ಸಂವಿಧಾನ, ಕಾನೂನು ತಿಳಿಯದೆ ಅಪರಾಧ: ಎಸ್‌ಪಿ
Team Udayavani, Mar 1, 2017, 12:46 PM IST
ಹುಣಸೂರು: ದೇಶದ ಬಹುತೇಕ ಮಂದಿ ಇಂದಿಗೂ ನಮ್ಮ ದೇಶದ ಸಂವಿಧಾನ, ಕಾನೂನು ಕಾಯ್ದೆಗಳನ್ನು ಅರಿಯದ ಪರಿಣಾಮ ಪ್ರತಿ ವರ್ಷ ಶೇ 6-8ರಷ್ಟು ಪ್ರಕರಣಗಳು ಹೆಚ್ಚುತ್ತಿವೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್ ಆತಂಕ ವ್ಯಕ್ತಪಡಿಸಿದರು.
ನಗರದ ಶಿಕ್ಷಕರ ಭವನದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರಿಗಾಗಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಮತ್ತು ಪೋಕ್ಸೊ ಕಾಯ್ದೆ-2012 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಇದಕ್ಕೆ ಶಾಲಾ ಆವರಣದಲ್ಲಿ ಆಗುವ ಘಟನೆಗಳಿಗೆ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ನೇರ ಹೊಣೆಗಾರರಾಗಲಿದ್ದಾರೆ. ಪೋಕ್ಸೊ ಕಾಯ್ದೆಯಲ್ಲಿ ತೊಂದರೆಗೊಳಗಾದ ಮಗುವಿನ ಹೇಳಿಕೆ ಅಂತಿಮ. ಶಾಲಾ ಆವರಣದಲ್ಲಿ ಘಟನೆಗಳು ಸಂಭವಿಸಿದಲ್ಲಿ ಕೂಡಲೇ ದೂರು ದಾಖಲಿಸಬೇಕು. ಮಕ್ಕಳ ಜವಾಬ್ದಾರಿಯನ್ನು ಪೋಷಕರು, ಶಿಕ್ಷಕರು ಸಮಪಾಲಾಗಿ ಹೊರಬೇಕು ಎಂದರು.
ದತ್ತುಗ್ರಾಮ: ಎಚ್.ಡಿ.ಕೋಟೆಯ ಎನ್.ಬೇಗೂರು, ಕಾರಾಪುರ ಗ್ರಾಮದ ಶಾಲೆಯನ್ನು ದತ್ತು ಪಡೆದಿದ್ದು, ಈ ಶಾಲೆಗಳಿಂದ ಕನಿಷ್ಟ 10 ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮಹತ್ತರ ಜವಾಬ್ದಾರಿ ಹೊರಲಿದೆ. ಮುಂದಿನ ದಿನಗಳಲ್ಲಿ ಪ್ರತಿ ಗುರುವಾರ ಆಯಾ ಸರಹದ್ದಿನ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ತೆರೆದ ಮನೆ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಬಗ್ಗೆ ಇರುವ ಭಯವನ್ನು ದೂರಗೊಳಿಸಲಿದ್ದಾರೆಂದರು.
ಕನಕಪುರದ ಹಿರಿಯ ನ್ಯಾಯವಾದಿ ಗೋಪಾಲಗೌಡ ಪೋಕ್ಸೊ ಕಾಯ್ದೆ-2012ರ ಕುರಿತು ಮಾಹಿತಿ ಒದಗಿಸಿದರು. ಹುಣಸೂರು ಎಎಸ್‌ಪಿ ಹರೀಶ್‌ಪಾಂಡೆ ಮಾತನಾಡಿದರು. ಡಿಡಿಪಿಐ ಕಚೇರಿಯ ಇಒ ನಾಗರಾಜು, ಬಿಇಒಗಳಾದ ಆರ್.ಕರೀಗೌಡ, ರೇವಣ್ಣ, ಉದಯಕುಮಾರ್, ಕೇಂಬ್ರಿಡ್ಜ್ ಶಾಲೆಯ ಮುಖ್ಯಸ್ಥ ತಮ್ಮಣ್ಣೇಗೌಡ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಯ್ಯ, ಹುಣಸೂರು ಬಿಇಒ ಬಿ.ಕೆ.ಶಿವಣ್ಣ, ಸಿಆರ್‌ಪಿ, ಬಿಆರ್‌ಪಿ, ಬಿಆರ್‌ಸಿ, ಇಸಿಒ, ಹಾಗೂ ಮುಖ್ಯಶಿಕ್ಷಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.