ತಳ ಸಮುದಾಯಗಳು ಒಗ್ಗೂಡುವ ಅಗತ್ಯವಿದೆ
Team Udayavani, Jul 1, 2019, 3:00 AM IST
ಮೈಸೂರು: ದಸಂಸ ಹಲವು ರೀತಿಯ ಒಡಕುಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡು ಸತ್ವ ಕಳೆದುಕೊಂಡಿದೆ ಎಂದು ದಸಂಸ ಮೈಸೂರು ವಿಭಾಗೀಯ ಉಪ ಪ್ರಧಾನ ಸಂಚಾಲಕ ನಿಂಗರಾಜ್ ಮಲ್ಲಾಡಿ ಹೇಳಿದರು.
ನಗರದ ಇನ್ಸಿಟಿಟ್ಯೂಟ್ ಆಫ್ ಎಂಜಿನಿಯರ್ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ನಗರ ಶಾಖೆ ವತಿಯಿಂದ ಆಯೋಜಿಸಿದ್ದ “ದಲಿತರ ಸ್ಥಿತಿಗತಿಗಳ ಚಿಂತನಾ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮ ಹಾಗೂ ಮೈಸೂರು ನಗರ ಸಮಿತಿ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
ದಸಂಸ ಮೂಲ ಆಶಯದಂತೆ ಶೋಷಿತರ, ದೌರ್ಜನ್ಯಕ್ಕೆ ತುತ್ತಾದವರ ಬಳಿ ಹೋಗದೇ, ರಾಜಕೀಯ ನಾಯಕರ, ಉಳ್ಳವರ ಮನೆ ಬಾಗಿಲು ಕಾಯ್ದುಕೊಂಡು ನಮ್ಮಲ್ಲಿಯೇ ಜಾತಿ ರಾಜಕಾರಣ ಮಾಡುವ ಮೂಲಕ ಛಿದ್ರವಾಗಿ ತನ್ನ ಸತ್ವ ಕಳೆದುಕೊಂಡಿದೆ ಎಂದರು.
ದಸಂಸದ ಮೂಲ ಆಶಯದೊಂದಿಗೆ ಶೋಷಣೆಗೆ, ದೌರ್ಜನ್ಯಕ್ಕೆ ತುತ್ತಾಗಿರುವ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಮತ್ತೆ ದಸಂಸವನ್ನು ಮುನ್ನೆಡೆಸುವ ಅಗತ್ಯವಿದೆ ಎಂದು ತಿಳಿಸಿದರು.
ಪ್ರತಿನಿತ್ಯ ದಲಿತರು, ಶೋಷಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಹೀಗೆ ಮುಂದುವರಿದರೆ ನಮ್ಮ ಮೇಲಿನ ಶೋಷಣೆ, ದೌರ್ಜನ್ಯಕ್ಕೆ ಕೊನೆಯಿಲ್ಲದಂತಾಗುತ್ತದೆ. ಹೀಗಾಗಿ ನಮ್ಮ ರಕ್ಷಣೆಗಾಗಿ ದಸಂಸ ಮರುಹುಟ್ಟು ಪಡೆಯಬೇಕಿದ್ದು, ಯುವ ಸಮುದಾಯ ಈ ಕುರಿತು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
ದಸಂಸ ಮುನ್ನೆಡೆಸಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಹೋರಾಟಕ್ಕೆ ಹೆಸರುವಾಸಿಯಾದ ಮೈಸೂರಿನಲ್ಲಿ ಒಗ್ಗಟ್ಟಿನ ಕೊರತೆ ಎದುರಾಗಿದೆ. ಹೋರಾಟ ಮಾನೋಭಾವ ಸತ್ತು ಹೋಗಿದೆ. ಪೌರಕಾರ್ಮಿಕರ ಸಂಘ, ಬಲಗೈ, ಎಡಗೈ ಅಂಗವಿಕಲರಂತಾಗಿದ್ದು, ಎಲ್ಲರೂ ಒಗ್ಗೂಡಬೇಕಿದೆ. ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟರಾಗಿದ್ದು, ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ ಎಂದರು.
ಜನಪ್ರತಿನಿಧಿಗಳು ಸಮುದಾಯದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಬೇಕು. ಇಲ್ಲವಾದರೆ, ನಿಮ್ಮ ವಿರುದ್ಧವೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆದಿದ್ರಾವಿಡ ಸಮಾಜದ ಹಿರಿಯ ಮುಖಂಡ ಬಿ.ಎಸ್.ಸುಬ್ರಹ್ಮಣ್ಯ, ದ್ರಾವಿಡರಾದ ನಾವು ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿದ್ದು, ದೇಶವನ್ನು ಆಳಬೇಕಿತ್ತು. ಆದರೆ, ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದ ಅದು ಸಾಧ್ಯವಾಗಿಲ್ಲ. ಪೌರ ಕಾರ್ಮಿಕ ಎಂಬುದು ಅದು ಸಮಾಜವಲ್ಲ ಅದು ಹುದ್ದೆಯಾಗಿದ್ದು, ಅದು ಒಂದು ಜನಾಂಗವೆಂಬತ್ತೆ ವಿಭಜಿಸಿರುವುದು ತಪ್ಪು.
ಸಿಎಫ್ಟಿಆರ್‌ಐ, ರೈಲ್ವೆಯಲ್ಲಿ ಕೆಲಸ ಮಾಡುವವರು ಪೌರಕಾರ್ಮಿಕರ, ಹಿಂದೆ ಜಲಗಾರನೆಂದು ಆನಂತರ ಸ್ವೀಪರ್, ಸಫಾಯಿ ಎಂದು ಕರೆಯಲಾಗುತ್ತಿತ್ತು. ಇಂದು ಪೌರಕಾರ್ಮಿಕ ಎಂದು ಕರೆಯಲಾಗುತ್ತಿದ್ದು, ಇದು ಸರಿಯಲ್ಲ. ಇದರ ಬದಲಿಗೆ ಪೌರಬಂಧು ಎಂದು ಕರೆಯಲು ಸೂಚಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇನೆಂದರು.
ನಂಜನಗೂಡು ನಗರಸಭಾ ಸದಸ್ಯ ದೇವ.ಪಿ, ಕೆ.ಆರ್.ನಗರ ಪುರಸಭಾ ಸದಸ್ಯ ಶಂಕರ್, ಜಿಲ್ಲಾ ಪಜಾತಿ, ಪಂಗಡಗಳ ಜಾಗೃತಿ ಸದಸ್ಯೆ ಪುಟ್ಟಲಕ್ಷ್ಮಮ್ಮ, ಕೆ.ಆರ್.ನಗರ ಹೆಬ್ಟಾಳು ಸದಸ್ಯ ಎಚ್.ಬಿ.ದಿವಾಕರ್, ಜ್ಯೋತಿನಗರ ಸಿ.ಆರ್.ರಾಚಯ್ಯ, ಹೆಬ್ಟಾಳ್ ಕಾಲೋನಿ ಕೆ.ನಂಜಪ್ಪ ಬಸವನಗುಡಿ ಇತರ ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಶ್ರೀರಂಗಪಟ್ಟಣ ಪುರಸಭಾ ಮಾಜಿ ಅಧ್ಯಕ್ಷ ಆರ್.ಕೃಷ್ಣ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಕಾರ್ಯ ಬಸವಣ್ಣ, ಮೈಸೂರು ನಗರ ಸಂಚಾಲಕ ಸಿ.ಮೋಹನ್‌ಕುಮಾರ್ ಹೆಬ್ಬಾಳ್, ಜಿಲ್ಲಾ ಸಂಘಟನಾ ಸಂಚಾಲಕರಾದ ದೇವೇಂದ್ರ ಕೆ.ಎಂ.ವಾಡಿ, ಚಾಮರಾಜು ಇಲವಾಲ, ಗೋವಿಂದರಾಜು ಮತ್ತಿತರರಿದ್ದರು.
ಸಮುದಾಯದ ನೋವಿಗೆ ಸ್ಪಂದಿಸಿ: ದಲಿತರಲ್ಲಿ ಎಡ, ಬಲ, ಪೌರಕಾರ್ಮಿಕರು, ಅಲೆಮಾರಿ ಸಮುದಾಯ, ಬೋವಿ ಹೀಗೆ ಜಾತಿಗೊಂದು ಸಂಘವನ್ನು ಕಟ್ಟಿಕೊಳ್ಳುವ ಕಾರ್ಯವಾಗುತ್ತಿದ್ದು, ಇದಕ್ಕೆ ದಸಂಸ ನಾಯಕರು ಈ ಸಮುದಾಯದ ನೋವುಗಳಿಗೆ ಸ್ಪಂದಿಸದೇ, ಅವುಗಳನ್ನು ಹೊರಗಿಡುವ ಕಾರ್ಯ ಮಾಡಿರುವುದು ಕಾರಣವೆನಿಸುತ್ತದೆ. ನಾವು ಬೇರೆಯವರನ್ನು ಗೌರವಿಸದಿದ್ದರೆ, ಒಳಗೊಳ್ಳದಿದ್ದರೆ ಸಹಜವಾಗಿ ಎಲ್ಲರೂ ದೂರವಾಗುತ್ತಾರೆ ಎಂದು ದಸಂಸ ಮೈಸೂರು ವಿಭಾಗೀಯ ಉಪ ಪ್ರಧಾನ ಸಂಚಾಲಕ ನಿಂಗರಾಜ್ ಮಲ್ಲಾಡಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.