ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಪತನ
Team Udayavani, Mar 13, 2017, 12:54 PM IST
ನಂಜನಗೂಡು: ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಪತನವಾಗಿ ವಿಧಾನಸಭೆಗೆ ಚುನಾವಣೆ ಎದುರಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜಾÂಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದರು.
ಭಾನುವಾರ ತಾಲೂಕಿನ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದರ ಪರ ಚುನಾವಣೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಸರ್ಕಾರ ಅಭಿವೃದ್ಧಿ ಮರೆತು ಕೇವಲ ಭ್ರಷ್ಟಾಚಾರ ನಡೆಸಿ ಖಜಾನೆ ಲೂಟಿಯಲ್ಲಿ ತೊಡಿಗಿದೆ. ಈ ಕುರಿತು ಸಿಬಿಐ ತನಿಖೆ ಆರಂಭವಾದರೆ ತಕ್ಷಣ ರಾಜ್ಯ ಸರ್ಕಾರ ಕುಸಿದು ಬೀಳಲಿದೆ. ಹಾಗಾ ದರೆ ಆರೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸ ಬೇಕಾಗುತ್ತದೆ ಎಂದು ಹೇಳಿದರು.
ಗೌರವದ ಪ್ರಶ್ನೆ: ನಂಜನಗೂಡು ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ನಿರಂಜನಕುಮಾರರ ಗೆಲುವು ತಮ್ಮ ಗೌರವದ ಪ್ರಶ್ನೆಯಾಗಿದೆ. ಕಾಂಗ್ರೆಸ್‌ನ ಅಪಪ್ರಚಾರಕ್ಕೆ ಕಿವಿಗೊಡದೆ ಶ್ರೀನಿವಾಸ್ ಪ್ರಸಾದರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ ಯಡಿಯೂರಪ್ಪ, ಕಾಂಗ್ರೆಸ್‌ನಲ್ಲಿ ಅವಮಾನಿತರಾಗಿದ್ದ ಶ್ರೀನಿವಾಸ್‌ಪ್ರಸಾದರನ್ನು ತಾವೇ ಬಿಜೆಪಿಗೆ ಕರೆತಂದು ಚುನಾವಣೆಗೆ ನಿಲ್ಲಿಸಿದ್ದಾಗಿ ಘೋಷಿಸಿದ ಯಡಿಯೂರಪ್ಪ, ಈ ನಿಮ್ಮ ಯಡಿಯೂರಪ್ಪ 2018ರಲ್ಲಿ ಮುಖ್ಯಮಂತ್ರಿ ಯಾಗಬೇಕಾದರೆ ಈ ಚುನಾವಣೆಯಲ್ಲಿ ಶ್ರೀನಿವಾಸ್‌ಪ್ರಸಾದ್ ಗೆಲ್ಲಲೇ ಬೇಕು ಎಂದು ಹೇಳಿದರು.
ಪ್ರಸಾದರವರು ಬಿಜೆಪಿ ಸೇರಿದ ಮೇಲೆ ಬಹಳಷ್ಟು ನಾಯಕರು ಬಿಜೆಪಿ ಸೇರುವ ಕುರಿತು ತಮ್ಮೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ರೈತರ ಸಾಲ ಮನ್ನಾ, ಹಾಲಿಗೆ ಪೋ›ತ್ಸಾಹಧನ, ಉಚಿತ ವಿದ್ಯುತ್ ನೀಡಿದವರು ಈ ಯಡಿಯೂರಪ್ಪನೇ ಅಥವಾ ಸಿದ್ದ ರಾಮಯ್ಯನವರೇ ಎಂದು ಸಭಿಕರನ್ನು ಪ್ರಶ್ನಿಸಿದ ಯಡಿಯೂರಪ್ಪ, ನನ್ನ 150 ಮಿಷನ್ ಕನಸು ನನಸಾಗಬೇಕಾದರೆ ಈ ಉಪಚುನಾವಣೆಯಲ್ಲಿ ನೀವು ಕಮಲವನ್ನು ಅರಳಿಸಿ ಕೊಡಬೇಕು ಎಂದು ಅವರು ಮನವಿ ಮಾಡಿದರು.
ಸುಳ್ಳು ಕೇಸು ದಾಖಲಿಸಿದವರಿಗೆ ಮತ ನೀಡುತ್ತೀರಾ? ರಾಜಕೀಯ ದ್ವೇಷಕ್ಕೆ ತಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿ ನಿಮ್ಮ ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ ಕಾಂಗ್ರೆಸ್ ಪಕ್ಷವನ್ನು ನೀವು ಬೆಂಬಲಿಸುತ್ತೀರಾ ಎಂದು ಭಾವುಕರಾದ ಯಡಿಯೂರಪ್ಪ, ನಾವು ಡೈರಿ ಹಗರಣವನ್ನು ಬಯಲಿಗೆಳೆದ ಮೇಲೆ ಈಗ ಮತ್ತೆ ಹಳೆ ಕೇಸುಗಳಿಗೆ ಜೀವ ನೀಡುವುದಾಗಿ ಸಿದ್ದರಾಮಯ್ಯ ತಮ್ಮನ್ನು ಬ್ಲಾಕ್‌ವೆುàಲ್ ಮಾಡುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆಲ್ಲಾ ಜಗ್ಗುವವ ನಾನಲ್ಲ ಎಂದರು.
90000 ಕೋಟಿ ಸಾಲವೇ ಸಿದ್ದು ಸಾಧನೆ: ಸಿದ್ದರಾಮಯ್ಯನವರ ಸರ್ಕಾರದ ಸಾಧನೆ ಎಂದರೆ 90 ಸಾವಿರ ಕೋಟಿ ರೂ. ಸಾಲ ಮಾಡಿರುವುದು. ಇನ್ನಾರು ತಿಂಗಳಲ್ಲಿ ಆ ಸಾಲ ಲಕ್ಷ ಕೋಟಿ ರೂ. ಆಗುತ್ತದೆ. ಅದೇ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಮಹಾಸಾಧನೆ ಎಂದು ಟೀಕಿಸಿದ ಯಡಿಯೂರಪ್ಪ, ನಾಲ್ಕು ವರ್ಷದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರ ಪರಿಹಾರವಾಗಿ ನೀಡಿದ 4068 ಕೋಟಿ ರೂ. ಏನಾಯಿತು ಮುಖ್ಯಮಂತ್ರಿಗಳೇ,
ಯಾವ ರೈತರಿಗೆ ಬರ ಪರಿಹಾರ ನೀಡಿದ್ದೀರಿ ಎಂದು ಪ್ರಶ್ನಿಸಿದ ಅವರು, ತಮ್ಮ ಅವಧಿಯಲ್ಲಿ ಅಂದಿನ ಕೇಂದ್ರ ಸರ್ಕಾರ ಕೇವಲ 970 ಕೋಟಿ ರೂ. ಮಾತ್ರ ಬರಪರಿಹಾರ ನೀಡಿತ್ತು. ಆದರೂ ನಾವು ರೈತರ ಸಾಲ ಮನ್ನಾ ಮಾಡಲಿಲ್ಲವೇ? ನೀವೇಕೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ರೈತರ ಸಹಕಾರಿ ಸಾಲ ಮನ್ನಾ ಮಾಡದಿದ್ದರೆ ಬರುವ ವಿಧಾನಸಭಾ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಯಡಯೂರಪ್ಪ ಎಚ್ಚರಿಕೆ ನೀಡಿದರು.
ರಕ್ತದಲ್ಲಿ ಬರೆದುಕೊಡುವೆ: ತಾವು ನಂಬಿಕೆ ದ್ರೋಹಿ ಅಲ್ಲಾ, ಯಾವುದೇ ಕಾರಣಕ್ಕೂ ಶ್ರೀನಿವಾಸಪ್ರಸಾದರ ಗೌರವ, ಹಿರಿತನಕ್ಕೆ ಬಿಜೆಪಿಯಲ್ಲಿ ದಕ್ಕೆಯಾಗುವುದಿಲ್ಲ ಎಂದು ಇಲ್ಲಿಯೇ ರಕ್ತದಲ್ಲಿ ಬರೆದು ಕೊಡುವುದಾಗಿ ಘೋಷಿಸಿದ ಯಡಿಯೂರಪ್ಪ, ಪ್ರಸಾದರನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯದೇ ಕಮಲದ ಗುರುತಿಗೆ ಮತ ನೀಡಬೇಕು. ಈ ಎರಡು ಉಪಚುನಾವಣೆಗೆ ಉಸ್ತುವಾರಿಗಳಾಗಿ ಮಾಜಿ ಸಚಿವರಾದ ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆಯವರನ್ನು ನೇಮಿಸಿರುವುದಾಗಿ ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.