ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ನಾಡಿನ ದುರಂತ


Team Udayavani, Nov 25, 2019, 3:00 AM IST

kannada-sha

ಮೈಸೂರು: ಕನ್ನಡ ನೂರಕ್ಕೆ ನೂರರಷ್ಟು ವೈಜ್ಞಾನಿಕ ಭಾಷೆಯಾಗಿದ್ದು, ಅತಿ ಹೆಚ್ಚು ಮಹಾಕಾವ್ಯಗಳು ರಚನೆಯಾಗಿರುವ ಭಾಷೆ ಎಂಬ ಹೆಗ್ಗಳಿಕೆ ನಮ್ಮ ಕನ್ನಡ ಭಾಷೆಗಿದೆ ಎಂದು ಕವಯಿತ್ರಿ ಡಾ.ಲತಾ ರಾಜಶೇಖರ್‌ ಹೇಳಿದರು. ನಗರದ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ ಸಭಾಂಗಣದಲ್ಲಿ ಭಾನುವಾರ ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಅಖೀಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್‌ ಆಶ್ರಯದಲ್ಲಿ ಆಯೋಜಿಸಿದ್ದ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನಾಡಿನ ದೊಡ್ಡ ದುರಂತ: ಇತ್ತೀಚಿಗೆ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಕನ್ನಡ ನಾಡಿನ ಬಹುದೊಡ್ಡ ದುರಂತ. ಇದುವರೆಗೆ 2 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆ ಮುಚ್ಚಲಾಗಿದೆ. ನಮ್ಮ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿ ಅನ್ಯ ರಾಜ್ಯದಲ್ಲಿ ತೆರೆಯಲು ಸಾಧ್ಯವೆ? ಶಾಲೆಗಳಲ್ಲಿ ಲೋಪವಿದ್ದರೆ, ಅದನ್ನು ಸರಿಪಡಿಸಬೇಕೆ ಹೊರತು ಮುಚ್ಚುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ಕನ್ನಡಿಗರು ಬದುಕಿದ್ದು, ಸತ್ತಂತೆ ಎಂದು ಬೇಸರ ವ್ಯಕ್ತಪಡಿಸಿದರು.

ನೂರಕ್ಕೆ ನೂರರಷ್ಟು ಕನ್ನಡ ವೈಜ್ಞಾನಿಕ ಭಾಷೆ: ಕನ್ನಡವು ನೂರಕ್ಕೆ ನೂರರಷ್ಟು ವೈಜ್ಞಾನಿಕ ಭಾಷೆಯಾಗಿದ್ದು, ಅತಿ ಹೆಚ್ಚು ಮಹಾಕಾವ್ಯಗಳು ರಚನೆಯಾಗಿರುವ ಭಾಷೆ ಎಂಬ ಹೆಗ್ಗಳಿಕೆಯಿದೆ. ಇಂಥಹ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆ ನಮ್ಮದು ಎಂಬುದನ್ನು ತಿಳಿದುಕೊಂಡರೆ ಯಾರು ಕನ್ನಡವನ್ನು ಕಡೆಗಣಿಸುವುದಿಲ್ಲ. ಅಖಂಡ ಕರ್ನಾಟಕದ ಕಲ್ಪನೆ ಇಲ್ಲದವರು ನಾಡನ್ನು ಇಬ್ಭಾಗಿಸುವ ಪ್ರಯತ್ನ ಮಾಡುತ್ತಿದ್ದರೆ. ತಮ್ಮ ಸ್ವಾರ್ಥ ರಾಜಕೀಯ ಕಾರಣಕ್ಕೆ ರಾಜ್ಯ ವಿಭಜನೆಯಾಗಬಾರದು. ಅಂತಹ ಯೋಚನೆ ಮಾಡಿದವರಿಗೆ ಮಹತ್ವ ನೀಡಬಾರದು ಎಂದು ಹೇಳಿದರು.

ದಸರಾ, ರಾಜ್ಯೋತ್ಸವ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌, ಕವಯತ್ರಿ ಡಾ.ಲತಾ ರಾಜಶೇಖರ್‌ಗೆ ಸಾಹಿತ್ಯ ಭೂಷಣ ಪ್ರಶಸ್ತಿ ನೀಡಲಾಯಿತು. ಸಾಹಿತಿಗಳಾದ ಚಂಪಾವತಿ ಶಿವಣ್ಣ, ವೈ.ಎಸ್‌.ಸುಬ್ರಮಣ್ಯ ಅವರಿಗೆ ಪ್ರೊ.ಎಚ್‌.ಎಸ್‌.ಕೆ.ಸಾಹಿತ್ಯ ಪ್ರಶಸ್ತಿ ಹಾಗೂ ಸಾಹಿತಿಗಳಾದ ಎ.ಹೇಮಗಂಗಾ, ಸಿದ್ದಲಿಂಗಯ್ಯ ಬನ್ನಂಗಾಡಿ, ಕವಯಿತ್ರಿ ಶಿವರಂಜಿನಿ ಅವರಿಗೆ ದಸರಾ ಹಾಗೂ ರಾಜ್ಯೋತ್ಸವ ಕಾವ್ಯಪುರಸ್ಕಾರ ಪ್ರದಾನ ಮಾಡಲಾಯಿತು.

ಸಾಹಿತಿಗಳಾದ ಡಾ.ಜೆ.ಲೋಹಿತ್‌, ರತ್ನ ಚಂದ್ರಶೇಖರ್‌, ಲೇಖಕರಾದ ಜೆ.ಲೋಕೇಶ್‌, ನಾ.ನಾಗಚಂದ್ರ, ಕವಿ ರಾಘವೇಂದ್ರಕುಮಾರ್‌, ರೈತಪರ ಹೋರಾಟಗಾರ ಗರುಡಗಂಭ ಸ್ವಾಮಿ, ತಾ.ಶಿಕ್ಷಕ ಸಂಘ ಅಧ್ಯಕ್ಷ ಪ್ರಸನ್ನಕುಮಾರ್‌ ಬಿ.ವಿ., ದೊಡ್ಡಮಂಡಿಗನಹಳ್ಳಿ ರೋಟರಿ ಸನ್‌ ರೈಸ್‌ ಮಾಜಿ ಅಧ್ಯಕ್ಷ ಎಂ.ಸಿ.ರಾಜು, ಗಾಯಕರಾದ ಮುತ್ತುಲಕ್ಷ್ಮೀರಾಮಚಂದ್ರ, ಡಾ.ಕಿರಣ್‌ಕುಮಾರ್‌, ಪತ್ರಕರ್ತ ಆರ್‌.ಕೆ.ಬಾಲಚಂದ್ರ,

ಸಮಾಜ ಸವಕ ಮೃತ್ಯುಂಜಯ ಬಾಬು ಪಾಟೀಲ, ಬೆಳಗಾವಿ ಅಳಗವಾಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುವರ್ಣ ರಮೇಶ್‌ ಕೊಳವಿ, ಸಾಹಿತಿ ಡಾ.ಎಸ್‌.ಪುಟ್ಟಪ್ಪ ಮುಡಿಗುಂಡ, ರಮ್ಯಭೂಮಿ, ಸೀತಾರಾಮ ಕಣೇಕಲ್‌, ಎನ್‌.ಶಂಕರರಾವ್‌, ಕವಿ ತು.ಮ.ಬಸವರಾಜು, ಹವ್ಯಾಸಿ ನಟ ಎಸ್‌.ಪ್ರಭಾಕರ್‌, ಬಹುಮುಖ ಪ್ರತಿಭೆಗಳಾದ ಅನನ್ಯ, ಅಮನ್‌ ಕರ್ಕೆರಾ ಮಂಗಳೂರು, ಸಮಾಜ ಸೇವಕ ಚರಣ್‌ಶೆಟ್ಟಿ ಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂರು ಕೃತಿ ಬಿಡುಗಡೆ: ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅವರು ಡಾ.ಭೇರ್ಯ ರಾಮಕುಮಾರ್‌ ಸಂಪಾದಕತ್ವದ “ಕಾವ್ಯ ದಸರಾ’ ಕೃತಿಯನ್ನು ಹಾಗೂ ಸಾಹಿತಿ ಸಿ.ಪಿ.ಕೆ ಅವರು ಡಾ.ಜೆ.ಲೋಹಿತ್‌ ಅವರ “ವ್ಯಕ್ತಿತ್ವ ವಿಕಸದರ್ಶನ’ ಕೃತಿಯನ್ನು, ಸಮಾಜ ಸೇವಕ ಡಾ.ಕೆ.ರಘುರಾಂ ಅವರು ಬಿ.ಬಿ.ಲಕ್ಷ್ಮೀಗೌಡ ಅವರ “ಸುತ್ತ-ಮುತ್ತ-2′ ಕೃತಿ ಬಿಡುಗಡೆಗೊಳಿಸಿದರು.

ದಸರಾ ಹಾಗೂ ರಾಜ್ಯೋತ್ಸವ ನೆನಪಿನ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಕವಿ ಬಂಡಿಹೊಳೆ ಮಂಜುನಾಥ್‌ ಉದ್ಘಾಟಿಸಿದರು. ಕವಯಿತ್ರಿ ಶಾಂತಾ ಕುಂಟನಿ ಅಧ್ಯಕ್ಷತೆವಹಿಸಿದ್ದರು. ಕವಿಗಳಾದ ಎನ್‌.ವಿ.ರಮೇಶ್‌, ರಾಧಾಕೃಷ್ಣ, ಗಂಗಾಚಾರಿ, ಹೆಗ್ಗಂದೂರು ಪ್ರಭಾಕರ, ವೈ.ವಿ.ಯಶೋಧಾ ರಾಮಕೃಷ್ಣ, ಸೀತಾರಾಮ ಕಣೇಕಲ್‌, ಸೌಗಂಧಿಕಾ ಜೋಯಿಸ್‌, ಜಯಶ್ರೀ ಡಾ.ಕೃಷ್ಣ, ಜಿ.ಟಿ.ಸಂದೇಶ್‌, ವಿ.ವೆಂಕಟಯ್ಯ, ಡಾ.ಭೇರ್ಯ ರಾಮಕುಮಾರ್‌, ಸಾಹಿತಿ ಡಾ.ಪುಷ್ಪ ಅಯ್ಯಂಗಾರ್‌, ಪ್ರೊ.ಬಸವರಾಜು ಟಿ.ಬೆಳಗಟ್ಟಿ, ಚಿಂತಕ ಎಚ್‌.ಬಿ.ರಾಜಶೇಖರ್‌, ಎಚ್‌.ಆನಂದಕುಮಾರ್‌, ಡಾ.ರಾಜಗೋಪಾಲ್‌ ಭಟ್‌, ಎಂ.ಸಿ.ರಾಜು, ಅರ್ಜುನಹಳ್ಳಿ ರಾಮಪ್ರಸಾದ್‌ ಉಪಸ್ಥಿತರಿದ್ದರು.

ದಸರಾ ಹಾಗೂ ಕನ್ನಡ ರಾಜ್ಯೋತ್ಸವ ಕಾವ್ಯ ಪುರಸ್ಕೃತರು: ಹೊರನಾಡ ಕನ್ನಡಿಗರ ವಿಭಾಗ: ಸೀಮಾ ಕುಲಕರ್ಣಿ(ಮಲೇಶಿಯಾ), ಡಾ.ಆನಂದ ದೇಶಪಾಂಡೆ(ಲಂಡನ್‌), ಕಿಶೋರ್‌ ಎಕ್ಕಾರ್‌(ದುಬೈ), ಶಾರದಾ ವಿ.ಅಂಚನಾ(ಮುಂಬೈ), ಪ್ರಭಾಕರ ಶೆಟ್ಟಿ ಥಾಣೆ(ಮುಂಬೈ), ಕವಯತ್ರಿಯರ ವಿಭಾಗ: ಅಕ್ಷಯ ಆ ಶೆಟ್ಟಿ(ಮಂಗಳೂರು), ಶಾಂತ ಕೆ.ಹೊಂಬಳ(ಧಾರವಾಡ), ಭಾಗ್ಯರೇಖಾ ದೇಶಪಾಂಡೆ(ಹುಬ್ಬಳ್ಳಿ), ಅರ್ಚನ ಎಚ್‌(ಬೆಂಗಳೂರು), ಎನ್‌.ಆರ್‌. ರೂಪಶ್ರೀ(ಮೈಸೂರು).

ಹಿರಿಯ ಕವಿಗಳ ವಿಭಾಗ: ವೈ.ಎಂ.ರಘುನಂದನ್‌(ಮೈಸೂರು), ಕವಿಗಳ ವಿಭಾಗ: ನಾಗರಾಜು ಹಂಪಸಾಗರ(ಬೆಳಗಾವಿ), ಚಿದಾನಂದ ಹ.ಭಜಂತ್ರಿ(ಧಾರವಾಡ), ಡಾ.ಸೋಮಲಿಂಗಪ್ಪ ರಾ.ಚಿಕ್ಕಳ್ಳನವರ (ಹಾವೇರಿ), ಕೆ.ವಿ.ಲಕ್ಷ್ಮಣಮೂರ್ತಿ(ಬೆಂಗಳೂರು), ಎಂ.ಡಿ.ಅಯ್ಯಪ್ಪ(ಮಂಡ್ಯ), ವಿಶೇಷ ಚೇತನ ಕವಿಗಳ ವಿಭಾಗ: ಅನುಸೂರ ಎಂ.ಪಿ.(ದಾವಣೆಗೆರೆ), ಹಣಮಂತರವ್‌ ಘಂಟೇಕರ್‌(ಗುಲ್ಬರ್ಗ) ಇವರನ್ನು ಗೌರವಿಸಲಾಯಿತು.

ಟಾಪ್ ನ್ಯೂಸ್

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.