ಉಪ ಚುನಾವಣೆ ಸೋಲು ನೈತಿಕ ಸೋಲಲ್ಲ
Team Udayavani, Jan 23, 2018, 12:25 PM IST
ನಂಜನಗೂಡು: ಕಳೆದ ಉಪ ಚುನಾವಣೆಯ ಸೋಲು ನೈತಿಕತೆಯ ಸೋಲಲ್ಲ, ಅಧಿಕಾರ ಹಾಗೂ ಹಣ, ಹೆಂಡದಿಂದಾದ ಸೋಲು ಎಂದು ವ್ಯಾಖ್ಯಾನಿಸ ಶ್ರೀನಿವಾಸ್ ಪ್ರಸಾದ್, 68 ಸಾವಿರಕ್ಕೂ ಹೆಚ್ಚು ಜನ ಹಣದ ವ್ಯಾಮೋಹವನ್ನು ಧಿಕ್ಕರಿಸಿ, ಸ್ವಾಭಿಮಾನದ ಪರವಾಗಿ ಮತ ನೀಡಿದ್ದಾರೆ ಎಂದರು.
ನಂಜನಗೂಡು ಸಮಾವೇಶದ ವೇದಿಕೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಇಡೀ ಜೆಡಿಎಸ್ ಪಕ್ಷವನ್ನು ಖರೀದಿಸಿ ಕಾಂಗ್ರೆಸ್ ಚುನಾವಣೆಯ ಷಡ್ಯಂತ್ರ ರೂಪಿಸಿತ್ತು. ಚುನಾವಣೆಯ 48 ಗಂಟೆ ಮುಂಚೆಯವರೆಗೂ ಜಯ ತಮ್ಮ ಪಾಲಿಗಿತ್ತು ಎಂದರು.
ನಂತರ ಕಂದಾಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಸ್ವಪಕ್ಷೀಯರು, ಕಾಂಗ್ರೆಸ್ಸಿನೊಂದಿಗೆ ಕೈ ಜೋಡಿಸಿದ ಪರಿಣಾಮ ಜಯಸಿರಿ ತಮ್ಮಿಂದ ಜಾರಿತು ಎಂದು ವಿಷಾದಿಸಿದರು. ಉಪ ಚುನಾವಣೆಯ ಗೆಲುವಿನಿಂದಾಗಿ ಸಿಎಂ ಜನತೆಗೆ ಪಾಲಿಗೆ ಬ್ರಹ್ಮರಾಕ್ಷಸನಾಗಿ ಕಾಟ ನೀಡುತ್ತಿದ್ದಾನೆ ಎಂದು ಕಿಡಿಕಾಡಿದ ಪ್ರಸಾದ್,
ಕಾಂಗ್ರೆಸ್‌ನ ವಿವಿಧ ರಾಜ್ಯಗಳ ಸೋಲು ಗಿನ್ನಿಸ್ ದಾಖಲೆಗೆ ದಾಖಲಾಗುತ್ತದೆ ಎಂದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಟೀಕಿಸುವ ಮೊದಲು ನೆಹರು ವಂಶ ತಲೆ ಮಾರುಗಳ ಕಾಲ ಪ್ರತಿನಿಧಿಸುತ್ತಿದ್ದ ಅಲ್ಲಿ ಪಕ್ಷದ ಸ್ಥಿತಿ ಏನಾಗಿದೆ ಎಂಬುವುದನ್ನು ಅರಿತು ಮಾತನಾಡಿ ಎಂದು ಪ್ರಸಾದ್ ಸಿದ್ದರಾಮಯ್ಯ ಅವರನ್ನು ಟಿಕೀಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.