ಹಣ ಹಂಚಿಲ್ಲಾಂತ ಬಹಿಷ್ಕಾರ! ಮನವೊಲಿಕೆ ನಂತ್ರ ಮತದಾನ
Team Udayavani, Apr 10, 2017, 12:19 PM IST
ಮೈಸೂರು: ಇಲ್ಲೆಲ್ಲಾ ಒನ್ ವೇ ಸಾ ಇಲ್ಲಿ ವೊಸೀ ಆಕಡಿಕೂ ಅದೆ, ಈ ಕಡಿಕೂ ಅದೆ…ಇಬ್ಬರಲ್ಲಿ ಯಾರೋ ಒಬ್ರು ಬರ್ಲಿ ಬುಡಿ ಸಾ ನಮ್ಗೆàನು..ಇವು ಮತದಾನ ಕೇಂದ್ರಗಳ ಹೊರಗೆ ಅನತಿ ದೂರದಲ್ಲಿ ನಿಂತಿದ್ದ ಗ್ರಾಮಸ್ಥರನ್ನು ಮಾತನಾಡಿಸಿದಾಗ ಕೇಳಿಬಂದ ಮಾತುಗಳು.
ಚಿನ್ನದಗುಡಿ ಹುಂಡಿ ಕಳೆದ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ. ಶ್ರೀನಿವಾಸ ಪ್ರಸಾದ್ ಅವರಿಗೆ ಬಹುಮತ ನೀಡಿದ್ದ ಗ್ರಾಮ. ಬಹುತೇಕ ಕುರುಬ ಸಮುದಾಯದವರೇ ಹೆಚ್ಚಿರುವ ಈ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಸಂಪೂರ್ಣ ಹಿಡಿತವಿದೆ. ಜತೆಗೆ ಸಂಸದ ಆರ್.ಧ್ರುವನಾರಾಯಣ ಕೆಲಸಗಾರ ಎಂಬ ವಿಶ್ವಾಸವಿದೆ. ಈ ಗ್ರಾಮದ ಬಹುತೇಕ ಜನರು ಮೈಸೂರಿಗೆ ಕೂಲಿ ಕೆಲಸಕ್ಕೆ ಬರುತ್ತಾರೆ.
ಇವರಿಗೆ ಓಡಾಡಲು ಸಂಸದರು ರೈಲ್ವೆಯ ಇಜ್ಜತ್ ಪಾಸ್ ಮಾಡಿಸಿಕೊಟ್ಟಿರುವುದನ್ನು ನೆನೆಯುತ್ತಾರೆ. ಇಷ್ಟು ವರ್ಷ ಯಾಕೆ ಸಾರ್ ಇಂತಹ ಪಾಸ್ ಮಾಡಿಸಿಕೊಡಕ್ಕಾಗಿರಲಿಲ್ಲ ಎಂದು ಪ್ರಶ್ನಿಸುವ ಗ್ರಾಮಸ್ಥರು, ಇಲ್ಲಿ ನಲ್ಲಿ ನೀರು ನೋಡಿ ಎಷ್ಟು ಚೆನ್ನಾಗಿ ಬರ್ತಾ ಇದೆ. ಅಭಿವೃದ್ಧಿ ಮಾಡವ್ರೆ ಸಾರ್ ಹಂಗಾಗಿ ಇಲ್ಲಿ ಪೂರ್ತಿ ಒನ್ ವೇ ಸಾರ್ ಅಂತಾರೆ.
ಗೋಳೂರು ಗ್ರಾಮಸ್ಥರು ಹೇಳುವುದೇ ಬೇರೆ ಇಲ್ಲಿಗೆ ಎಲ್ಲಾ ನಾಯಕರೂ ಬಂದು ಹೋಗವ್ರೆ, ಹೀಗಾಗಿ ಇಲ್ಲಿ ಆ ಕಡಿಕೂ ವೊಸಿ ಜನ ಅವ್ರೆ, ಈ ಕಡಿಕೂ ವೋಸಿ ಜನ ಅವ್ರೆ. ಇಬ್ರಲ್ಲಿ ಯಾರೋ ಬರ್ಲಿ ಬುಡಿ ಸಾರ್ ನಮ್ಗೆàನು ಅಂತಾರೆ. ನಾವೆಲ್ಲ ಆ ಕಹಿ ಘಟನೆ ಮರೆತು ಅನೋನ್ಯ ವಾಗಿದ್ದೇವೆ, ಪ್ರತಿ ಚುನಾವಣೆ ಬಂದಾಗಲೂ ಆ ವಿಷಯವನ್ನು ಕೆದಕುವವರು ನೀವೆ ಎಂದು ಅಸಮಾಧಾನ ವ್ಯಕ್ತಪಡಿಸಿದವರು ಬದನವಾಳು ಗ್ರಾಮದ ಮಹದೇವಸ್ವಾಮಿ. 1993ರಲ್ಲಿ ನಡೆದ ಗ್ರಾಮದ ದಲಿತರ ಹತ್ಯೆ, ಆನಂತರ ನಡೆದ ಘಟನಾವಳಿಗಳಾಗಿ 24 ವರ್ಷಗಳಾಗಿದೆ.
ಈಗ ನಾವೆಲ್ಲ ಅನ್ಯೂನ್ಯವಾಗಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಅಂತಹ ಯಾವುದೇ ಗಲಭೆಗಳೂ ಆಗಿಲ್ಲ. ವೈಷಮ್ಯವೂ ಬೆಳೆದಿಲ್ಲ. ಆದರೆ, ಯಾವುದೇ ಚುನಾವಣೆ ಬಂದರೂ ಬದನವಾಳು ಗ್ರಾಮಕ್ಕೆ ಬರುವ ಮಾಧ್ಯಮದವರು ಹಿಂದಿನ ಕಹಿ ಘಟನೆ ಕೆದಕಿ ಮತ್ತ ವೈಷಮ್ಯ ಬೆಳೆಯಲು ಕಾರಣರಾಗುತ್ತಿದ್ದಾರೆ. ದಯವಿಟ್ಟು ಇಂತಹ ಕೆಲಸ ಮಾಡಬೇಡಿ ಎನ್ನುತ್ತಾರೆ.
ಲಿಂಗಾಯಿತರ ಪ್ರಾಬಲ್ಯವಿರುವ ದೇವನೂರು ಗ್ರಾಮದಲ್ಲಿ ಒಗ್ಗಟ್ಟು ಒಡೆಯಲು ಕಾಂಗ್ರೆಸ್‌ನವರು ಹೆಚ್ಚು ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಗ್ರಾಮಸ್ಥರದು. ಬಿಜೆಪಿ ರಾಜಾÂಧ್ಯಕ್ಷ ಯಡಿಯೂರಪ್ಪರ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ ಗ್ರಾಮದಲ್ಲೇ ಇದ್ದು ಕಡೇ ಕ್ಷಣದ ಕಸರತ್ತು ನಡೆಸಿದ್ದರು. ಗ್ರಾಮದ ಹಿರಿಯರೊಬ್ಬರು ಮಾತನಾಡಿ, ಬಿಜೆಪಿಯವರೂ ವೊಸಿ ದುಡ್ಡು ಕೊಟ್ಟು ಹೋಗಿದ್ರು, ಜಾಸ್ತಿ ಕೊಡಕೆ ಅವ್ರುದ್ದೇನು ಸರ್ಕಾರ ಇಲ್ವಂತಲ್ಲ ಇಲ್ಲಿ.
ಅದನ್ ತಿಳ್ಕೊಂಡು ಕಾಂಗ್ರೆಸ್‌ನವರು ರಾತ್ರಿ ಲಾರಿಲಿ ದುಡ್ಡು ತಂದು ಸುರ್ಧು ಬುಟ್ಟು ಹೋದ್ರು, ಹೊಸ ನೋಟು ಬಂದವಲ್ಲ ಅದಾ ಒಂದೊಂದು ನೋಟು ಕೊಟ್ಟವ್ರೆ ಎಂದು ಯಾವುದೇ ಮುಚ್ಚುಮರೆ ಇಲ್ಲದೇ ಹೇಳಿದರು. ಮತದಾನ ಕೇಂದ್ರದ ಹೊರಗೆ ಮತಗಟ್ಟೆಗೆ ಬಂದು ಹೋಗುವವರಿಗೆ ರೈಸ್ ಬಾತ್, ಐಸ್‌ಕ್ಯಾಂಡಿ ಸೇವಾರ್ಥ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿತ್ತು.
ಮತದಾನ ಬಹಿಷ್ಕಾರ ವಾಪಸ್: ಇನ್ನು ಮಹದೇವ ನಗರದ ಜನತೆ ಗ್ರಾಮದಲ್ಲಿ ಯಾವುದೇ ಮೂಲಸೌಲಭ್ಯ ಕಲ್ಪಿಸಿಲ್ಲ ಜತೆಗೆ ಗ್ರಾಮದಲ್ಲಿ 600 ಮತಗಳಿದ್ದರೂ ಇಲ್ಲಿ ಮತಗಟ್ಟೆ ಸ್ಥಾಪಿಸಿಲ್ಲ. 3 ಕಿ.ಮೀ ದೂರದ ವೀರದೇವನಪುರದ ಮತಗಟ್ಟೆಗೆ ಹೋಗಬೇಕು ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು.
ಆದರೆ, ಗ್ರಾಮಸ್ಥರನ್ನು ಒಬ್ಬೊಬ್ಬರನ್ನೇ ಮಾತಿಗೆಳೆ ದಾಗ ಮತದಾನ ಬಹಿಷ್ಕಾರಕ್ಕೆ ಕಾರಣವಾದ ಅಂಶವೇ ಬೇರೆಯಾಗಿತ್ತು. ರಂಗದಾಸ್ ಎಂಬ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ಮುಖಂಡರಿಂದ ಹಣ ಪಡೆದುಕೊಂಡಿದ್ದರೂ ನಮಗೆ ಹಣ ಹಂಚಿಲ್ಲ. ಮಂಡ್ಯ, ಬೆಂಗಳೂರು, ಕೇರಳ, ಕೊಡಗಿಗೆ ದುಡಿಯಲು ಹೋಗಿದ್ದವರೆಲ್ಲಾ ವೋಟ್ ಹಾಕಲು ಬಂದಿದ್ದೇವೆ, ಆದರೆ ರಂಗದಾಸ್ ನಮಗೆಲ್ಲಾ ಬೈದು ಅವಮಾನ ಮಾಡಿರೋದ್ರಿಂದ ಮತದಾನ ಮಾಡಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಮಧ್ಯಾಹ್ನದ ನಂತರ ವಿಷಯ ತಿಳಿದು ಕೆಲ ಸ್ಥಳೀಯ ಮುಖಂಡರು ಆಗಮಿಸಿ ಮನವೊಲಿಸಿ ಆಟೋಗಳಲ್ಲಿ ಜನರನ್ನು ಮತಗಟ್ಟೆಗೆ ಕಳುಹಿಸಿದರು.
ನನ್ ವೋಟ್ ಯಾರೋ ಹಾಕುºಟ್ಟವ್ರೆ ಸ್ವಾಮಿ
ಕಳಲೆ ಗ್ರಾಮದ ಮಹದೇವಮ್ಮ ಪೆಚ್ಚು ಮೋರೆ ಹಾಕಿಕೊಂಡು ಮನೆಯತ್ತ ನಡೆದರು. ಮತದಾನ ಮಾಡಲು ಉತ್ಸಾಹದಿಂದ ಪತಿ ಮಹದೇವಯ್ಯ ಜತೆಗೆ ಮಧ್ಯಾಹ್ನ 1 ಗಂಟೆಗೆ ಮತಗಟ್ಟೆಗೆ ಬಂದಿದ್ದ ಮಹದೇವಮ್ಮ ಅವರಿಗೆ ನಿರಾಶೆ ಕಾದಿತ್ತು. ಅದಾಗಲೇ ಮಹದೇವ ಮ್ಮರ ಮತವನ್ನು ಬೇರ್ಯಾರೋ ಚಲಾಯಿಸಿ ಹೋಗಿದ್ದರು, ಹೀಗಾಗಿ ಮತಗಟ್ಟೆ ಅಧಿಕಾರಿ ಗುರುತಿನ ಚೀಟಿ ತೋರಿಸಿದರೂ ಮತದಾನಕ್ಕೆ ಅವಕಾಶ ಕೊಡಲಿಲ್ಲ. ಹೀಗಾಗಿ ಪತಿ ಮತಚಲಾಯಿಸಿದ ನಂತರ ಅವರೊಂದಿಗೆ ಮಹದೇವಮ್ಮ ಮನೆಗೆ ನಡೆದರು.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.