ಸಾಂಸ್ಕೃತಿಕ ನಗರಿ ತುಂಬೆಲ್ಲಾ ಶಿವನಾಮ ಸ್ಮರಣೆ


Team Udayavani, Mar 5, 2019, 7:49 AM IST

m1-samskru.jpg

ಮೈಸೂರು: ಮಹಾ ಶಿವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ನಗರ ಮೈಸೂರಿನ ತುಂಬೆಲ್ಲಾ ಶಿವನಾಮ ಸ್ಮರಣೆ ಜೋರಾಗಿತ್ತು. ಆಸ್ತಿಕರು ಬೆಳಗ್ಗೆಯೇ ಸ್ನಾನ ಮುಗಿಸಿ, ಮಡಿಯುಟ್ಟು, ಉಪವಾಸವಿದ್ದು ಕುಟುಂಬ ಸಮೇತ ಶಿವ ದೇವಾಲಯಗಳಿಗೆ ತೆರಳಿ ದರ್ಶನ ಪಡೆದು, ಭಕ್ತಿಭಾವ ಮೆರೆದರು. ನಗರದ ಶಿವ ದೇವಸ್ಥಾನಗಳಲ್ಲಿ ಭಕ್ತಾದಿಗಳು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. 

ಕಾಮ ಕಾಮೇಶ್ವರಿ ದೇವಸ್ಥಾನ: ಅರಮನೆ ಮುಜರಾಯಿ ದೇವಸ್ಥಾನಗಳಲ್ಲಿ ಒಂದಾದ ರಾಮಾನುಜ ರಸ್ತೆಯಲ್ಲಿರುವ ಕಾಮ ಕಾಮೇಶ್ವರಿ ದೇವಾಲಯ, ಗುರುಕುಲ ದೇವಾಲಯ, ಚಾಮುಂಡಿ ಬೆಟ್ಟದ ಮಹಾಬಲೇಶ್ವರ ದೇವಸ್ಥಾನ, ಒಂಟಿ ಕೊಪ್ಪಲು ಮತ್ತು ಕೆ.ಜಿ.ಕೊಪ್ಪಲು ಹಾಗೂ ನಾರಾಯಣ ಶಾಸ್ತ್ರಿ ರಸ್ತೆಯ ಚಂದ್ರಮೌಳೇಶ್ವರ ದೇವಾಲಯ,

ಲಷ್ಕರ್‌ ಮೊಹಲ್ಲಾದ ಮಹದೇಶ್ವರ ದೇವಸ್ಥಾನ, ನಾರಾಯಣ ಶಾಸ್ತ್ರಿ ರಸ್ತೆಯ ಅಮೃತೇಶ್ವರ ದೇವಸ್ಥಾನ, ಶ್ರೀರಾಂಪುರಂದಲ್ಲಿರುವ ಶಿವದೇವಾಲಯ, ಬೋಗಾದಿಯ ನಾಗಲಿಂಗೇಶ್ವರ ಭೋಗೇಶ್ವರ ಶ್ರೀಸಪ್ತಮಾತೃಕಾ ದೇವಸ್ಥಾನ ಸೇರಿದಂತೆ ನಗರದ ಹಲವು ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮುಂಜಾನೆಯಿಂದಲೇ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ,

ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ದೇವಸ್ಥಾನದ ಪ್ರಾಕಾರದಲ್ಲಿ ಉತ್ಸವ, ಮಹಾ ಮಂಗಳಾರತಿ ನಡೆಯಿತು. ಬೆಳಗ್ಗೆ 10 ರಿಂದ ಮಂಗಳವಾರ ಮುಂಜಾನೆ 5ವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದೇವಾಲಯಗಳಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಗಣಪತಿ ಆಶ್ರಮದಲ್ಲಿ ಪೂಜೆ: ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಬೆಳಗ್ಗೆ 6.30ಕ್ಕೆ ಸಚ್ಚಿದಾನಂದೇಶ್ವರ ಮತ್ತು ವಿಶ್ವೇಶ್ವರ ಶಿವಲಿಂಗಗಳಿಗೆ ಅಭಿಷೇಕ, 8ಕ್ಕೆ ಶ್ರೀಚಕ್ರಪೂಜೆ, 10ಕ್ಕೆ ಏಕಾದಶ ರುದ್ರಹೋಮ, ಮಧ್ಯಾಹ್ನ 12.30ಕ್ಕೆ ಹೋಮ ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ, ಸಂಜೆ 6ಕ್ಕೆ ಸ್ವಾಮೀಜಿಯಿಂದ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ರುದ್ರಾಭಿಷೇಕ,

7ಕ್ಕೆ ಭಕ್ತರಿಂದ ಶಿವಲಿಂಗಕ್ಕೆ ಸಹಸ್ರ ಕಲಶಾಭಿಷೇಕ, ರಾತ್ರಿ 10ಕ್ಕೆ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ 11ಬಾರಿ ರುದ್ರಾಭಿಷೇಕ ಮತ್ತು ವಿವಿಧ ಅಲಂಕಾರ ನಡೆಯಿತು. ಬಳಿಕ ಜಾಗರಣೆ ಪ್ರಯುಕ್ತ ಮಲ್ಲಾದಿ ಸೂರಿಬಾಬು  ಮತ್ತು ಮಲ್ಲಾದಿ ಸಹೋದರರಾದ ಶ್ರೀರಾಮ್‌ ಮತ್ತು ರವಿಕುಮಾರ್‌ರಿಂದ ಶಿವಸ್ಮರಣ ಕರ್ನಾಟಕ ಸಂಗೀತ ಗಾಯನ, ಅಮೃತ ವೆಂಕಟೇಶ್‌ರಿಂದ ಕರ್ನಾಟಕ ಸಂಗೀತ ಗಾಯನ ನಡೆದರೆ, ಮಧ್ಯರಾತ್ರಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ಶಿವಭಜನೆ ನಡೆಯಿತು.

ಹುಲಿವಾಹನ, ಹಾಲ್ಹರವಿ: ಶ್ರೀಮಲೆ ಮಹದೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರ ವತಿಯಿಂದ 18ನೇ ಹುಲಿವಾಹನ ಹಾಗೂ ಹಾಲ್ಹರವಿ ಮೆರವಣಿಗೆ ನಡೆಯಿತು. ವೀರನಗೆರೆ ಸಮೀಪದ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಾಲ್ಹರವಿ ಕಲಶ ಪೂಜೆ ಹಾಗೂ ಮಹಾ ಮಂಗಳಾರತಿ ನಂತರ ಹೊರ ಮೆರವಣಿಗೆ ಜರುಗಿದರೆ, ಸೇಂಟ್‌ ಮೇರಿಸ್‌ ರಸ್ತೆ ಮೂಲಕ ಮಂಗಳ ವಾದ್ಯದೊಡನೆ ಮಹದೇಶ್ವರ ಸ್ವಾಮಿ ಹುಲಿವಾಹನ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. 

ಬಿಗಿ ಬಂದೋಬಸ್ತ್: ದೇವಾಲಯಗಳಲ್ಲಿ ದರ್ಶನದ ವೇಳೆ ನೂಕುನುಗ್ಗಲು ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿ, ಬ್ಯಾರಿಕೇಡ್‌ ಅಳವಡಿಸಿ,ಮಹಿಳಾ ಪೊಲೀಸರನ್ನು ನಿಯೋಜಿಸಿ ಅಗತ್ಯ ಕ್ರಮಕೈಗೊಂಡಿದ್ದರು. ವಾಹನಗಳನ್ನು ನಿಲುಗಡೆಗೆ ದೊಡ್ಡಕೆರೆ ಮೈದಾನ, ಅಂಬಾವಿಲಾಸ ಪಾರ್ಕಿಂಗ್‌, ಕಾಡಾ ಕಚೇರಿ ಕಾಂಪೌಂಡ್‌, ವರಾಹದ್ವಾರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. 

ಪ್ರಸಾದ ವಿತರಣೆ: ಅರಮನೆ ವೀಕ್ಷಿಸಲು ಬಂದಿದ್ದ ಕೇರಳ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳ ಪ್ರವಾಸಿಗರು ಸಹ ದೇವಸ್ಥಾನಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆಯುತ್ತಿದ್ದದ್ದು ಕಂಡುಬಂತು. ದೇವರ ದರ್ಶನ ಪಡೆದು ಬಂದವರಿಗೆ ಪುಳಿಯೊಗರೆ ವಿತರಣೆ ಮಾಡಲಾಯಿತು.

ಬಿಲ್ವಪತ್ರೆಗೆ ಬೇಡಿಕೆ: ಮಹಾ ಶಿವರಾತ್ರಿಯಂದು ಶಿವನಿಗೆ ಬಿಲ್ವಪತ್ರೆ ಅರ್ಪಿಸಿ ಪೂಜೆ ಸಲ್ಲಿಸುವುದರಿಂದ ಬಿಲ್ವಪತ್ರೆಗೆ ಭಾರೀ ಬೇಡಿಕೆ ಕಂಡುಬಂತು. ನಗರದ ದೇವರಾಜ ಮಾರುಕಟ್ಟೆ, ಸಯ್ನಾಜಿರಾವ್‌ರಸ್ತೆ, ಅಗ್ರಹಾರ ವೃತ್ತ, ದಿವಾನ್ಸ್‌ರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಿಲ್ವಪತ್ರೆ ಮಾರಾಟ ಜೋರಾಗಿತ್ತು.

ಪ್ರಸಾದ ಪರಿಶೀಲನೆ: ಸುಳ್ವಾಡಿ ಕಿಚ್‌ಗುತ್‌ ಮಾರಮ್ಮ ದೇವಸ್ಥಾನದಲ್ಲಿನ ವಿಷಪ್ರಸಾದ ದುರಂತ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳು ಮಹಾ ಶಿವರಾತ್ರಿ ಪ್ರಯುಕ್ತ ಸಾರ್ವಜನಿಕವಾಗಿ ಪ್ರಸಾದ ವಿತರಣೆಗೆ ತಯಾರಿ ನಡೆಸುವ ಸ್ಥಳದಲ್ಲಿ ಬಳಸುವ ನೀರು, ಗುಣಮಟ್ಟದ ಪದಾರ್ಥಗಳ ಉಪಯೋಗ ಸೇರಿದಂತೆ ಇತರ ಎಲ್ಲಾ ರೀತಿಯ ಸ್ವತ್ಛತೆಯನ್ನು ಪರಿಶೀಲನೆ ಮಾಡಲಾಯಿತು ಎಂದು ಮಹಾ ನಗರಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್‌ ತಿಳಿಸಿದರು.

ಟಾಪ್ ನ್ಯೂಸ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.