ದೇಗುಲಗಳಲ್ಲಿ ವಿಜೃಂಭಣೆಯ ಗ್ರಹಣ ಶಾಂತಿ
Team Udayavani, Jul 29, 2018, 12:24 PM IST
ಮೈಸೂರು: ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಾಡದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ತಿ.ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದ ದೇವಸ್ಥಾನದ ಶುದ್ಧಿ ಕಾರ್ಯ ಹಾಗೂ ಚಂದ್ರಗ್ರಹಣ ಶಾಂತಿ ಹೋಮ ನಡೆಸಲಾಯಿತು.
ಚಾಮುಂಡೇಶ್ವರಿ ದೇವಸ್ಥಾನದ ಬಾಗಿಲನ್ನು ಶನಿವಾರ ಬೆಳಗ್ಗೆ 6ಗಂಟೆಗೆ ತೆರೆದು ಶುದ್ಧಿ ಕಾರ್ಯದ ನಂತರ ದೇವಸ್ಥಾನದ ಪ್ರಧಾನ ಆಗಮಿಕರಾದ ಶಶಿಶೇಖರ ದೀಕ್ಷಿತ್‌ರ ನೇತೃತ್ವದಲ್ಲಿ ಗ್ರಹಣ ಶಾಂತಿ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಯಿತು.
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಶುಕ್ರವಾರ ರಾತ್ರಿ 11.54ರ ಗ್ರಹಣ ಸ್ಪರ್ಶ ಕಾಲಕ್ಕೆ ಶ್ರೀಕಂಠೇಶ್ವರನಿಗೆ ಅಭಿಷೇಕ ಮಾಡಿ ದೇವಾಲಯದ ಬಾಗಿಲನ್ನು ಮುಚ್ಚಲಾಗಿತ್ತು. ಶನಿವಾರ ಬೆಳಗ್ಗೆ 8ಗಂಟೆಗೆ ಬಾಗಿಲನ್ನು ತೆರೆದು ಶುದ್ಧಿ ಕಾರ್ಯದ ಬಳಿಕ ಸಾರ್ವಜನಿಕರಿಗೆ ದೇಗುಲಕ್ಕೆ ಪ್ರವೇಶ ನೀಡಲಾಯಿತು.
ತಿ.ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಬಾಗಿಲನ್ನು ಶನಿವಾರ ಬೆಳಗ್ಗೆ 8ಗಂಟೆಗೆ ತೆರೆದು ಶುದ್ಧಿ ಕಾರ್ಯ, ಅಭಿಷೇಕ, ಅರ್ಚನೆ ನಂತರ ಮಧ್ಯಾಹ್ನ 12ಗಂಟೆ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು.
ಮೈಸೂರು ನಗರದ ಇರ್ವಿನ್ ರಸ್ತೆಯ ಶ್ರೀಪಂಚಮುಖೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾದ ವಿದ್ವಾನ್ ಎಸ್.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ 8ಗಂಟೆಗೆ ಬಾಗಿಲು ತೆರೆದು ಶುದ್ಧಿ ಕಾರ್ಯದ ನಂತರ ಬೆಳಗ್ಗೆ 10 ಗಂಟೆಯಿಂದ ಸಾಮೂಹಿಕವಾಗಿ ಗ್ರಹಣ ಶಾಂತಿ ಹೋಮ ಮಾಡಿ, ಭಕ್ತಾದಿಗಳಿಗೆ ಪ್ರತ್ಯೇಕವಾಗಿ ಸಂಕಲ್ಪ ಮಾಡಿಸಲಾಯಿತು. ಮಧ್ಯಾಹ್ನ 12ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಶಿವರಾಂಪೇಟೆಯ ಶ್ರೀ ತ್ರಿಪುರ ಭೈರವಿ ಮಠದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ಹರೀಶ್ ಭಾರದ್ವಾಜ್ ನೇತೃತ್ವದಲ್ಲಿ ಬೆಳಗ್ಗೆ 8 ರಿಂದ 9ಗಂಟೆವರೆಗೆ ಗ್ರಹಣ ಶಾಂತಿ ಹೋಮ ಹಾಗೂ ಸಂಕಲ್ಪ, 9.30 ರಿಂದ ಮಧ್ಯಾಹ್ನ 12ಗಂಟೆವರೆಗೆ ವಿಶೇಷ ಪೂಜೆ, ಹೋಮ ನಡೆಸಲಾಯಿತು.
ಮೈಸೂರು ನಗರದ ಅಗ್ರಹಾರದ 110 ಗಣಪತಿ ದೇವಸ್ಥಾನದಲ್ಲಿ ಆಗಮಿಕ ಡಾ.ಸುನೀಲ್ ಕುಮಾರ್ ಶಾಸ್ತ್ರೀ ಅವರ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ 7ಗಂಟೆಗೆ ಸಾಮೂಹಿಕ ಗ್ರಹಣ ಶಾಂತಿ ಹೋಮ ಮಾಡಲಾಯಿತು. ಗ್ರಹಣ ದೋಷವಿರುವ ನಕ್ಷತ್ರ-ರಾಶಿಯವರು ದೋಷ ಪರಿಹಾರಕ್ಕಾಗಿ ಈಶ್ವರ ದೇವಾಲಯಕ್ಕೆ ದೀಪಕ್ಕೆ ಎಣ್ಣೆ ತಂದು ಒಪ್ಪಿಸಿ, ದೇವರಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿದರು.
ಇನ್ನೂ ಕೆಲವರು ಬಿಳಿಬಟ್ಟೆಯಲ್ಲಿ ಅಕ್ಕಿ(ಚಂದ್ರ), ಚಿತ್ರದ ಬಟ್ಟೆಯಲ್ಲಿ ಹುರುಳಿ(ಕೇತು) ಧಾನ್ಯಗಳನ್ನು ದಾನ ಮಾಡಿದರು. ಆಸ್ತಿಕರು ಗ್ರಹಣ ಸ್ಪರ್ಶ ಕಾಲದಲ್ಲಿ ಸ್ನಾನ ಮಾಡಿ, ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿ, ದೇವರ ಸ್ತೋತ್ರ ಪಠಿಸಿ, ಗ್ರಹಣ ಮೋಕ್ಷದ ಕಾಲದ ನಂತರ ಮತ್ತೆ ಸ್ನಾನ ಮಾಡಿದರು.
ಸೆರೆಹಿಡಿದು ಸಂಭ್ರಮ: ಶತಮಾನದ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾದಿದ್ದ ಹಲವರು ಮಧ್ಯರಾತ್ರಿಯಲ್ಲಿ ಮೋಡಗಳ ಮರೆಯಲ್ಲಿ ಅಸ್ಪಷ್ಟವಾಗಿ ಗೋಚರಿಸಿದ ಚಂದ್ರಗ್ರಹಣವನ್ನು ಕಣ್ತುಂಬಿಕೊಂಡು, ಕ್ಯಾಮರಾ, ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.
ಜಾಗೃತಿ: ಗ್ರಹಣದಿಂದ ಯಾವುದೇ ತೊಂದರೆಯಾಗುವುದಿಲ್ಲ. ಇದೆಲ್ಲಾ ಮೂಢನಂಬಿಕೆ ಎಂದು ಪ್ರಜ್ಞಾವಂತರ ತಂಡವೊಂದು ಶುಕ್ರವಾರ ಮಧ್ಯರಾತ್ರಿ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಯೋಧ ಹೇಮಚಂದ್ ಅವರ ಸಮಾಧಿ ಎದುರು ಸಮಾವೇಶ ಗೊಂಡರು.
ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸು, ಮಾಜಿ ಮೇಯರ್ ಪುರುಷೋತ್ತಮ್, ಸೋಸಲೆ ಸಿದ್ದರಾಜು, ಭಾನು ಮೋಹನ್, ಸಾಹಿತಿ ಬನ್ನೂರು ಕೆ.ರಾಜು ಮೊದಲಾದವರು ಪಾಲ್ಗೊಂಡರು. ಗಾಯಕ ಅಮ್ಮಾ ರಾಮಚಂದ್ರ ತಂಡ ಜಾಗೃತಿ ಗೀತೆಗಳನ್ನು ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.