ಸಂವಿಧಾನವೇ ಬಹುದೊಡ್ಡ ಧರ್ಮ ಗ್ರಂಥ
Team Udayavani, Nov 9, 2018, 12:19 PM IST
ಮೈಸೂರು: ಸಂವಿಧಾನವೇ ನಮ್ಮ ಬಹುದೊಡ್ಡ ಧರ್ಮ ಗ್ರಂಥ, ಅದನ್ನು ನಾವು ಉಳಿಸಿಕೊಳ್ಳಬೇಕೇ ಹೊರತು ಅನ್ಯರ ಧರ್ಮವನ್ನು ತಲೆಯ ಮೇಲೆ ಹೊತ್ತುಕೊಂಡು ಮೆರೆಯಬಾರದು ಎಂದು ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.
ಪುರಭವನದಲ್ಲಿ ಭಾರತ ಮೂಲನಿವಾಸಿಗಳ ಟ್ರಸ್ಟ್ ಏರ್ಪಡಿಸಿದ್ದ ದಾನವ ಚಕ್ರವರ್ತಿಗಳ ಸ್ಮರಣೋತ್ಸವ-2018 ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹೊರಗಿನಂದ ಬಂದವರು ಇಲ್ಲಿದ್ದವರನ್ನು ಒಕ್ಕಲೆಬ್ಬಿಸಿದ ಕಥೆಯೇ ರಾಮಾಯಣ. ಹೊಲದ ಒಡೆಯರು ಹೊಲ ಕಳೆದುಕೊಂಡ ಕಥೆ ಅದು. ವರ್ಣಾಶ್ರಮ ಧರ್ಮ ಎಲ್ಲವನ್ನೂ ಮರೆಮಾಚಿ ತನ್ನ ಹಿತಾಸಕ್ತಿಗೆ ಅನುಗುಣವಾಗಿ ಕಟ್ಟಿದ ಕಥೆ ರಾಮಾಯಣ. ಅದನ್ನೇ ನಾವು ಕೇಳಿಕೊಂಡು ಬೆಳೆದಿದ್ದೇವೆ.
ಮಂಟೇಸ್ವಾಮಿ ಮೇಲ್ವರ್ಗದವರ ಅನಾಚಾರಗಳ ವಿರುದ್ಧ ಬಂಡೆದ್ದು ಛಿದ್ರಗೊಳಿಸಿದರು. ಸಂಸ್ಕೃತಿ ಉಳಿಯಬೇಕಾದರೆ ಕೆಳ ಸಮುದಾಯಗಳ ಜನರಿಂದ ಮಾತ್ರ ಸಾಧ್ಯ. ಭಕ್ತಿ ಎನ್ನುವುದಕ್ಕೆ ವಿಕಾಸ ಮತ್ತು ಗುಲಾಮತನ ಎಂಬ ಎರಡು ಅರ್ಥವಿದೆ. ಗುಲಾಮತನದ ಭಕ್ತಿಯನ್ನು ಪ್ರದರ್ಶಿಸಬಾರದು ಎಂದು ಹೇಳಿದರು.
ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ನಂಜುಂಡಸ್ವಾಮಿ ಮಾತನಾಡಿ, ಜಾತಿ ವ್ಯವಸ್ಥೆ ಒಂದು ಸುಳ್ಳು ಸೃಷ್ಟಿ. ಶೂದ್ರರನ್ನು ಕೀಳಾಗಿ ವಿಭಜಿಸಿ ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿದವರನ್ನು ರಾಕ್ಷಸರೆಂದು ಬಿಂಬಿಸಲಾಗಿದೆ. ಶೂದ್ರರು ರಾಕ್ಷಸರಲ್ಲ, ಈ ದೇಶದ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದ ಮಹಾ ಪೋಷಕರು ಎಂದರು.
ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ದೀಪಾವಳಿ ಆಚರಣೆಯ ಹಿಂದಿನ ಸತ್ಯವನ್ನು ತಿಳಿಸಲು ದಾನವ ಚಕ್ರವರ್ತಿಗಳ ಸ್ಮರಣೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ನಮ್ಮ ಮೂಲ ಸಂಸ್ಕೃತಿಯನ್ನು ಜನರಿಗೆ ತಿಳಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಹಾ ಬೋಧಿ ಮಿಷನ್‌ನ ಭಂತೆ ಬುದ್ಧ ಪ್ರಕಾಶ್ ಸಾನಿಧ್ಯವಹಿಸಿದ್ದರು. ಚಿಂತಕ ಡಾ.ಕೃಷ್ಣಮೂರ್ತಿ ಚಮರಂ, ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಸಿದ್ದಶೆಟ್ಟಿ, ಮಾಜಿ ಮೇಯರ್ ಪುರುಷೋತ್ತಮ್, ದಸಂಸ ಮುಖಂಡ ಹರಿಹರ ಆನಂದಸ್ವಾಮಿ, ಲೇಖಕ ಸಿದ್ದಸ್ವಾಮಿ, ಜಿ.ಎಂ.ಗಾಡ್ಕರ್, ದ್ಯಾವಪ್ಪ ನಾಯಕ ಹಾಜರಿದ್ದರು.
ಮಳವಳ್ಳಿ ತಾಲೂಕಿನ ಹಳ್ಳಿಯೊಂದರಲ್ಲಿ ರಾವಣೇಶ್ವರ ದೇವಸ್ಥಾನವಿದೆ. ರಾವಣನ ಪೂಜಿಸುವ ಒಕ್ಕಲುತನವಿದೆ. ಹಾಸನಾಂಬ ದೇವಸ್ಥಾನದಲ್ಲಿ ರಾವಣನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮೇಲ್ವರ್ಗದ ಒಂದು ಸಮುದಾಯವನ್ನು ಬಿಟ್ಟರೆ ಉಳಿದವರೆಲ್ಲಾ ರಾವಣನನ್ನು ಪೂಜಿಸುತ್ತಾರೆ. ಹೀಗಿರುವಾಗ ಆತನ ಪ್ರತಿಕೃತಿ ದಹಿಸುವುದೂ ನೋವು ತರುತ್ತದೆ.
-ಡಾ.ಹಿ.ಶಿ.ರಾಮಚಂದ್ರೇಗೌಡ, ಜಾನಪದ ವಿದ್ವಾಂಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.