ಬಿಳಿಸುಳಿ ರೋಗಕ್ಕೆ ಸಿಲುಕಿದ ಮುಸುಕಿನ ಜೋಳ


Team Udayavani, Jun 17, 2017, 1:21 PM IST

mys2.jpg

ಹುಣಸೂರು: ಕಳೆದೆರಡು ವರ್ಷಗಳಿಂದ ಬರದಿಂದ ಕಂಗೆಟ್ಟಿದ್ದ ರೈತರು, ಈ ಬಾರಿ ಮುಂಗಾರು ಬೇಗ ಆರಂಭವಾಗಿದ್ದು ಜೋಳ ಬಿತ್ತನೆ ಮಾಡಿದ್ದರು, ಆದರೆ ಇದೀಗ ಬಿಳಿಕೆರೆ ಹಾಗೂ ಕಸಬಾ ಹೋಬಳಿಗಳಲ್ಲಿ ಬೆಳೆ ಬೆಳೆಯಲಾರಂಭಿಸುತ್ತಿದ್ದಂತೆ ಬಿಳಿಸುಳಿ ರೋಗಕ್ಕೆ ಮುಸುಕಿನ ಜೋಳ ಸಿಲುಕಿ ರೈತರಲ್ಲಿ ಆತಂಕಕ್ಕೆ ಮನೆ ಮಾಡಿದೆ.

ತಾಲೂಕಿನ ಬಿಳಿಕೆರೆ ಹೋಬಳಿಯ ಕರಿಮುದ್ದನಹಳ್ಳಿ, ಸಿಂಗರಮಾರನಹಳ್ಳಿ ಗ್ರಾಪಂ ಹಾಗೂ ಕಸಬಾ ಹೋಬಳಿಯ ಉಯಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿನ ರೈತರು ಹೊಲಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲ್ಪಟ್ಟ ಮುಸುಕಿನ ಜೋಳಕ್ಕೆ ಬಿಳಿಸುಳಿ (ಬೂಜು) ರೋಗ ಕಾಣಿಸಿಕೊಂಡಿದ್ದು, ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ.

ಹಲವರ ಜಮೀನಿನ ಇಡೀ ಬೆಳೆಯೇ ಹಳದಿ ಬಣ್ಣಕ್ಕೆ ತಿರುಗಿದ್ದು, ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುವ ಹಾಗೂ ಒಣಗಿ ಹೋಗುವ ಆತಂಕ ರೈತರದ್ದು. ಕಳೆದ ಎರಡು ವರ್ಷಗಳಿಂದ ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತರು, ಬೆಳೆಗಳು ಮಳೆ ಇಲ್ಲದೆ ಒಣಗಿ ಸಾಕಷ್ಟು ನಷ್ಟ ಉಂಟಾಗಿತ್ತು.

ಈ ಬಾರಿ ಮಳೆ ಬೇಗ ಬಂದು ಉತ್ತಮ ಬೆಳೆ ಬೆಳೆಯಬಹುದೆಂಬ ಸಂತಸದ ನಡುವೆಯೇ ಮುಸುಕಿನ ಜೋಳದ ಬೆಳೆಗೆ ಬಿಳಿಸುಳಿರೋಗ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ, ಕೃಷಿ ಇಲಾಖೆ ಈ ವಿಚಾರದಲ್ಲಿ ರೈತರ ನೆರವಿಗೆ ಬರಬೇಕೆಂದು ಕೃಷಿಕರು ಒತ್ತಾಯಿಸಿದ್ದಾರೆ.

ಮೋತೆ ಒಡೆಯದ ಬೀತಿ: ಸಾಕಷ್ಟು ಜಮೀನಲ್ಲಿ ಬೆಳೆದಿರುವ ಮುಸುಕಿನ ಜೋಳದ ಬೆಳೆಗೆ ಬಿಳಿಸುಳಿ ರೋಗದಿಂದ ಇದೀಗ ಬರದಲ್ಲಿ ಬೆಳೆದ ಬೆಳೆಯೂ ಕಾಯಿಕಟ್ಟದ(ಮೋತೆ ಒಡೆಯದ) ಬೀತಿ ರೈತರದ್ದಾಗಿದೆ.

ಹವಾಮಾನ ವೈಪರಿತ್ಯ ಕಾರಣ: ಈ ಬಗ್ಗೆ ಮಾಹಿತಿ ನೀಡಿರುವ ಕೃಷಿ ಇಲಾಖೆ ವಾತಾವರಣದಲ್ಲಿ ತೇವಾಂಶ ಜಾಸ್ತಿ ಹೊಂದಿದ್ದು ಆಗಾಗ ಬಿಸಿಲು ಕಾಣಿಸಿ ಕೊಳ್ಳುವುದರಿಂದ ಇಂತಹ ಹವಾಮಾನ ವೈಪರಿತ್ಯತದಿಂದ ಪೆರೊ°àಸ್ಕೆ ರೋನ್ಪೋರ ಸೊರಿ ಎಂಬ ಶಿಲೀಂದ್ರ(ಕೀಟ)ದಿಂದ ಎಲೆಗಳ ತಳಭಾಗದಲ್ಲಿ ಬಿಳಿಯ ಶಿಲೀಂದ್ರದ ಬೆಳವಣಿಗೆ ಕಂಡುಬರುತ್ತದೆ ಹಾಗೂ ಸಸಿಗಳು ಹಳದಿ ಬಣ್ಣಕ್ಕೆ ತಿರುಗಿ ಗಿಡದ ಬೆಳವಣಿಗೆ ಕುಂಟಿತವಾಗುತ್ತದೆ.

ರೋಗ ನಿರ್ವಹಣೆಗೆ ಕ್ರಮ: ಬಿಳಿಸುಳಿ ರೋಗ ಕಾಣಿಸಿಕೊಂಡ ಬೆಳೆಗೆ ಪ್ರತಿ ಲೀ.ನೀರಿಗೆ ಮೆಟಲಾಕ್ಸಿಲ್‌ ಶೇ.4 ಮತ್ತು ಮ್ಯಾಂಕೊಜೆಬ್‌ ಶೇ.64 ಸಂಯುಕ್ತ ಶಿಲೀಂದ್ರನಾಶಕವನ್ನು 2 ಗ್ರಾಂ ಬೆರೆಸಿ 1 ಎಕರೆಗೆ 300 ರಿಂದ 400 ಲೀ.ದ್ರಾವಣವನ್ನು ತಯಾರಿಸಿ, ತಿಂಗಳಿಗೆ ಎರಡು ಬಾರಿ ಸಿಂಪಡಣೆ ಮಾಡುವುದರಿಂದ ಬೆಳೆ ರೋಗದಿಂದ ಕಾಪಾಡಿಕೊಳ್ಳಬಹುದು.

ಮುನ್ನೆಚ್ಚರಿಕೆ ಕ್ರಮ: ಏಕಬೆಳೆ ಪದ್ಧತಿ ಅನುಸರಿಸದೆ ಬೆಳೆ ಪರಿವರ್ತನೆ ಮಾಡಬೇಕು. ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 5 ಕೆ.ಜಿ. ಜಿಂಕ್‌ ಸಲ್ಫೆàಟ್‌ನ್ನು ಮಣ್ಣಿನಲ್ಲಿ ಸೇರಿಸುವುದು. ಶಿಫಾರಸು ಮಾಡಿರುವ ಪ್ರಕಾರ ಪ್ರತಿ ಎಕರೆಗೆ 30 ಕೆ.ಜಿ. ಪೊಟ್ಯಾಷ್‌ ಗೊಬ್ಬರ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ  ಸಂಪರ್ಕಿಸಿರೆಂದು ಸಹಾಯಕ ನಿರ್ದೇಶಕ ವೆಂಕಟೇಶ್‌ ತಿಳಿಸಿದ್ದಾರೆ.

* ಸಂಪತ್‌ ಕುಮಾರ್‌

ಟಾಪ್ ನ್ಯೂಸ್

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.