆ ಮತಯಾಚಿಸುತ್ತಿದ್ದೇನೆ. ಮುಂದೆ ಉತ್ತಮ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ರಾಜು, ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಅಪ್ಪಣ್ಣ, ನಗರ ಅಧ್ಯಕ್ಷ ರಾಜೇಂದ್ರ, ಜಿಪಂ ಮಾಜಿ ಸದಸ್ಯ ರಮೇಶಕುಮಾರ್‌ ಇತರರಿದ್ದರು.

ಟಾಪ್ ನ್ಯೂಸ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

Untitled-1

Mysuru: ಕೆಆರ್‌ಎಸ್‌ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್‌

Dali-dhanajaya

Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ

2-hunsur

Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Karkala: ಜಾಗದ ವಿಚಾರ; ಮಹಿಳೆಗೆ ಹಲ್ಲೆ; ಪ್ರಕರಣ ದಾಖಲು

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

complaint

Manipal: ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ; ದೂರು ದಾಖಲು

de

Kundapura: ಮಲಗಿದ್ದಲ್ಲಿಯೇ ವ್ಯಕ್ತಿ ಸಾವು

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.